ಮುಂಬೈ: ಕಳೆದ 10 ವರ್ಷಗಳಲ್ಲಿ ಭಾರತದ ಮ್ಯೂಚುವಲ್ ಫಂಡ್ ಉದ್ಯಮವು 6 ಪಟ್ಟು ಬೆಳವಣಿಗೆ ಕಾಣುವ ಮೂಲಕ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡಿದೆ. 2014ರಲ್ಲಿ 10.51 ಲಕ್ಷ ಕೋಟಿ ರೂಪಾಯಿಗಳಿದ್ದ ಎಎಂಯು(ಅಸೆಟ್ ಅಂಡರ್ ಮ್ಯಾನೇಜ್‌ಮೆಂಟ್(AUM) 2024 ರ ಡಿಸೆಂಬರ್ ವೇಳೆಗೆ 66.93 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಪ್ಯಾಸಿವ್ ಫಂಡ್ ಒಟ್ಟಾರೆ ಶೇ 16ರಷ್ಟು ಮಾರುಕಟ್ಟೆ ಬಂಡವಾಳ ಹೊಂದುವ ಮೂಲಕ 10.85 ಲಕ್ಷ ಕೋಟಿ ರೂಪಾಯಿಗೆ ಬೆಳೆವಣಿಗೆ ಕಂಡಿದೆ. ಇನ್ನು ಆ್ಯಕ್ಟಿವ್ ಫಂಡ್ ಡಿಸೆಂಬರ್ 2024 ರ ಹೊತ್ತಿಗೆ 56.08 ಲಕ್ಷ ಕೋಟಿ ರೂ ಗೆ ಬೆಳವಣಿಗೆ ದಾಖಲಿಸಿದೆ.
ಮೋತಿಲಾಲ್ ಓಸ್ವಾಲ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ (MOAMC) ಯ ವರದಿಯ ಪ್ರಕಾರ, ಷೇರು ಮಾರುಕಟ್ಟೆಯಲ್ಲಿ ಎಎಂಯುಗಳ ಪಾಲು ಶೇ 60.19ಕ್ಕೆ ಏರಿಕೆ ಆಗಿದೆ. ಇನ್ನು ಡೆಟ್ ಫಂಡ್ ನಲ್ಲಿ ಶೇ 26.77ರಷ್ಟು ಹಾಗೂ ಶೇ 8.58ರಷ್ಟು ಹೈಬ್ರಿಡ್ ಹಾಗೂ ಶೇ 4.45ರಷ್ಟು ಇತರ ಫಂಡ್ ಗಳಲ್ಲಿ ಹೂಡಿಕೆ ಮಾಡಲಾಗಿದೆ.
ಮ್ಯೂಚುವಲ್ ಫಂಡ್ ಗಳು ವೈವಿಧ್ಯಮಯ ಹೂಡಿಕೆದಾರರ ಅಗತ್ಯಗಳನ್ನು ಪೂರೈಸುವ ಮತ್ತು ಆರ್ಥಿಕ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿವೆ. ನಾವೀನ್ಯತೆ, ತಂತ್ರಜ್ಞಾನ ಮತ್ತು ಸೂಕ್ತವಾದ ಹೂಡಿಕೆ ಪರಿಹಾರಗಳು ಬೆಳವಣಿಗೆಯನ್ನು ಉಳಿಸಿಕೊಳ್ಳಲು ಮತ್ತು ಭವಿಷ್ಯದ ಅವಕಾಶಗಳನ್ನು ನ್ಯಾವಿಗೇಟ್ ಮಾಡಲು ಪ್ರಮುಖವಾದ ಅಂಶಗಳಾಗಿವೆ ಎಂದು ಮೋತಿಲಾಲ್ ಓಸ್ವಾಲ್ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ಎಂಡಿ ಮತ್ತು ಸಿಇಒ ಪ್ರತೀಕ್ ಅಗರವಾಲ್ ಹೇಳಿದ್ದಾರೆ.
ಮ್ಯೂಚುವಲ್ ಫಂಡ್ (MF) ಉದ್ಯಮವು 2024- 25ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ 198,000 ಕೋಟಿ ನಿವ್ವಳ ಒಳಹರಿವುಗಳನ್ನು ಪಡೆದುಕೊಂಡಿದೆ. ಈಕ್ವಿಟಿ ಫಂಡ್‌ಗಳು ವಿಶೇಷವಾಗಿ ಆ್ಯಕ್ಟಿವ್ ಫಂಡ್ ವಿಭಾಗದಲ್ಲಿ ಈ ಹಣದ ಹರಿವು ಬಂದಿದೆ. ಈ ತ್ರೈಮಾಸಿಕದಲ್ಲಿ 84 ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದೆ.
ಇದನ್ನು ಓದಿ: ಬಜೆಟ್ಗೆ ಕ್ಷಣಗಣನೆ: ಗಿಫ್ಟ್ ಸಿಟಿ ಸೇರಿ ರಾಜ್ಯದ ಐಟಿ - ಬಿಟಿ ಇಲಾಖೆ ಕೇಂದ್ರದ ಮುಂದಿಟ್ಟಿರುವ ವಿಷ್ ಲಿಸ್ಟ್ ಏನು?