ETV Bharat / technology

ಕುಟುಂಬಸಮೇತ ಟಿವಿ ನೋಡ್ತಿದ್ದೀರಾ? ಈ ಫೀಚರ್‌ನಿಂದ ವಯಸ್ಕರ ದೃಶ್ಯಗಳ​ ಭಯವಿಲ್ಲ - JIO TV PLUS NEW BLUR FEATURE

ನೀವು ಮನೆಯಲ್ಲಿ ಕುಟುಂಬ ಸದಸ್ಯರ ಜೊತೆ ಟಿವಿ ನೋಡ್ತಿದ್ದೀರಾ?. ಇಂಥ ಸಂದರ್ಭದಲ್ಲಿ ಅಡಲ್ಟ್​ ಸೀನ್​ಗಳು(ವಯಸ್ಕರ ದೃಶ್ಯಗಳು) ಬಂದಾಗ ಮುಜುಗರವಾಗುತ್ತದೆಯೇ? ಹಾಗಾದ್ರೆ, ನಿಮಗೆ ಇಲ್ಲೊಂದು ಉಪಾಯವಿದೆ.

HOW TO ACTIVATE JIO TV PLUS  JIO TV PLUS AI CENSOR FEATURE  JIO TV PLUS NEW FEATURE  JIO TV PLUS
ಜಿಯೋಟಿವಿ ಪ್ಲಸ್ (Jio.com)
author img

By ETV Bharat Tech Team

Published : Nov 8, 2024, 12:53 PM IST

JioTV+ New Feature to Hide Adult Scenes: ಕೆಲವರು ಒಂಟಿಯಾಗಿ ಸಿನಿಮಾ ಅಥವಾ ಟಿವಿ ಕಾರ್ಯಕ್ರಮವನ್ನು ವೀಕ್ಷಿಸಲು ಇಷ್ಟಪಟ್ಟರೆ, ಇನ್ನು ಕೆಲವರು ಕುಟುಂಬದೊಂದಿಗೆ ವೀಕ್ಷಿಸುತ್ತಾರೆ. ಆದರೆ ಇಂದಿನ ಕಾಲಘಟ್ಟದಲ್ಲಿ ಕುಟುಂಬಸಮೇತ ಟಿವಿ ನೋಡುವುದಕ್ಕೂ ಸ್ವಲ್ಪ ಧೈರ್ಯ ಬೇಕು. ಯಾಕೆಂದರೆ ಥಟ್ಟನೆ ಅಡಲ್ಟ್ ಸೀನ್​ಗಳು ಬಂದರೆ ತುಂಬಾ ಮುಜುಗರವಾಗುತ್ತದೆ. ಇಂತಹ ಸಮಯದಲ್ಲಿ ಚಿಕ್ಕ ಮಕ್ಕಳಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಹೇಳಬೇಕಿಲ್ಲ. ಇಂಥ ಸನ್ನಿವೇಶಗಳನ್ನು ತಪ್ಪಿಸಲು JioTV+ ಹೊಸ ವೈಶಿಷ್ಟ್ಯವನ್ನು ತಂದಿದೆ.

Jio TV Plus ತಂದಿರುವ ಈ ವೈಶಿಷ್ಟ್ಯದ ಸಹಾಯದಿಂದ ನೀವು ಈಗ ನಿಮ್ಮ ಕುಟುಂಬದೊಂದಿಗೆ ಆರಾಮವಾಗಿ ಟಿವಿ ವೀಕ್ಷಿಸಬಹುದು. ಎಐ ಸಹಾಯದಿಂದ ಟಿವಿ ನೋಡುವಾಗ ಈ ವೈಶಿಷ್ಟ್ಯವು ವಯಸ್ಕರ ದೃಶ್ಯಗಳನ್ನು ಸ್ವಯಂಚಾಲಿತವಾಗಿ ಬ್ಲರ್​ ಮಾಡುತ್ತದೆ. ಅಲ್ಲದೆ, 'ಎಐ ಸೆನ್ಸಾರ್​' ಹೆಸರಿನಲ್ಲಿ ತಂದಿರುವ ಇದನ್ನು ಅಗತ್ಯವಿದ್ದಾಗ ಆಡಿಯೋ ಸಹ ಮ್ಯೂಟ್ ಮಾಡಬಹುದು. ಗ್ರಾಹಕ ತಂತ್ರಜ್ಞಾನದ ಅನುಭವಿ ರಾಜೀವ್ ಮಖಾನಿ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.

ರಾಜೀವ್ ಮಖಾನಿ ಹೇಳುವಂತೆ, R-ರೇಟ್ ಅಥವಾ 18+ ವಿಷಯ ಪತ್ತೆಯಾದಾಗ ವೈಶಿಷ್ಟ್ಯವು ಸಂಪೂರ್ಣ ಸ್ಕ್ರೀನ್​ ಅನ್ನು ಬ್ಲರ್​ ಮಾಡುತ್ತದೆ. ಅಲ್ಲದೇ ಈ OTT ಅಪ್ಲಿಕೇಶನ್ ವಯಸ್ಕರ ದೃಶ್ಯಗಳಿರುವಾಗ ಅಗತ್ಯವಿದ್ದರೆ ಆಡಿಯೋವನ್ನೂ ಸಹ ಮ್ಯೂಟ್​ ಮಾಡುತ್ತದೆ.

Anti JioTV Plus: JioTV+ ಅಪ್ಲಿಕೇಶನ್ JioTV ಅಪ್ಲಿಕೇಶನ್‌ಗಿಂತ ಭಿನ್ನ. JioTV ಮೊಬೈಲ್ ಆಧರಿತ ವೇದಿಕೆಯಾಗಿದೆ. ಇದು Android, iOSನಲ್ಲಿ ಲಭ್ಯ. JioTV+ ಎನ್ನುವುದು ಜಿಯೋ ಸೆಟ್-ಟಾಪ್-ಬಾಕ್ಸ್‌ಗಳಲ್ಲಿ ಮೊದಲೇ ಸ್ಥಾಪಿಸಲಾದ ಕಂಟೆಂಟ್ ಅಗ್ರಿಗೇಟರ್ ಪ್ಲಾಟ್‌ಫಾರ್ಮ್ ಆಗಿದೆ. ಆಂಡ್ರಾಯ್ಡ್ ಟಿವಿ, ಆ್ಯಪಲ್ ಟಿವಿ, ಅಮೆಜಾನ್ ಫೈರ್ ಒಎಸ್ ಸೇರಿದಂತೆ ಇತರ ಸ್ಮಾರ್ಟ್ ಟಿವಿ ಪ್ಲಾಟ್‌ಫಾರ್ಮ್‌ಗಳಿಗೂ ಅಪ್ಲಿಕೇಶನ್ ಲಭ್ಯವಿದೆ.

ಆದರೆ ಇದು JioFiber, JioAirFiber ಗ್ರಾಹಕರಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. JioTV+ ಅಪ್ಲಿಕೇಶನ್ Disney+ Hotstar, Amazon Prime Video, SonyLIV, Zee5 ಸೇರಿದಂತೆ 14 OTT ಪ್ಲಾಟ್‌ಫಾರ್ಮ್‌ಗಳಿಂದ ವಿಷಯವನ್ನು ನೀಡುತ್ತದೆ. 800ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳನ್ನೂ ಸಹ ಹೊಂದಿದೆ. ಲಭ್ಯವಿರುವ OTT ಚಂದಾದಾರಿಕೆಗಳು ನಿಮ್ಮ JioFiber ಯೋಜನೆಯನ್ನು ಅವಲಂಬಿಸಿರುತ್ತದೆ.

ಸ್ಮಾರ್ಟ್ ಟಿವಿಯಲ್ಲಿ JioTV+ ಅನ್ನು ಪ್ರವೇಶಿಸುವುದು ಹೇಗೆ?:

  • ಸ್ಮಾರ್ಟ್ ಟಿವಿಯಲ್ಲಿ JioTV+ ಪ್ರವೇಶಿಸಲು ನೀವು ಮೊದಲು ಸ್ಮಾರ್ಟ್ ಟಿವಿ ಆಪ್ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕಾಗುತ್ತದೆ.
  • ಅದರ ನಂತರ ನಿಮ್ಮ JioFiber ಅಥವಾ JioAirFiber ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ.
  • ನಿಮ್ಮ ಫೋನ್‌ಗೆ ಕಳುಹಿಸಲಾದ ಒನ್​ ಟೈಂ ಪಾಸ್‌ವರ್ಡ್ (OTP) ನಮೂದಿಸಿದ ತಕ್ಷಣ ಅಪ್ಲಿಕೇಶನ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ಅಪ್ರಾಪ್ತರ ವಯಸ್ಸಿನ ನಿಖರತೆ ಕಂಡುಹಿಡಿಯಲು AI ಚಾಲಿತ ಹೊಸ ಟೂಲ್​ ತರ್ತಿದೆ ಮೆಟಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.