ನೂತನ ಸಂಸತ್ ಭವನದ ಉದ್ಘಾಟನೆ ಪೂಜೆ ಮಾಡಲಿರುವ ಶೃಂಗೇರಿ ಪುರೋಹಿತರು - ಉದ್ಘಾಟನೆಯ ಪೂಜಾ ಕಾರ್ಯಕ್ರಮ

🎬 Watch Now: Feature Video

thumbnail

By

Published : May 27, 2023, 8:10 PM IST

ಚಿಕ್ಕಮಗಳೂರು: ದೆಹಲಿಯ ನೂತನ ಸಂಸತ್ ಭವನ ಭಾನುವಾರ ಲೋಕಾರ್ಪಣೆಗೊಳ್ಳುತ್ತಿದ್ದು, ಇದಕ್ಕೂ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಯಾಕೆಂದರೆ ಇದೀಗ ನೂತನ ಸಂಸತ್​ ಭವನದ ಉದ್ಘಾಟನೆ ಪೂಜಾ ಕಾರ್ಯಕ್ರಮಗಳಿಗೆ ಶೃಂಗೇರಿ ಪೀಠದಿಂದ ಪುರೋಹಿತರು ತೆರಳಿದ್ದಾರೆ. ಶೃಂಗೇರಿ ಮಠದಿಂದ ಸೀತಾ ರಾಮ ಶರ್ಮ, ಶ್ರೀ ರಾಮ ಶರ್ಮ ಮತ್ತು ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದಿ೦ದ ನಾರಗಾಜ ಅಡಿಗ, ಋಷ್ಯಶೃಂಗ ಭಟ್ಟ ಇವರು ಈಗಾಗಲೇ ತೆರಳಿದ್ದಾರೆ. 

ಉದ್ಘಾಟನೆಯ ಮುನ್ನ ಇವರಿಂದ ವಾಸ್ತುಹೋಮ, ವಾಸ್ತು ಪೂಜೆಗಳು ನಡೆಯಲಿವೆ. ಭಾನುವಾರ ಮಹಾಗಣಪತಿ ಹೋಮ ನಡೆಯಲಿದೆ. 2020 ರಲ್ಲಿ ಸಂಸತ್ ಭವನದ ಭೂಮಿ ಪೂಜೆ ನೆರವೇರಿಸಿದ್ದ ಶ್ರೀ ಶಿವಕುಮಾರ ಶರ್ಮಾ ಮಾಹಿತಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರ ಅಪೇಕ್ಷೆಯಂತೆ ಭಾರತಿ ತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶೃಂಗೇರಿ ಮಠದಿಂದ ಡಾ.ಶಿವಕುಮಾರ ಶರ್ಮಾ, ಲಕ್ಷ್ಮೀನಾರಾಯಣ ಸೋಮಯಾಜಿ, ಶ್ರೀ ಗಣೇಶ ಸೋಮಯಾಜಿ ಹಾಗೂ ದೆಹಲಿಯ ಶೃಂಗೇರಿ ಶಾರದಾ ಪೀಠದ ಶಾಖಾ ಮಠದಿಂದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ಟ, ದೆಹಲಿಯ ಶಾರದ ಪೀಠದ ವೇದ ಶಾಲಾ ಅಧ್ಯಾಪಕ ರಾಘವೇಂದ್ರ ಭಟ್ಟ ಈ 6 ಜನ ವಿದ್ವಾಂಸರು ತೆರಳಿ ಭೂಮಿ ಪೂಜೆ ನೆರವೇರಿಸಿದ್ದರು. ಭೂಮಿ ಪೂಜೆ ಸಂದರ್ಭದಲ್ಲಿ ಪ್ರಧಾನಿಯವರೊಡನೆ ವಿಶೇಷ ಪೂಜೆ, ಹೋಮ, ಹವನ ನಡೆಸಲಾಯಿತು. ಶೃಂಗೇರಿ ಮಠದಿಂದ ಕೊಂಡೊಯ್ದ ಶಂಕು, ನವರತ್ನಗಳನ್ನು ಹಾಗೂ ಬೆಳ್ಳಿ ಇಟ್ಟಿಗೆಯನ್ನು ಅಂದು ಸ್ಥಾಪನೆ ಮಾಡಲಾಗಿತ್ತು. ಈ ಭವ್ಯ ಭವನದಿಂದ ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: ಅಯೋಧ್ಯೆಯಲ್ಲಿ ಅವಧೂತ ದತ್ತ ಪೀಠದ ಶಾಖೆ: ಭೂಮಿಪೂಜೆ ನೆರವೇರಿಸಿದ ಸಚ್ಚಿದಾನಂದ ಸ್ವಾಮೀಜಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.