ETV Bharat / international

ಫುಟ್ಬಾಲ್​ ಪಂದ್ಯ, ಆಮ್‌ಸ್ಟರ್‌ಡ್ಯಾಮ್​ನಲ್ಲಿ ಗಲಭೆ: ಐವರು ಆಸ್ಪತ್ರೆಗೆ ದಾಖಲು, 62 ಮಂದಿ ಬಂಧನ

ನೆದರ್ಲೆಂಡ್​ ದೇಶದ ಆಮ್‌ಸ್ಟರ್‌ಡ್ಯಾಮ್​ನಲ್ಲಿ ನಡೆದ ಗಲಭೆಯಲ್ಲಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಘಟನೆ ಸಂಬಂಧ 62 ಜನರನ್ನು ಬಂಧಿಸಲಾಗಿದೆ.

ಆಮ್‌ಸ್ಟರ್‌ಡ್ಯಾಮ್​ನಲ್ಲಿ ಗಲಭೆ
ಆಮ್‌ಸ್ಟರ್‌ಡ್ಯಾಮ್​ನಲ್ಲಿ ಗಲಭೆ (AP)
author img

By ETV Bharat Karnataka Team

Published : 3 hours ago

ಆಮ್‌ಸ್ಟರ್‌ಡ್ಯಾಮ್(ನೆದರ್ಲೆಂಡ್): ಯುರೋಪ್​​ ಲೀಗ್ ಫುಟ್‌ಬಾಲ್ ಪಂದ್ಯದ ನಂತರ ಸಿಟಿ ಸೆಂಟರ್‌ನಲ್ಲಿ ಗುರುವಾರ ರಾತ್ರಿ ನಡೆದ ಗಲಭೆಯಲ್ಲಿ ಗಾಯಗೊಂಡ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಘಟನೆ ಸಂಬಂಧ 62 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ತನಿಖೆ ಪ್ರಾರಂಭವಾಗಿದೆ. ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವ ಬಗ್ಗೆ ಮತ್ತು ಕೆಲವರು ಕಾಣೆಯಾಗಿದ್ದಾರೆ ಎಂಬ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಆದರೆ ಇದು ಇನ್ನು ದೃಢಪಟ್ಟಿಲ್ಲ. ಈ ವಿಷಯ ಬಗ್ಗೆಯೂ ತನಿಖೆ ಮುಂದುವರೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನೆದರ್ಲೆಂಡ್ಸ್‌ನ 'ಎಎಫ್‌ಸಿ ಅಜಕ್' ತಂಡವು ಮಕ್ಕಾಡಿ ಟೆಲ್ ಅವಿವ್ ಎದುರು 5-0 ಗೋಲುಗಳ ಅಂತರದಿಂದ ಜಯಿಸಿತ್ತು. ಅದಾದ ನಂತರ, ಘಟನೆ ನಡೆದಿದೆ. ಇಸ್ರೇಲಿ ಮತ್ತು ಡಚ್ ನಾಯಕರು, "ಯಹೂದಿ ವಿರೋಧಿ" ಹಿಂಸಾಚಾರವನ್ನು ಖಂಡಿಸಿದ್ದಾರೆ.

ಇಸ್ರೇಲ್ ನಾಗರಿಕರ ಮೇಲಿನ ದಾಳಿಯನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಂಡಿಸಿದ್ದಾರೆ. ದಾಳಿ ನಡೆಸಿದವರ ವಿರುದ್ಧ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿರುವ ಅವರು, ತನ್ನ ದೇಶದ ನಾಗರಿಕರನ್ನು ಕರೆತರಲು ಎರಡು ವಿಮಾನಗಳನ್ನು ಆಮ್‌ಸ್ಟರ್‌ಡ್ಯಾಮ್​ಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: 'ಧೈರ್ಯಶಾಲಿ' ಟ್ರಂಪ್​ರೊಂದಿಗೆ ಮಾತುಕತೆಗೆ ಸಿದ್ಧ: ರಷ್ಯಾ ಅಧ್ಯಕ್ಷ ಪುಟಿನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.