ಫುಟ್‌ಬಾಲ್ ಟೂರ್ನಮೆಂಟ್‌ನಲ್ಲಿ ಕುಸಿದ ಪ್ರೇಕ್ಷಕರ ಗ್ಯಾಲರಿ : ವಿಡಿಯೋ ವೈರಲ್ - AUDIENCE GALLERY COLLAPSED
🎬 Watch Now: Feature Video


Published : Feb 18, 2025, 12:33 PM IST
ಮಂಗಳೂರು : ನಗರದ ಎಮ್ಮೆಕೆರೆ ಬಳಿ ನಡೆದ ಫುಟ್‌ಬಾಲ್ ಟೂರ್ನಮೆಂಟ್‌ವೊಂದರಲ್ಲಿ ಪ್ರೇಕ್ಷಕರ ಗ್ಯಾಲರಿ ಏಕಾಏಕಿ ಕುಸಿದ ಲೈವ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ 8 ರಂದು ರಾತ್ರಿ ಎಮ್ಮೆಕೆರೆಯ ಮೈದಾನದಲ್ಲಿ ಬೋಳಾರ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ಫುಟ್‌ಬಾಲ್ ಟೂರ್ನಮೆಂಟ್ ನಡೆಯುತ್ತಿದ್ದಂತೆ ಒಂದು ಪಾರ್ಶ್ವದ ಗ್ಯಾಲರಿ ಏಕಾಏಕಿ ಸಂಪೂರ್ಣ ಕುಸಿದು ಬಿದ್ದಿದೆ. ಪರಿಣಾಮ ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕರು ಒಬ್ಬರ ಮೇಲೊಬ್ಬರಂತೆ ಬಿದ್ದಿದ್ದಾರೆ. ಗ್ಯಾಲರಿ ಬಿದ್ದ ಕೂಡಲೇ ಚಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಬಳಿಕ ನೇರ ಆಟದ ಮೈದಾನದ ಒಳಗೆ ನುಗ್ಗಿದ್ದಾರೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲರೂ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಗ್ಯಾಲರಿ ಬೀಳುವ ಲೈವ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ನಮ್ಮ ಮುಂದಿರುವ ದೊಡ್ಡ ಗುರಿ ಅದೊಂದೆ; ಪಾಕ್ ಉಪನಾಯಕನ ಹೇಳಿಕೆ ವೈರಲ್!
ಅದ್ಧೂರಿಯಾಗಿ ನಡೆದ ಕಂಬದ ರಂಗನಾಥ ಸ್ವಾಮಿ ಹೂವಿನ ರಥೋತ್ಸವ: ವಿಡಿಯೋ
ಬಿಳಿಗಿರಿ ಬನದ ರಸ್ತೆಬದಿ ಕಾದಾಡಿದ ಕರಡಿಗಳು : ಕಿತ್ತಾಟ ಕಂಡು ಮತ್ತೊಂದು ಜಾಂಬವಂತ ಸೈಲೆಂಟ್