ಮಲೆನಾಡಿನಲ್ಲಿ ಕೊಂಚ ಕಡಿಮೆಯಾದ ಮಳೆ: ರಸ್ತೆ ಸಂಚಾರ ಸುಗಮ...! - rainfall decline in chikmagalore
🎬 Watch Now: Feature Video
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿದ್ದ ಧಾರಾಕಾರ ಮಳೆ ಕೊಂಚ ಪ್ರಮಾಣದಲ್ಲಿ ಇಳಿ ಮುಖವಾಗಿದೆ. ಜಿಲ್ಲೆಯಲ್ಲಿ ತುಂಗ, ಭದ್ರಾ, ಹೇಮಾವತಿ ಹರಿವಿನ ಮಟ್ಟದಲ್ಲಿ ಕೊಂಚ ಇಳಿ ಮುಖವಾಗಿದ್ದರೂ, ನೀರು ರಭಸವಾಗಿಯೇ ಹರಿಯುತ್ತಿದೆ. ನದಿ ಪಾತ್ರದಲ್ಲಿರುವ ಕಾಫಿ ತೋಟ ಹಾಗೂ ಅಡಿಕೆ ತೋಟಗಳಿಗೆ ನೀರು ನುಗ್ಗಿದ್ದು, ದೊಡ್ಡ ದೊಡ್ಡ ಮರದ ದಿಮ್ಮಿಗಳು ನೀರಿನಲ್ಲಿ ತೇಲಿಕೊಂಡು ಬರುತ್ತಿವೆ. ಕಳಸ ಹಾಗೂ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ನಿನ್ನೆ ಸಂಪೂರ್ಣ ಮುಳುಗಡೆಯಾಗಿತ್ತು. ಈ ಭಾಗದಲ್ಲಿ ಸ್ವಲ್ಪ ನೀರು ಇಳಿಮುಖವಾಗಿದ್ದು ಈ ಭಾಗದಲ್ಲಿ ಮತ್ತೆ ರಸ್ತೆ ಸಂಚಾರ ಆರಂಭವಾಗಿದೆ.