ಅರಮನೆಯ ಅಂಗಳಕ್ಕೆ ಅಶ್ವಪಡೆ ಆಗಮನ: ಗಜಪಡೆಯೊಂದಿಗೆ ಪರಸ್ಪರ ಪರಿಚಯ - ಜಂಬೂ ಸವಾರಿ
🎬 Watch Now: Feature Video
ಮೈಸೂರು: ಜಂಬೂ ಸವಾರಿಯ ಸಮಯದಲ್ಲಿ ಗಜಪಡೆಯೊಂದಿಗೆ ಸಾಗುವ ಅಶ್ವಪಡೆಗೂ ಸಹ ತಾಲೀಮು ನಡೆಸಲಾಯಿತು. ಇದಕ್ಕೂ ಮುನ್ನ ಗಜಪಡೆ ಬೀಡುಬಿಟ್ಟಿರುವ ಅರಮನೆಯ ಅಂಗಳಕ್ಕೆ ಅಶ್ವಪಡೆಯನ್ನು ಕರೆತಂದು ಅರ್ಜುನ ಹಾಗೂ ಇತರೆ ಆನೆಗಳ ಪರಿಚಯ ಮಾಡಿಸಲಾಯಿತು. ಜಂಬೂ ಸವಾರಿಯ ದಿನ ಆನೆಗಳನ್ನು ಕಂಡು ಅಶ್ವಪಡೆ ಹೆದರಬಾರದು ಎಂಬ ಕಾರಣಕ್ಕೆ ಹೀಗೆ ಪರಿಚಯ ಮಾಡಿಸಲಾಗಿದ್ದು, ಅಶ್ವಪಡೆಯನ್ನು ಸೊಂಡಿಲು ಎತ್ತಿ ಸ್ವಾಗತಿಸಿದ ಅರ್ಜುನ ಆನೆ, ಇಂದಿನಿಂದ ಅವುಗಳ ಜೊತೆ ತಾಲೀಮು ನಡೆಸಲಿದೆ.