ETV Bharat / state

ಚಿಕ್ಕಮಗಳೂರು: 88 ಲಕ್ಷ ಮೌಲ್ಯದ ಕಾಪರ್​ ಸ್ಕ್ರಾಪ್​​ ಕಳ್ಳತನ: ಆರೋಪಿಗಳ ಬಂಧನ - COPPER SCRAP THEFT

ಸುಮಾರು 16,320. ಕೆ.ಜಿ. ಕಾಪರ್​ ಸ್ಕ್ರಾಪ್​​ ಕಳ್ಳತನ ಮಾಡಿದ್ದ ಮೂವರನ್ನು ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

CHIKKAMAGALURU  ಕಾಪರ್​ ಸ್ಕ್ರಾಪ್​​ ಕಳ್ಳತನ  COPPER SULFATE  ಚಿಕ್ಕಮಗಳೂರು
ಚಿಕ್ಕಮಗಳೂರು: 88 ಲಕ್ಷ ಮೌಲ್ಯದ ಕಾಪರ್​ ಸ್ಕ್ರಾಪ್​​ ಕಳ್ಳತನ: ಆರೋಪಿಗಳ ಬಂಧನ (ETV Bharat)
author img

By ETV Bharat Karnataka Team

Published : Dec 26, 2024, 9:13 AM IST

ಚಿಕ್ಕಮಗಳೂರು: ಜಿಲ್ಲೆಯ ನಗರ ಸೇರಿದಂತೆ ಹಾಗೂ ಹೊರ ವಲಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇದರ ಬೆನ್ನಲ್ಲೇ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಹಾಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ರಾಂಪುರದಲ್ಲಿರುವ ತಮ್ಮ ಮಾಲೀಕತ್ವದ ಮೈಲುತುತ್ತು (ಕಾಪರ್ ಸಲ್ಫೇಟ್) ತಯಾರಿಕಾ ಘಟಕದಲ್ಲಿ ಕೆಲಸವನ್ನು ಮಾಡುತ್ತಿದ್ದ ಇಬ್ಬರು ಸುಮಾರು 16,320. ಕೆ.ಜಿಯಷ್ಟು ಕಾಪರ್​ ಸ್ಕ್ರಾಪ್​ನ್ನು ಕಳ್ಳತನ ಮಾಡಿದ್ದಾರೆ ಎಂದು ಪ್ರಭಾಕರ್ ಎಂಬುವವರು ದೂರು ನೀಡಿದ್ದರು.

ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿದ ಜಿಲ್ಲಾ ಪೊಲೀಸ್​ ಇಲಾಖೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿ ತಲೆ ಮರೆಸಿಕೊಂಡಿದ್ದ ಆರೋಪಿಗಳಾದ ಸಿಂದಗಿ ತಾಲೂಕಿನ ರಾಜಕುಮಾರ, ಗೌರೀಶ, ಹುಬ್ಬಳ್ಳಿಯ ಮಹಮ್ಮದ್ ಜುನೈದ್​ ಇವರನ್ನು ಬಂಧಿಸಲಾಗಿದೆ.

ಬಂಧಿತರಿಂದ 88,21,750/-ರೂ ಮೌಲ್ಯದ 12,425 ಕೆ.ಜಿ ಕಾಪರ್​ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಒಮಿನಿ ಆಂಬ್ಯುಲೆನ್ಸ್​ ಮತ್ತು ಅಶೋಕ್ ಲೇಲ್ಯಾಂಡ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಈ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳನ್ನು ಮೇಲಧಿಕಾರಿಗಳು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಜಾಮೀನು ಕೊಡಿಸಲು ಹೈಕೋರ್ಟ್ ಜಸ್ಟಿಸ್​ ಹೆಸರು ದುರ್ಬಳಕೆ ಆರೋಪ: ಮಹಿಳಾ ನ್ಯಾಯವಾದಿ ವಿರುದ್ಧ ಎಫ್ಐಆರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.