ETV Bharat / state

ಶಿವಮೊಗ್ಗ: ಕಾರಿನಲ್ಲಿ ದನ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ

ಕಾರಿನಲ್ಲಿ ದನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಾಗರ ಪೇಟೆ ಪೊಲೀಸರು ಬಂಧಿಸಿದ್ದಾರೆ.

CATTLE THEFT
ವಶಕ್ಕೆ ಪಡೆಯಲಾದ ಕಾರು (ETV Bharat)
author img

By ETV Bharat Karnataka Team

Published : 3 hours ago

ಶಿವಮೊಗ್ಗ: ಸಾಗರದಲ್ಲಿ ಟೊಯೋಟಾ ಫಾರ್ಚುನರ್ ಕಾರಿನಲ್ಲಿ ದನಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಸಾಗರ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಕಳೆದ ಮಾರ್ಚ್​​ನಲ್ಲಿ ದನ ಕಳ್ಳತನವಾದ ಬಗ್ಗೆ ದೂರು ದಾಖಲಿಸಿತ್ತು.

ದೂರು ದಾಖಲಿಸಿಕೊಂಡ ಸಾಗರ ಪೊಲೀಸರು ಕಾರ್ಯಾಚರಣೆ ನಡೆಸಿ, ಇಂದು ಶಿವಮೊಗ್ಗದ ಇಬ್ಬರನ್ನು ಬಂಧಿಸಿದ್ದಾರೆ. ಶಿವಮೊಗ್ಗದ ಮೊಹಬೂಬ್ ನಗರದ ನಿವಾಸಿ, ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಮೊಹಮ್ಮದ್ ಅಮ್ಜದ್ (19) ಹಾಗೂ ವಾದಿಹುದಾ ನಗರದ ನಿವಾಸಿ ಸ್ಟೀಕರ್ ಕಟ್ಟಿಂಗ್​​ ಕೆಲಸ ಮಾಡಿಕೊಂಡಿದ್ದ ಮೊಹಮ್ಮದ್ ಶಾಹೀದ್ (25) ಬಂಧಿತರು.

ವಿಚಾರಣೆ ಮಾಡಿ ದಸ್ತಗಿರಿ ನಡೆಸಿದಾಗ ಕೃತ್ಯಕ್ಕೆ ಬಳಸಿದ ಟೊಯೋಟಾ ಫಾರ್ಚುನರ್ ಕಾರನ್ನು ಜಪ್ತಿ ಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಸಾಗರ ಡಿ ಎಸ್ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಕಾರ್ಗಲ್ ಪೊಲೀಸ್ ಠಾಣೆಯ ಸಂತೋಷ್ ಶೆಟ್ಟಿ, ಪಿಎಸ್ಐಗಳಾದ ಯಲ್ಲಪ್ಪ ಟಿ ಹಿರೇಗಣ್ಣನ್ನವರ್, ನಾಗರಾಜ ಟಿ.ಎಂ, ಸಾಗರ ಟೌನ್ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಸನಾವುಲ್ಲಾ, ಶೇಕ್ ಫೈರೋಜ್, ವಿಕಾಸ್, ರವಿಶಂಕರ್, ಕೃಷ್ಣಮೂರ್ತಿ, ವಿಶ್ವನಾಥ್ ಅವರು ಭಾಗಿಯಾಗಿದ್ದರು‌. ಈ ತಂಡಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಿನಿಮಾ ನಿರ್ದೇಶಕನಾಗಬೇಕಿದ್ದವ ಪತ್ನಿಯ ಗೆಳೆಯನ ಕೊಂದು ಜೈಲು ಸೇರಿದ್ದ: ಈಗ 42 ಕಳ್ಳತನ ಕೇಸ್​ನಲ್ಲಿ ಮತ್ತೆ ಅರೆಸ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.