ಫಿರಂಗಿ ಶಬ್ದಕ್ಕೆ ಬೆಚ್ಚದ ಆನೆಗಳು... ಜಂಬೂ ಸವಾರಿಗೆ ಗ್ರೀನ್ ಸಿಗ್ನಲ್ ಕೊಟ್ಟ ಗಜಪಡೆ - ಪೂರ್ಣ ಪ್ರಮಾಣದ ಭರವಸೆ
🎬 Watch Now: Feature Video
ದಸರಾ ಮಹೋತ್ಸವದ ಅಂಗವಾಗಿ ಮೈಸೂರಿನ ಅರಮನೆಯ ಆವರಣದಲ್ಲಿ ಇದೀಗ ಎರಡನೇ ಹಂತದ ಫಿರಂಗಿ ತಾಲೀಮು ನಡೆದಿದೆ, ಇದರಲ್ಲಿ 12 ಆನೆಗಳು ಗಾಬರಿಯಾಗದೆ ನಿಲ್ಲುವ ಮೂಲಕ ದಸರಾ ಜಂಬೂಸವಾರಿಗೆ ರೆಡಿಯಾಗಿದ್ದೇವೆ ಎಂದು ತೋರಿಸಿಕೊಟ್ಟಿವೆ. ಮೊದಲ ಸುತ್ತಿನ ಫಿರಂಗಿ ತಾಲೀಮುನಲ್ಲಿ 3 ಆನೆಗಳು ಬೆದರಿದ್ದವು. ಆದರೆ 2 ನೇ ಹಂತದಲ್ಲಿ ಯಾವುದೇ ಆನೆಗಳು ಬೆದರದೆ ಸಿಡಿಮದ್ದಿನ ಶಬ್ದಕ್ಕೆ ಗಾಬರಿಯಾಗದೆ ಆರಾಮವಾಗಿ ನಿಂತುಕೊಂಡಿದ್ದು, ಪೂರ್ಣ ಪ್ರಮಾಣದ ಭರವಸೆಯನ್ನು ನೀಡಿವೆ.