ಯುವತಿಯ ಮನವಿಗೆ ಮಿಡಿದ 'ಪ್ಯಾಡ್ ವುಮನ್': ಉಚಿತವಾಗೇ ಸ್ಯಾನಿಟರಿ ಪ್ಯಾಡ್ ನೀಡಲು ಸಜ್ಜು - ಕೊರೊನಾ ವೈರಸ್
🎬 Watch Now: Feature Video
ಕೊಪ್ಪಳ: ಕೊರೊನಾ ವೈರಸ್ ಹರಡುವಿಕೆ ಹತೋಟಿಗೆ ತರುವ ನಿಟ್ಟಿನಲ್ಲಿ ದೇಶದಲ್ಲಿ ಎರಡನೇ ಹಂತದ ಲಾಕ್ ಡೌನ್ ಮುಂದುವರೆದಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೆ ಹಲವರು ತಮ್ಮ ಶಕ್ತಾನುಸಾರ ಸಹಾಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಯುವತಿಯೊಬ್ಬಳು ಮಾಡಿದ ವಿಡಿಯೋ ಮನವಿಯಿಂದ ಕೊಪ್ಪಳದ ಪ್ಯಾಡ್ ವುಮನ್ ಎಂದು ಕರೆಸಿಕೊಳ್ಳುವ ಭಾರತಿ ಗುಡ್ಲಾನೂರು ಅವರು ಗ್ರಾಮೀಣ ಪ್ರದೇಶದ ನೂರಾರು ಮಹಿಳೆಯರಿಗೆ ಅಗತ್ಯ ಸ್ಯಾನಿಟರಿ ಪ್ಯಾಡ್ಗಳನ್ನು ಉಚಿತವಾಗಿ ನೀಡಲು ತಯಾರಿ ನಡೆಸಿದ್ದಾರೆ. ಈ ಕುರಿತು ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.