ಮೋಟಾರು ವಾಹನ ತಿದ್ದುಪಡಿ ಕಾಯಿದೆ ಜಾರಿ: ಮುಂಜಾನೆಯಿಂದಲೇ ಫೀಲ್ಡಿಗಿಳಿದ ಟ್ರಾಫಿಕ್ ಪೊಲೀಸರು - ಮೋಟಾರು ವಾಹನ ತಿದ್ದುಪಡಿ ಕಾಯಿದೆ
🎬 Watch Now: Feature Video
ವೀಕೆಂಡ್ ಮಸ್ತಿಯಲ್ಲಿದ್ದ ಸಿಲಿಕಾನ್ ಸಿಟಿ ಜನರಿಗೆ ಇಂದು ಟ್ರಾಪಿಕ್ ಪೊಲೀಸರು ಭಾರಿ ದಂಡ ವಿಧಿಸುವ ಮೂಲಕ ಜೇಬಿಗೆ ಕತ್ತರಿ ಹಾಕಿದ್ದಾರೆ. ಕೇಂದ್ರ ಸರ್ಕಾರದ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಇಂದಿನಿಂದ ಜಾರಿಗೆ ಬಂದಿದ್ದು ನಿನ್ನೆ ರಾತ್ರಿಯಿಂದಲೇ ಟ್ರಾಫಿಕ್ ಪೊಲೀಸರು ಫೀಲ್ಡಿಗೆ ಇಳಿದಿದ್ರು. ಸದ್ಯ ಟ್ರಾಫಿಕ್ ಪೊಲೀಸರು ಅನಿಯಂತ್ರಿತ ಡ್ರೈವಿಂಗ್ ಕೇಸ್, ವಸೂಲಿ ಮಾಡಿದ ಜೀವ ವಿಮೆ ಇಲ್ಲದೆ ವಾಹನ ಚಾಲನೆ, ಮೊಬೈಲ್ ಬಳಕೆ, ಮಿತಿ ಮೀರಿದ ಓವರ್ ಲೋಡ್ ವಸ್ತು ಸಾಗಣೆ, ಆ್ಯಂಬುಲೆನ್ಸ್ ನಂತಹ ತುರ್ತು ವಾಹನಗಳಿಗೆ ದಾರಿ ಬಿಡದೆ ಇರುವ ವಾಹನಗಳಿಗೆ ದಂಡ, ಮಧ್ಯ ಸೇವಿಸಿ ಚಾಲನೆ, ಸಿಗ್ನಲ್ ಜಂಪ್, ಒನ್ ವೇ, ಸೀಟ್ ಬೇಲ್ಟ್ ಇಲ್ಲದೇ ಚಾಲನೆ, ಹೆಲ್ಮೇಟ್ ಇಲ್ಲದೇ ಚಾಲನೆ ಮಾಡುವವರನ್ನ ಹಿಡಿದು ದಂಡ ವಸೂಲಿ ಮಾಡ್ತಿದ್ದಾರೆ.