ETV Bharat / sports

ಸಚಿನ್​ ತೆಂಡೂಲ್ಕರ್​ ದಾಖಲೆ ಮುರಿದ ರೋಹಿತ್​ ಶರ್ಮಾ - IND VS BAN

ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ರೋಹಿತ್​ ಶರ್ಮಾ, ಸಚಿನ್​ ತೆಂಡೂಲ್ಕರ್ ಅವರ​ ದಾಖಲೆ ಮುರಿದಿದ್ದಾರೆ.

ROHIT SHARMA  SACHIN TENDULKAR  IND VS BAN ROHIT SHARMA  ICC CHAMPIONS TROPHY 2025
ರೋಹಿತ್​ ಶರ್ಮಾ (AP)
author img

By ETV Bharat Sports Team

Published : Feb 20, 2025, 8:03 PM IST

Ind vs Ban: ಟೀಂ ಇಂಡಿಯಾದ ಆರಂಭಿಕ ಬ್ಯಾಟರ್​ ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಮತ್ತೊಂದು ದಾಖಲೆ ಬರೆದರು. ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಭಾಗವಾಗಿ ಭಾರತ ಮತ್ತು ಬಾಂಗ್ಲಾದೇಶ ನಡುವೆ ಇಂದು ದುಬೈನಲ್ಲಿ ಎರಡನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿರುವ ಬಾಂಗ್ಲಾ 228 ರನ್​ಗಳಿಸಿ ಆಲೌಟ್​ ಆಯಿತು. ಸದ್ಯ, ಈ ಗುರಿ ಬೆನ್ನತ್ತುತ್ತಿರುವ ಭಾರತ ಉತ್ತಮ ಆರಂಭ ಪಡೆದುಕೊಂಡಿದೆ.

ರೋಹಿತ್​ ಶರ್ಮಾ (41) ಮತ್ತು ಶುಭಮನ್​​ ಗಿಲ್​ (26*) ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. 9.5 ಓವರ್​ ಮುಕ್ತಾಯದ ವೇಳೆಗೆ 1 ವಿಕೆಟ್​ ಕಳೆದುಕೊಂಡು 69 ರನ್​ ಗಳಿಸಿರುವ ಭಾರತ ರನ್​ ಚೇಸ್​ ಮುಂದುವರೆಸಿದೆ.

ರೋಹಿತ್​ ದಾಖಲೆ: ಏಕದಿನ ಪಂದ್ಯದಲ್ಲಿ ವೇಗವಾಗಿ 11 ಸಾವಿರ ರನ್​ ಪೂರೈಸಿದೆ ವಿಶ್ವದ ಎರಡನೇ ಬ್ಯಾಟರ್​ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ಬರೆದಿದ್ದಾರೆ. ಶರ್ಮಾ 261 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಈ ಸಾಧನೆ ಮಾಡಿರುವ ವಿಶ್ವದಾಖಲೆ ವಿರಾಟ್​​ ಕೊಹ್ಲಿ ಹೆಸರಲ್ಲಿದೆ. ವಿಶ್ವಶ್ರೇಷ್ಠ ಬ್ಯಾಟರ್​ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 11,000 ರನ್​ ಪೂರ್ಣಗೊಳಿಸಲು 222 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. ಒಟ್ಟಾರೆ ಅವರು ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟರ್​ ಆಗಿದ್ದಾರೆ. ಈ ಪಂದ್ಯಕ್ಕೂ ಮುನ್ನ ರೋಹಿತ್​​ ಶರ್ಮಾ 10,987 ರನ್​ ಕಲೆಹಾಕಿದ್ದರು.

ಸಚಿನ್​ ದಾಖಲೆ ಬ್ರೇಕ್​: ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಏಕದಿನ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಲು 276 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. ಆದರೆ ರೋಹಿತ್​ ಇವರ ದಾಖಲೆಯನ್ನು ಮುರಿದಿದ್ದಾರೆ.

ಏಕದಿನ ಪಂದ್ಯದಲ್ಲಿ ವೇಗವಾಗಿ 11 ಸಾವಿರ ರನ್​ ಗಳಿಸಿದ ಆಟಗಾರರು:

  • ವಿರಾಟ್ ಕೊಹ್ಲಿ (ಭಾರತ) - 222 ಇನ್ನಿಂಗ್ಸ್‌
  • ರೋಹಿತ್ ಶರ್ಮಾ (ಭಾರತ) - 261
  • ಸಚಿನ್ ತೆಂಡೂಲ್ಕರ್ (ಭಾರತ) - 276
  • ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 286
  • ಸೌರವ್ ಗಂಗೂಲಿ (ಭಾರತ) - 288
  • ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) – 293

ಹೆಚ್ಚು ಸಿಕ್ಸ್​ರ ದಾಖಲೆ​: ಇದಕ್ಕೂ ಮೊದಲು ಇಂಗ್ಲೆಂಡ್​ ವಿರುದ್ಧ ಇತ್ತೀಚೆಗೆ ನಡೆದಿದ್ದ ಏಕದಿನ ಸರಣಿಯಲ್ಲಿ ರೋಹಿತ್​ ಶರ್ಮಾ ಸಿಕ್ಸರ್​ ದಾಖಲೆ ಬರೆದಿದ್ದರು. ಏಕದಿನ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸಿಕ್ಸರ್​ ಸಿಡಿಸಿದ ವಿಶ್ವದ ಎರಡನೇ ಬ್ಯಾಟರ್​ ಎನಿಸಿಕೊಂಡಿದ್ದರು. ಅಲ್ಲದೇ ಕ್ರಿಸ್​ ಗೇಲ್​ ಅವರ ದಾಖಲೆ ಮುರಿದು ಹಾಕಿದ್ದರು. ಸದ್ಯ ರೋಹಿತ್​ ಏಕದಿನ ಕ್ರಿಕೆಟ್​ನಲ್ಲಿ 331 ಸಿಕ್ಸರ್‌ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಪಾಕ್​ನ ಮಾಜಿ ಆಟಗಾರ ಶಾಯಿದ್​ ಆಫ್ರಿದಿ 351 ಸಿಕ್ಸರ್‌ಗಳೊಂದಿಗೆ ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ: ಅಕ್ಷರ್​ ಪಟೇಲ್​ಗೆ ಕೈ ಮುಗಿದು ಕ್ಷಮೆ ಕೇಳಿದ ರೋಹಿತ್ ಶರ್ಮಾ​: ಏನಾಯ್ತು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.