ಹೆಚ್.ಡಿ.ಕೋಟೆ ಜನನಿಬಿಡ ಪ್ರದೇಶದಲ್ಲಿ ಹುಲಿ ಪ್ರತ್ಯಕ್ಷ: ಮುಂದುವರಿದ ಕಾರ್ಯಾಚರಣೆ
🎬 Watch Now: Feature Video
Published : Nov 5, 2024, 1:24 PM IST
ಮೈಸೂರು: ಹೆಚ್.ಡಿ.ಕೋಟೆಯ ಹೆಬ್ಬಳ್ಳ ಸ್ಟೇಡಿಯಂ ಬಡಾವಣೆಯ ಜನನಿಬಿಡ ಪ್ರದೇಶದಲ್ಲಿ ಸೋಮವಾರ ಹುಲಿ ಕಾಣಿಸಿಕೊಂಡಿದೆ. ಸಾಕಾನೆಗಳ ನೆರವಿನಿಂದ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಪ್ರತಿನಿತ್ಯ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಸ್ಟೇಡಿಯಂ ಬಡಾವಣೆ ಬಳಿ ಕಾಣಿಸಿಕೊಂಡ ಹುಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಲು ಯತ್ನಿಸಿದೆ. ಆ ವ್ಯಕ್ತಿ ಕೂದಲೆಳೆ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವಿಚಾರವನ್ನು ಸ್ಥಳೀಯರು ಅರಣ್ಯ ಇಲಾಖೆಗೆ ಹೇಳಿದ್ದಾರೆ. ಅರಣ್ಯ ಇಲಾಖೆ ಸೋಮವಾರ ಸಂಜೆ, ಎರಡು ಸಾಕಾನೆಗಳಾದ ಮಹೇಂದ್ರ ಮತ್ತು ಭೀಮಾ ಹಾಗೂ 50ಕ್ಕೂ ಅರಣ್ಯ ಸಿಬ್ಬಂದಿ, ಅರವಳಿಕೆ ನೀಡುವ ಇಬ್ಬರು ತಜ್ಞರೊಂದಿಗೆ ಕಾರ್ಯಾಚರಣೆ ನಡೆಸಿತ್ತು.
ಹುಲಿ ಹೆಬ್ಬಳ್ಳ ಮತ್ತು ಟೈಗರ್ ಬ್ಲಾಕ್ನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡಿದೆ. ನಿನ್ನೆ ಸಂಜೆ ಕಾರ್ಯಾಚರಣೆ ವೇಳೆ ಹುಲಿ ಸಿಕ್ಕಿಲ್ಲ. ಮಂಗಳವಾರವೂ ಕಾರ್ಯಾಚರಣೆ ಮುಂದುವರೆಸಿದ್ದು, ಸ್ಥಳದಲ್ಲಿ ಹಿರಿಯ ಅರಣ್ಯಾಧಿಕಾರಿಗಳು, ವೈದ್ಯರ ತಂಡ ಹಾಗೂ ಅರವಳಿಕೆ ತಜ್ಞರು ಇದ್ದಾರೆ.
ಇದನ್ನೂ ಓದಿ: ಮೈಸೂರು: ಒಂದು ತಿಂಗಳು, ಒಂದೇ ಸ್ಥಳದಲ್ಲಿ 5ನೇ ಚಿರತೆ ಸೆರೆ: ವಿಡಿಯೋ