ಆಲಿಕಲ್ಲು ಸಹಿತ ಸುರಿದ ಅಕಾಲಿಕ ಮಳೆ... ಯಾದಗಿರಿ ರೈತರಿಗೆ ಮತ್ತಷ್ಟು ಸಂಕಷ್ಟ - rain in yadgiri
🎬 Watch Now: Feature Video
ಯಾದಗಿರಿ ತಾಲೂಕಿನ ಪಗಲಾಪುರ, ಮುಷ್ಟೂರ, ಹೊಸಳ್ಳಿ ಗ್ರಾಮ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ಭತ್ತ ಸಂಪೂರ್ಣ ನೆಲಕಚ್ಚಿದೆ. ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಲಾಕ್ಡೌನ್ ಹಿನ್ನೆಲೆ ಭತ್ತ ಕಟಾವು ಮಾಡಲು ಕೆಲಸದವರು ಸಿಗದೆ ಪರದಾಡುತ್ತಿದ್ದ ರೈತರಿಗೀಗ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಈ ಕುರಿತು ಈಟಿವಿ ಭಾರತನೊಂದಿಗೆ ಮಾತನಾಡಿರುವ ರೈತರು, ಸರ್ಕಾರ ತಮ್ಮ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.