ETV Bharat / lifestyle

ಢಾಬಾ ಸ್ಟೈಲ್​ನ 'ಮಸಾಲಾ ಕಿಚಿಡಿ': ಭರ್ಜರಿ ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮ - MASALA KHICHDI RECIPE

Masala Khichdi Recipe: ಕಿಚಿಡಿ ಸೇವಿಸಿದರೆ ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಲಭಿಸುತ್ತವೆ. ಒಮ್ಮೆ ತಿಂದರೆ ಮತ್ತೆ ಮತ್ತೆ ಸೇವಿಸಬೇಕು ಎನಿಸುತ್ತದೆ. ಈಗ ಢಾಬಾ ಸ್ಟೈಲ್​ನ 'ಮಸಾಲಾ ಕಿಚಿಡಿ' ಸಿದ್ಧಪಡಿಸುವುದು ಹೇಗೆ ಎಂಬುದನ್ನು ತಿಳಿಯೋಣ.

MASALA KHICHDI  HOW TO MAKE MASALA KHICHDI  EASY AND HEALTHY KICHDI RECIPE  DABHA STYLE MASALA KHICHDI AT HOME
ಮಸಾಲಾ ಕಿಚಿಡಿ (ETV Bharat)
author img

By ETV Bharat Lifestyle Team

Published : Feb 20, 2025, 8:09 PM IST

Masala Khichdi Recipe: ಹಲವು ಜನರು ತಾವು ಸೇವಿಸುವಂತಹ ಅನ್ನ, ಬೇಳೆ ಸೇರಿಸಿ ರೆಡಿ ಮಾಡುವುದನ್ನೇ ಕಿಚಿಡಿ ಎಂದು ಭಾವಿಸುತ್ತಾರೆ. ಆದ್ರೆ, ರೈಸ್​​, ಬೇಳೆಕಾಳುಗಳು ಹಾಗೂ ತರಕಾರಿಗಳೊಂದಿಗೆ ಕಿಚಿಡಿ ತಯಾರಿಸಲಾಗುತ್ತದೆ. ಈ ಅಡುಗೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ವಿವಿಧ ಪ್ರಕಾರದ ಕಿಚಿಡಿ ರೆಡಿ ಮಾಡಬಹುದು.

ನೀವು ಕೂಡ ಇಲ್ಲಿಯವರೆಗೆ ಅನೇಕ ಬಗೆಯ ಪ್ರಯತ್ನಿಸಿರಬಹುದು. ಆದರೆ, ನಾವು ನಿಮಗಾಗಿ ಢಾಬಾ ಸ್ಟೈಲ್ ಮಸಾಲಾ ಕಿಚಿಡಿ ರೆಸಿಪಿಯನ್ನು ತಂದಿದ್ದೇವೆ. ಒಮ್ಮೆಯಾದರೂ ಈ ರೆಸಿಪಿಯನ್ನು ಟ್ರೈ ಮಾಡಿ ನೋಡಿ. ತುಂಬಾ ರುಚಿಕರವಾಗಿದ್ದು, ಜೊತೆಗೆ ಆರೋಗ್ಯಕ್ಕೆ ಒಳ್ಳೆಯದು. ಟೇಸ್ಟಿ ಹಾಗೂ ಆರೋಗ್ಯಕರ ಮಸಾಲಾ ಕಿಚಿಡಿಗೆ ಬೇಕಾಗುವ ಸಾಮಗ್ರಿಗಳೇನು? ಹೇಗೆ ತಯಾರಿಸಬೇಕೆಂದು ಅರಿತುಕೊಳ್ಳೋಣ.

MASALA KHICHDI  HOW TO MAKE MASALA KHICHDI  EASY AND HEALTHY KICHDI RECIPE  DABHA STYLE MASALA KHICHDI AT HOME
ಮಸಾಲಾ ಕಿಚಿಡಿ (freepik)

ಢಾಬಾ ಸ್ಟೈಲ್​ನ ಮಸಾಲಾ ಕಿಚಿಡಿಗೆ ಬೇಕಾಗುವ ಪದಾರ್ಥಗಳೇನು?:

  • ಅಕ್ಕಿ - 1 ಕಪ್
  • ತೊಗರಿ ಬೇಳೆ - ಅರ್ಧ ಕಪ್
  • ಹೆಸರು ಬೇಳೆ - ಅರ್ಧ ಕಪ್
  • ತುಪ್ಪ - 2 ಟೀಸ್ಪೂನ್
  • ಜೀರಿಗೆ - 1 ಟೀಸ್ಪೂನ್
  • ಇಂಗು - ಒಂದು ಚಿಟಿಕೆ
  • ಕಸೂರಿ ಮೇಥಿ - 1 ಟೀಸ್ಪೂನ್
  • ಈರುಳ್ಳಿ - 1
  • ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
  • ಅರಿಶಿನ - ಅರ್ಧ ಟೀಸ್ಪೂನ್
  • ಮೆಣಸಿನಕಾಯಿ - ಸಾಕಷ್ಟು
  • ಜೀರಿಗೆ ಪುಡಿ - ಟೀಸ್ಪೂನ್
  • ಕೊತ್ತಂಬರಿ ಪುಡಿ - ಒಂದು ಟೀಸ್ಪೂನ್
  • ಟೊಮೆಟೊ - 1
  • ಹಸಿರು ಬಟಾಣಿ - 3 ಟೀಸ್ಪೂನ್
  • ಕ್ಯಾರೆಟ್ - 1
  • ಆಲುಗಡ್ಡೆ - 1 (ಸಣ್ಣ ಗಾತ್ರ)
  • ಬೀನ್ಸ್ - 5
  • ಉಪ್ಪು - ರುಚಿಗೆ ಬೇಕಾಗುವಷ್ಟು
  • ಕೊತ್ತಂಬರಿ - 2 ಟೀಸ್ಪೂನ್

ಒಗ್ಗರಣೆಗೆ ಬೇಕಾಗುವ ಸಾಮಗ್ರಿ:

  • ತುಪ್ಪ - 2 ಟೀಸ್ಪೂನ್​
  • ಜೀರಿಗೆ - 1 ಟೀಸ್ಪೂನ್
  • ಇಂಗು - ಒಂದು ಚಿಟಿಕೆ
  • ಒಣಮೆಣಸಿನಕಾಯಿ - 2
  • ಖಾರದ ಪುಡಿ - 1 ಟೀಸ್ಪೂನ್

ಮಸಾಲಾ ಕಿಚಿಡಿ ತಯಾರಿಸುವ ವಿಧಾನ:

  • ಅಕ್ಕಿ, ತೊಗರಿ ಬೇಳೆ ಹಾಗೂ ಹೆಸರು ಬೇಳೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಸ್ವಚ್ಛವಾಗಿ ತೊಳೆಯಿರಿ. ಬಳಿಕ ಸಾಕಷ್ಟು ನೀರು ಸುರಿಯಿರಿ ಹಾಗೂ 10 ನಿಮಿಷಗಳ ಕಾಲ ನೆನೆಸಿ ಇಡಬೇಕು.
  • ಒಲೆ ಆನ್​ ಮಾಡಿ ಕುಕ್ಕರ್ ಇಟ್ಟು ಬಿಸಿಯಾದ ನಂತರ ತುಪ್ಪ ಹಾಕಿ. ಅದು ಕರಗಿ ಬಿಸಿಯಾದ ಬಳಿಕ ಜೀರಿಗೆ, ಇಂಗು, ಕಸೂರಿ ಮೇಥಿ, ತೆಳುವಾದ ಕಟ್​ ಮಾಡಿರುವ ಈರುಳ್ಳಿ ಹಾಕಿ ಚೆನ್ನಾಗಿ ವಾಸನೆ ಬರುವವರೆಗೆ ಫ್ರೈ ಮಾಡಬೇಕಾಗುತ್ತದೆ.
  • ಹೀಗೆ ಹುರಿದ ಬಳಿಕ ಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಬೇಕಾಗುತ್ತದೆ.
  • ಇದಾದಬಳಿಕ ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ ಮತ್ತು ಕೊತ್ತಂಬರಿ ಸೇರಿಸಿ ಹಾಗೂ ಎಲ್ಲವನ್ನೂ ಚೆನ್ನಾಗಿ ಮಿಕ್ಸ್​ ಮಾಡಿ. ಉತ್ತಮ ವಾಸನೆ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ.
  • ನಂತರ ತೆಳುವಾಗಿ ಕತ್ತರಿಸಿದ ಟೊಮೆಟೊ ಪೀಸ್​ಗಳನ್ನು ಹಾಕಬೇಕಾಗುತ್ತದೆ. ಇವೆಲ್ಲವೂ ಮೃದುವಾಗುವವರೆಗೆ ಬೇಯಿಸಿಕೊಳ್ಳಿ.
  • ಬಳಿಕ ಹಸಿರು ಬಟಾಣಿ, ಕ್ಯಾರೆಟ್, ಆಲೂಗಡ್ಡೆ, ಬೀನ್ಸ್​ ಪೀಸ್​ಗಳು, ಉಪ್ಪು ಸೇರಿಸಿ ಹಾಗೂ ಎಲ್ಲವನ್ನೂ ಸಂಯೋಜಿಸಲು ಚೆನ್ನಾಗಿ ಮಿಶ್ರಣ ಮಾಡಬೇಕಾಗುತ್ತದೆ. ಬಳಿಕ ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಬೇಕಾಗುತ್ತದೆ.
  • ನಂತರ ನೆನೆಸಿದ ಅಕ್ಕಿ ಮತ್ತು ಬೇಳೆಕಾಳುಗಳನ್ನು ಈ ಮಿಶ್ರಣ ಸೇರಿಸಿ. ಎರಡು ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಫ್ರೈ ಮಾಡಬೇಕಾಗುತ್ತದೆ.
  • ಬಳಿಕ ನಾಲ್ಕು ಕಪ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಬೇಕಾಗುತ್ತದೆ. ಈ ಹಂತದಲ್ಲಿ ಉಪ್ಪು ಸಾಕಾಗಿಯೇ ಎಂಬುದನ್ನು ಚೆಕ್​ ಮಾಡಿಕೊಳ್ಳಿ.
  • ಬಳಿಕ ಕುಕ್ಕರ್ ಮುಚ್ಚಳವನ್ನು ಮುಚ್ಚಿ ಹಾಗೂ ಮೂರು ಸೀಟಿಗಳು ಬರುವವರೆಗೆ ಬೇಯಿಸಬೇಕಾಗುತ್ತದೆ. ಬೇಯಿಸಿದ ನಂತರ ಮುಚ್ಚಳ ತೆಗೆದುಹಾಕಿ. ನಿಮಗೆ ಬೇಕಾದ ಸ್ಥಿರತೆಗೆ ಸ್ವಲ್ಪ ನೀರು ಸೇರಿಸಿ. ನಂತರ ಒಲೆಯನ್ನು ಕಡಿಮೆ ಉರಿಯಲ್ಲಿ ಇರಿಸಿ.
  • ಇದೀಗ ಇನ್ನೊಂದು ಒಲೆ ಮೇಲೆ ಪ್ಯಾನ್ ಇಡಿ, ಅದರೊಳಗೆ ತುಪ್ಪ ಹಾಕಿ. ಅದು ಕರಗಿ ಬಿಸಿಯಾದ ಬಳಿಕ ಜೀರಿಗೆ, ಇಂಗು, ಕಾಳುಮೆಣಸು ಮತ್ತು ಒಣ ಮೆಣಸಿನಕಾಯಿಗಳನ್ನು ಹಾಕಿ ಚೆನ್ನಾಗಿ ವಾಸನೆ ಬರುವವರೆಗೆ ಹುರಿಯಿರಿ.
  • ಸ್ಟೌ ಆಫ್ ಮಾಡಿ, ಕಿಚಿಡಿ ಸಿದ್ಧಪಡಿಸಿದ ಕುಕ್ಕರ್​ನೊಳಗೆ ಒಗ್ಗರಣೆಯ ಪಾದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
  • ಇದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಇಡಿ. ಇದೀಗ ರುಚಿಕರವಾದ ಢಾಬಾ ಶೈಲಿಯ ಮಸಾಲಾ ಕಿಚಿಡಿ ಸವಿಯಲು ಸಿದ್ಧವಾಗಿದೆ.

ಇವುಗಳನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.