ದೇಶಭಕ್ತಿಯ ಸಂದೇಶದೊಂದಿಗೆ ಅದ್ಧೂರಿ ಗಣರಾಜ್ಯೋತ್ಸವ...
🎬 Watch Now: Feature Video
ಮೈಸೂರು ಜಿಲ್ಲಾಡಳಿತದಿಂದ 71 ನೇ ಗಣರಾಜ್ಯೋತ್ಸವವನ್ನು ದೇಶಭಕ್ತಿಯ ಸಂದೇಶದೊಂದಿಗೆ ಅದ್ಧೂರಿಯಾಗಿ ಭಾನುವಾರ ನೆರವೇರಿಸಲಾಯಿತು. ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಧ್ವಜಾರೋಹಣ ನೆರವೇರಿಸಿ ಮೈದಾನದ ಆವರಣದಲ್ಲಿದ್ದ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿವಿಧ ಪೊಲೀಸ್ ತುಕಡಿಗಳು ಹಾಗೂ ವಿದ್ಯಾರ್ಥಿಗಳ 24 ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.