ETV Bharat / sports

0 ಎಸೆತಕ್ಕೆ 8 ರನ್​ ಬಿಟ್ಟುಕೊಟ್ಟ ವಿಶ್ವದ ಏಕೈಕ ಬೌಲರ್! ಯಾರ ಹೆಸರಲ್ಲಿದೆ ಗೊತ್ತೇ ಈ ದಾಖಲೆ?

ಓರ್ವ ಬೌಲರ್​ 0 ಬಾಲ್​ಗೆ 8 ರನ್​ ಬಿಟ್ಟುಕೊಟ್ಟು ಕ್ರಿಕೆಟ್​ ಇತಿಹಾಸದಲ್ಲೇ ಕೆಟ್ಟ ದಾಖಲೆ ಬರೆದಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)
author img

By ETV Bharat Sports Team

Published : 3 hours ago

8 Runs in 0 ball: ಕ್ರಿಕೆಟ್​ನಲ್ಲಿ ನಿರ್ಮಾಣವಾಗಿರುವ ಕೆಲ ಅಪರೂಪದ ದಾಖಲೆಗಳು ಇಂದಿಗೂ ಅಚ್ಚರಿಪಡಿಸುತ್ತವೆ. ಅದರಲ್ಲೊಂದು 0 ಬಾಲ್​ಗೆ 8 ರನ್​ ಬಿಟ್ಟುಕೊಟ್ಟಿರುವುದು. ಈ ದಾಖಲೆ ಏಷ್ಯಾಕಪ್‌ನಲ್ಲಿ ನಿರ್ಮಾಣವಾಗಿದೆ.

2014ರಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಇದು ಸಂಭವಿಸಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಬಾಂಗ್ಲಾ ಭರ್ಜರಿ ಪ್ರದರ್ಶನ ತೋರಿತ್ತು. 50 ಓವರ್​​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 326 ರನ್​ ಕಲೆ ಹಾಕಿತ್ತು. ಬಾಂಗ್ಲಾ ಪರ ಅನ್ಮೂಲ್​ ಹಖ್​ 6 ಬೌಂಡರಿ ಮತ್ತು 4 ಸಿಕ್ಸರ್​ ಸಹಾಯದಿಂದ ಶತಕ ಸಿಡಿಸಿದ್ದರು. ಇಮ್ರುಲ್​ ಕೇಯೆಸ್ (59), ಮಾಮಿನುಲ್​ ಹಖ್​ (51), ಮಶ್ಪೀಖರ್​ ರೆಹ​ಮಾನ್​ (51) ಅರ್ಧಶತಕ ಸಿಡಿಸಿ ಪಾಕಿಸ್ತಾನಕ್ಕೆ ಬೃಹತ್​ ಮೊತ್ತದ ಗುರಿ ನೀಡಿದ್ದರು.

ಈ ಗುರಿ ಬೆನ್ನತ್ತಿದ ಪಾಕಿಸ್ತಾನ ಕೂಡ ಉತ್ತಮ ಪ್ರದರ್ಶನ ತೋರಿತ್ತು. ಅಹ್ಮದ್​ ಶೆಹಜಾದ್​ (103) ಶತಕ ಮತ್ತು ಮೊಹ್ಮದ್​ ಹಫೀಜ್​ (52), ಫಾಹದ್​ ಆಲಾಮ್​ (74), ಶಾಹೀದ್​ ಆಫ್ರಿದಿ (59) ಅರ್ಧಶತಕ ಸಿಡಿಸಿ ಇನ್ನೂ 1 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಆದ್ರೆ ಈ ಪಂದ್ಯದಲ್ಲಿ ಪಾಕ್​ ಬೌಲರ್​ ಕಳಪೆ ಪ್ರದರ್ಶನ ತೋರಿ ಕೆಟ್ಟ ದಾಖಲೆ ಬರೆದಿದ್ದರು.

ಬಾಂಗ್ಲಾದೇಶ ಬ್ಯಾಟಿಂಗ್​ ವೇಳೆ ಪಾಕ್​ ಸ್ಪಿನ್​ ​ಬೌಲರ್​ ಅಬ್ದುರ್​ ರೆಹಮಾನ್​ 0 ಬೌಲ್​ಗೆ 8 ರನ್​ ಬಿಟ್ಟುಕೊಟ್ಟಿದ್ದರು. ಇದು ಕ್ರಿಕೆಟ್​ ಇತಿಹಾಸದಲ್ಲೇ ನಿರ್ಮಾಣವಾಗಿರುವ ಕೆಟ್ಟ ದಾಖಲೆ. ಇದು ಹೇಗೆ ಸಾಧ್ಯವಾಯಿತು? ಎಂಬುದನ್ನು ಈಗ ತಿಳಿಯಿರಿ.

ಇದನ್ನೂ ಓದಿ: ಒಂದೇ ಓವರ್​ನಲ್ಲಿ 36 ಅಲ್ಲ 77ರನ್​ ಬಿಟ್ಟುಕೊಟ್ಟ ಬೌಲರ್​: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ದಾಖಲು!

0 ಬಾಲ್​ಗೆ 8 ರನ್​: ಈ ಪಂದ್ಯದಲ್ಲಿ 11 ಓವರ್​ ಬೌಲಿಂಗ್​ ಮಾಡಿದ್ದ ಅಬ್ದುರ್​ ರೆಹಮಾನ್​ 3 ಇಲ್ಲೀಗಲ್​ ಡೆಲಿವರಿ ಎಸೆದಿದ್ದರು. ಮೊದಲ ಎಸೆತ ವೈಡ್ ಆಗಿತ್ತು. ಇದರಿಂದಾಗಿ 1 ರನ್​ ಬಂದಿತ್ತು. ನಂತರ ಎರಡನೇ ಬೌಲಿಂಗ್​ ಫುಲ್ಟಾಸ್​ ಅನ್ನು ಬಾಂಗ್ಲಾ ಬ್ಯಾಟರ್​ ಬೌಂಡರಿಗೆ ಬಾರಿಸಲು ಯತ್ನಿಸಿ ಕ್ಯಾಚ್​ ನೀಡಿದ್ದರು. ಆದರೆ ಇದು ನೋ ಬಾಲ್​ ಆಗಿತ್ತು. ಈ ವೇಳೆ ಬಾಂಗ್ಲಾ ಬ್ಯಾಟರ್​ಗಳು ಒಂದು ರನ್​ ಕಲೆಹಾಕಿದ್ದರು. ಈ ಎಸೆತದಲ್ಲಿ 2 ರನ್​ ಬಂದವು. ಇಲ್ಲಿಗೆ ಶೂನ್ಯ ಬಾಲ್​ಗೆ 3 ರನ್​ ಬಂದಂತಾಯಿತು.

ಬಳಿಕ ಅಬ್ದುರ್​ ಮತ್ತೆ ಒಂದು ಫುಲ್ಟಾಸ್​ ನೋ ಬಾಲ್ ಎಸೆದರು. ಬಾಂಗ್ಲಾ ಬ್ಯಾಟರ್​ ಈ ಬಾಲ್​ ಅನ್ನು ಬೌಂಡರಿಗೆ ಕಳುಹಿಸುವಲ್ಲಿ ಯಶಸ್ವಿಯಾದರು. ಇದರಿಂದ ಒಟ್ಟು 5 ರನ್​ ಸೇರ್ಪಡೆಗೊಂಡವು. ಮೊದಲ ಎಸೆತದಲ್ಲಿ 1 ರನ್​ ಎರಡನೇ ಎಸೆತದಲ್ಲಿ 2ರನ್​ ಮತ್ತು ಮೂರನೇ ಎಸೆತದಲ್ಲಿ 5 ರನ್​ ಬಂದವು. ಇದರಿಂದಾಗಿ 0 ಎಸೆತಕ್ಕೆ 8 ರನ್ ಬಿಟ್ಟುಕೊಟ್ಟರು. ಬಳಿಕ ಸತತ 3 ನೋ ಬಾಲ್ ಹಾಕಿದ ಕಾರಣ ಅಬ್ದುರ್​ ಅವರನ್ನು ಮತ್ತೆ ಬೌಲಿಂಗ್​ ಮಾಡದಂತೆ ನಿರ್ಬಂಧಿಸಲಾಯಿತು.​

ಇದನ್ನೂ ಓದಿ: ವಾರೇ ವ್ಹಾ! 21 ಓವರ್​ಗಳಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದೇ ಇತಿಹಾಸ ಸೃಷ್ಟಿಸಿದ್ದ ಭಾರತೀಯ ಬೌಲರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.