ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಳ್ಳಂದೂರಿನ ಪಬ್‌ವೊಂದರಲ್ಲಿ ಯುವತಿಯೊಂದಿಗೆ ಅಪರಿಚಿತನೋರ್ವ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. ಒಡಿಶಾದ ಯುವತಿಗೆ ಕಿರುಕುಳ ನೀಡಿದ ಅಪರಿಚಿತನ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸ ವರ್ಷದ ಪಾರ್ಟಿಗಾಗಿ ಯುವತಿ ಸ್ನೇಹಿತನೊಂದಿಗೆ ಪಬ್‌ಗೆ ತೆರಳಿದ್ದಳು. ಪಬ್‌ನಲ್ಲಿ ಅಪರಿಚಿತನೊಬ್ಬ ಯುವತಿಕೆ ಮದ್ಯ ಸೇವಿಸುವಂತೆ ಆಫರ್ ಮಾಡಿದ್ದಾನೆ. ಆದರೆ ಆತನ ಆಫರ್ ಅನ್ನು ಯುವತಿ ತಿರಸ್ಕರಿಸಿದ್ದಳು. ಆಗ ಒತ್ತಾಯಿಸಿದ್ದ ಆರೋಪಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಾಗ ಸಿಬ್ಬಂದಿ ಮಧ್ಯ ಪ್ರವೇಶಿಸುತ್ತಿದ್ದಂತೆ ಆರೋಪಿ ಪಬ್‌ನಿಂದ ತೆರಳಿದ್ದಾನೆ. ಅಸಭ್ಯ ವರ್ತನೆ ಮತ್ತು ಕಿರುಕುಳ ನೀಡಿದ ಆರೋಪದಡಿ ಯುವತಿ ದೂರು ನೀಡಿದ್ದು, ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಯುವತಿಗೆ ಲೈಂಗಿಕ ಕಿರುಕುಳ, ಹಲ್ಲೆ ಆರೋಪ: ಕಿರುತೆರೆ ನಟ ಅರೆಸ್ಟ್