ಬೈಂದೂರು: ಮನೆಯಂಗಳದಲ್ಲಿ ಮಲಗಿದ್ದ ನಾಯಿ ಹೊತ್ತೊಯ್ದ ಚಿರತೆ: ಗ್ರಾಮಸ್ಥರಲ್ಲಿ ಭಯದ ವಾತಾವರಣ - LEOPARD ATTACK IN BYNDURU
🎬 Watch Now: Feature Video


Published : Nov 8, 2024, 2:50 PM IST
ಉಡುಪಿ: ಚಿರತೆಯೊಂದು ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಮೇಲೆ ದಾಳಿ ನಡೆಸಿ, ಹೊತ್ತೊಯ್ದ ಘಟನೆ ಬೈಂದೂರು ತಾಲೂಕಿನ ಕಟ್ ಬೆಲ್ತೂರು ಗ್ರಾಪಂ ವ್ಯಾಪ್ತಿಯ ದೇವಳಕುಂದ ಎಂಬಲ್ಲಿ ಸೋಮವಾರ ನಡೆದಿದೆ.
ಚಿರತೆ ನಾಯಿಯನ್ನು ಹೊತ್ತೊಯ್ಯುವ ಭಯಾನಕ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೇವಳಕುಂದ ಗ್ರಾಮದ ಜಾಡಿಕ್ರಾಸ್ನ ಸುಧೀರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ ಹೊಂಚು ಹಾಕಿಕೊಂಡು ಬರುವ ಚಿರತೆ ಅಂಗಳದಲ್ಲಿ ಮಲಗಿದ್ದ ನಾಯಿಯ ಮೇಲೆ ಏಕಾಏಕಿ ದಾಳಿ ನಡೆಸಿದೆ. ಗಾಢ ನಿದ್ದೆಯಲ್ಲಿದ್ದ ನಾಯಿಗೆ ಚಿರತೆಯ ಬಾಯಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕ್ಷಣಾರ್ಧದಲ್ಲಿ ಚಿರತೆ ನಾಯಿಯನ್ನು ಹೊತ್ತುಕೊಂಡು ಕಾಡಿನೊಳಗೆ ಓಡಿ ಹೋಗಿರುವುದು ಸೆರೆಯಾಗಿದೆ.
ಚಿರತೆ ಕಾಣಿಸಿಕೊಂಡ ಕಾರಣ ದೇವಳಕುಂದ ಗ್ರಾಮಸ್ಥರಿಗೆ ಆತಂಕ ಶುರುವಾಗಿದೆ. ತಕ್ಷಣವೇ ಅಧಿಕಾರಿಗಳು ಬೋನ್ ಇಟ್ಟು ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ಟ್ರಂಚ್ಗೆ ಬಿದ್ದು ಕಾಡಾನೆ ಸಾವು - ಕಳ್ಳ ಸಾಗಣೆದಾರನಿಂದ ಚಿರತೆಯ 16 ಉಗುರು, 3 ಹಲ್ಲು ವಶಕ್ಕೆ