ಬಿಗ್ ಬಾಸ್ ಸೀಸನ್ 11ರ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ಮತ್ತೆ ಮನಸ್ತಾಪಗಳು ಹೆಚ್ಚಾಗುವ ಕ್ಷಣವಿದು. ಮನದೊಳಗಿದ್ದ ಅಸಮಧಾನಗಳು ಹೊರಬರುವ ವೇದಿಕೆ ಇದು. ಬ್ರೇಕ್ ಆಗಿದ್ದ ಮೋಕ್ಷಿತಾ ಮಂಜು ಸ್ನೇಹ ಸರಿಯಾಗುವ ಹೊತ್ತಲ್ಲೇ ಮತ್ತೆ ಮನಸ್ತಾಪ ಆಗುವಂತೆ ತೋರಿದೆ. ಇದರ ಒಂದು ಸುಳಿವನ್ನು ಬಿಗ್ ಬಾಸ್ ಅನಾವರಣಗೊಳಿಸಿರುವ ಪ್ರೋಮೋ ಬಿಟ್ಟುಕೊಟ್ಟಿದೆ.
'ಬಾಟಲಿಗಳ ಥರವೇ ಮನಸ್ಸುಗಳೂ ನುಚ್ಚುನೂರಾಗೋಯ್ತಾ?' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದೆ. (ಗಮನಿಸಿ: ಈ ಬಾಟಲಿ ಕ್ರಿಯಾಶೀಲವಾಗಿ ತಯಾರಿಸಲ್ಪಟ್ಟಿದೆ. ಇದು ನೈಜ ಗಾಜಲ್ಲ, ದಯವಿಟ್ಟು ಇದನ್ನು ಅನುಕರಿಸಬೇಡಿ). ಪ್ರೋಮೋದಲ್ಲಿ ಮೋಕ್ಷಿತಾ ಮತ್ತು ಮಂಜು ಮಾತಿಗೆ ಮಾತು ಕೊಟ್ಟಿರೋದನ್ನು ಕಾಣಬಹುದು.
ಉಗ್ರಂ ಮಂಜು ಹೆಸರು ತೆಗೆದುಕೊಂಡ ಮೋಕ್ಷಿತಾ, ನನಗೆ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ ಎಂಬ ಕಾರಣಗಳನ್ನು ಒದಗಿಸಿದ್ದಾರೆ. ಅಸಮಧಾನಗೊಂಡ ಮಂಜು, ಹೇಗ್ ಕಾಣಿಸಿಕೊಳ್ಳಬೇಕೆಂದು ತಿಳಿದುಕೊಳ್ಳಲು ನಾಳೆಯಿಂದ ಟ್ಯೂಷನ್ಗೆ ಬರ್ತೀನಿ ಎಂದು ತಿಳಿಸಿದ್ದಾರೆ. ತ್ರಿವಿಕ್ರಮ್ ಅವರಿಂದ ವ್ಯಂಗ್ಯ ನಗು ಬಂದಿದೆ. ಕಾಣಿಸಿಕೊಳ್ಳಲು ನಿಮಗೇನಾದ್ರೂ ತಂದುಕೊಡಬೇಕಾ ಎಂದು ಮಂಜು ಪ್ರಶ್ನಿಸಿದ್ದಾರೆ. ಒಬ್ರಿಗೆ ಏನಾದ್ರು ತಗೊಂಡ್ ಹೋಗಿ ಕೊಟ್ಟಾಗಲೇ ಕಾಣಿಸಿಕೊಳ್ತೀನಿ ಅನ್ನೋದು ನಿಮ್ಮ ಮಾತಿನ ಅರ್ಥವೇ ಎಂದು ಮೋಕ್ಷಿತಾ ಮಾತಿಗಿಳಿದಿದ್ದಾರೆ. ಕೇಳಿಸಿಕೊಳ್ರೀ ಎಂದು ಮಂಜು ದನಿ ಏರಿಸಿದ್ದಾರೆ. ದನಿ ಏರಿಸಬೇಡಿ, ನೀವ್ ವಾಯ್ಸ್ ರೇಸ್ ಮಾಡಿದ್ರೆ ನಾನೂ ಮಾಡ್ತೀನಿ ಎಂದು ಮೋಕ್ಷಿತಾ ಕಿಡಿಕಾರಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಾಮಿನೇಷನ್ ನಾನ್ ಆಗೋದಿಲ್ಲ ಎಂದು ಮಂಜು ತಿಳಿಸುತ್ತಿದ್ದಂತೆ, ನನ್ನಿಷ್ಟ ನನ್ ನಾಮಿನೇಷನ್ ಎಂದು ಮೋಕ್ಷಿತಾ ಮಂಜು ಅವರ ತಲೆಗೆ ಬಾಟಲಿಯಲ್ಲಿ ಹೊಡೆದು ಹೋಗಿದ್ದಾರೆ.
ಇದನ್ನೂ ಓದಿ: 'ಯುಐ' ಕಲೆಕ್ಷನ್ ಡೇ 6: ಉಪೇಂದ್ರ ಸಿನಿಮಾ ಮೇಲೆ ಸುದೀಪ್ 'ಮ್ಯಾಕ್ಸ್' ಎಫೆಕ್ಟ್?
ಈ ಬಾಟಲಿ ಕ್ರಿಯಾಶೀಲವಾಗಿ ತಯಾರಿಸಲ್ಪಟ್ಟಿದ್ದರೂ ಮಂಜು ನೋವಾದಂತೆ ವ್ಯಂಗ್ಯ ರಿಯಾಕ್ಷನ್ ಕೊಟ್ಟಿದ್ದಾರೆ. ಮತ್ತೊಂದೆಡೆ ಮೋಕ್ಷಿತಾ ಕೂಡಾ ಕಡಿಮೆಯೇನಿಲ್ಲ. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು ವ್ಯಂಗ್ಯ ಪ್ರತಿಕ್ರಿಯೆ ಕೊಟ್ಟುಕೊಂಡಿದ್ದಾರೆ. ಮನೆಯ ಇತರೆ ಸ್ಪರ್ಧಿಗಳ ರಿಯಾಕ್ಷನ್ ಕೂಡಾ ವಿಭಿನ್ನವಾಗಿತ್ತು.
ಇದನ್ನೂ ಓದಿ: ಮ್ಯಾಕ್ಸ್ ಭರ್ಜರಿ ಕಲೆಕ್ಷನ್: ಅದ್ಭುತ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದ ಸುದೀಪ್ ಸಿನಿಮಾ
ಮನೆಮಂದಿಗೆ ನಿಜಕ್ಕೂ ಎಲ್ಲಾ ಕ್ಯಾರೆಕ್ಟರ್ಸ್ ಅರ್ಥವಾಗಿದ್ಯಾ? ಎಂಬ ಕ್ಯಾಪ್ಷನ್ನೊಂದಿಗೆ ಮತ್ತೊಂದು ಪ್ರೋಮೋ ಅನಾವರಣಗೊಂಡಿದ್ದು, ಇಲ್ಲಿ ರಜತ್ ಕಿಶನ್ vs ಚೈತ್ರಾ ಕುಂದಾಪುರ ಅವರನ್ನು ಕಾಣಬಹುದಾಗಿದೆ. ಬೇರೆ ಬೇರೆ ಟಾಸ್ಕ್ ಅಲ್ಲಿ ಕಾಣಿಸ್ಲಿಲ್ಲಾ. ಸೀರೆ ಹೊಗಿಯೋದ್ರಲ್ಲೂ ಕಾಣಿಸಲಿಲ್ವಲ್ಲಾ ಅಮ್ಮಾ ನಿನ್ ಟ್ಯಾಲೆಂಟು. ನೀನ್ ಏನುಕ್ಕಮ್ಮಾ ಇದಿಯಾ ಬಿಗ್ ಬಾಸ್ನಲ್ಲಿ. ದಮ್ಮಯ್ಯಾ ಹೊರಡಮ್ಮಾ ಮನೆಗೆ ಎಂದು ತಿಳಿಸಿದ್ದಾರೆ.