ಶಿಗ್ಗಾಂವಿ ಉಪಚುನಾವಣೆ: ಭರತ್ ಬೊಮ್ಮಾಯಿ ಪರ ಪತ್ನಿ ಇಬ್ಬನಿ ಭರ್ಜರಿ ಪ್ರಚಾರ - SHIGGAON BY ELECTION
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/06-11-2024/640-480-22840600-thumbnail-16x9-ck.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Nov 6, 2024, 6:01 PM IST
ಹಾವೇರಿ: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಖುರ್ಸಾಪುರದಲ್ಲಿಂದು ಪತ್ನಿ ಇಬ್ಬನಿ ಬೊಮ್ಮಾಯಿ ಭರ್ಜರಿ ಪ್ರಚಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಂದರೆ ಸ್ಕ್ಯಾಮ್ ಸರ್ಕಾರ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಗರಣ ನಿಶ್ಚಿತ, ಖಚಿತ, ಶಾಶ್ವತ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ನಿಶ್ಚಿತ, ಖಚಿತ, ಶಾಶ್ವತ. ಕಾಂಗ್ರೆಸ್ನವರು ಕೊಟ್ಟಿರುವ ಗ್ಯಾರಂಟಿಗಳು ತಾತ್ಕಾಲಿಕ. ಅವರದ್ದು ಅಧಿಕಾರಕ್ಕೆ ಬರುವ ತನಕ ಮಾತ್ರ ಗ್ಯಾರಂಟಿ, ನಮ್ಮ ಮಾವನವರಾದ ಬಸವರಾಜ ಬೊಮ್ಮಾಯಿ ಕೊಟ್ಟಿರುವುದು ಶಾಶ್ವತ ಗ್ಯಾರಂಟಿ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಅವರು ಬಡವರಿಗೆ ಮನೆಗಳನ್ನು ಕಟ್ಟಿದ್ದಾರೆ, ರಸ್ತೆ ಮಾಡಿದ್ದಾರೆ. ಎಲ್ಲರಿಗೂ ಉದ್ಯೋಗ ಕೊಡಿಸುವ ಮೂಲಕ ಅವರು ಶಾಶ್ವತ ಗ್ಯಾರಂಟಿ ನೀಡಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯವನ್ನು ಭರತ್ ಬೊಮ್ಮಾಯಿ ಮುಂದುವರೆಸಿಕೊಂಡು ಹೋಗುತ್ತಾರೆ. ಬಸವರಾಜ ಬೊಮ್ಮಾಯಿ ಅವರು ಅಭಿವೃದ್ಧಿ ಬಗ್ಗೆ ಕಂಡ ಕನಸನ್ನು ನನಸು ಮಾಡುತ್ತಾರೆ. ಶಿಗ್ಗಾವಿ ಕ್ಷೇತ್ರದ ಅಭಿವೃದ್ಧಿ ಮುಂದುವರೆಯಲು ಭರತ್ ಬೊಮ್ಮಾಯಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು. ಸೊಸೆ ಇಬ್ಬನಿ ಬೊಮ್ಮಾಯಿಗೆ ಅತ್ತೆ ಚೆನ್ನಮ್ಮ ಬೊಮ್ಮಾಯಿ ಸಾಥ್ ನೀಡಿದರು.
ಇದನ್ನೂ ಓದಿ: ಶಿಗ್ಗಾಂವ್ ಉಪಚುನಾವಣೆ: ಸಿದ್ದರಾಮಯ್ಯ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ