ETV Bharat / state

ಹಾವೇರಿ: ಡಾ. ಪುನೀತ್​ ರಾಜಕುಮಾರ್​​ ದೇವಸ್ಥಾನ ಇದೀಗ ಪ್ರವಾಸಿ ತಾಣ - DR PUNEETH RAJKUMAR TEMPLE

ಡಾ. ಪುನೀತ್​ ರಾಜಕುಮಾರ್​​ ಅಭಿಮಾನಿ ಯಲಗಚ್ಚ ಗ್ರಾಮದ ಪ್ರಕಾಶ್​ ಮೊರಬದ ಅಪ್ಪು ನೆನಪಿಗೆ ಅವರ ಪುತ್ಥಳಿ ನಿರ್ಮಸಿ ದೇವಾಲಯ ಕಟ್ಟಿದ್ದರು. ಇದೀಗ ಆ ದೇವಾಲಯಕ್ಕೆ ಅಭಿಮಾನಿಗಳ ಸಾಗರವೇ ಹರಿದು ಬರುತ್ತಿದೆ.

HAVERI  ಡಾ ಪುನೀತ್​ ರಾಜಕುಮಾರ್​​ ದೇವಸ್ಥಾನ  PUNEETH RAJKUMAR TEMPLE  ಪ್ರಕಾಶ್​ ಮೊರಬದ
ಹಾವೇರಿ: ಡಾ. ಪುನೀತ್​ ರಾಜಕುಮಾರ್​​ ದೇವಸ್ಥಾನ ಇದೀಗ ಪ್ರವಾಸಿ ತಾಣ (ETV Bharat)
author img

By ETV Bharat Karnataka Team

Published : 13 hours ago

ಹಾವೇರಿ: ತಾಲೂಕು ಯಲಗಚ್ಚ ಗ್ರಾಮದಲ್ಲಿರುವ ದಿವಂಗತ ಡಾ. ಪುನೀತ್​ ರಾಜಕುಮಾರ್​​ ದೇವಸ್ಥಾನ ಇದೀಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಉಡಚಮ್ಮ ದೇವಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಜಾತ್ರೆಗೆ ಬರುವ ಭಕ್ತರು ಪುನೀತ್​​​ ದೇವಸ್ಥಾನಕ್ಕೂ ಭೇಟಿ ನೀಡುತ್ತಿದ್ದಾರೆ.

ಮುಂಜಾನೆಯಿಂದ ತಡರಾತ್ರಿವರೆಗೂ ಪುನೀತ್​ ದರ್ಶನ: ಮುಂಜಾನೆಯಿಂದ ತಡರಾತ್ರಿವರೆಗೆ ಅಭಿಮಾನಿಗಳು ತಂಡೋಪತಂಡವಾಗಿ ಆಗಮಿಸಿ ಪುನೀತ್​​ ರಾಜಕುಮಾರ್​​​​ ಪುತ್ಥಳಿಗೆ ನಮಿಸಿ, ಪುಷ್ಪಮಾಲೆಗಳನ್ನು ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ಹಣ್ಣು-ಕಾಯಿ ನೈವೇದ್ಯ ಅರ್ಪಿಸಿ ಎಡೆ ಹಿಡಿಯುತ್ತಿದ್ದಾರೆ. ತಮ್ಮ ಸ್ನೇಹಿತರ ಜೊತೆ, ಸಂಬಂಧಿಕರ ಜೊತೆ, ತಂಡೋಪತಂಡವಾಗಿ ಆಗಮಿಸುವ ಅಭಿಮಾನಿಗಳು ಪುತ್ಥಳಿ ಸುತ್ತ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಡಾ. ಪುನೀತ್​ ರಾಜಕುಮಾರ್​​ ದೇವಸ್ಥಾನ ಇದೀಗ ಪ್ರವಾಸಿ ತಾಣ (ETV Bharat)

ಸ್ವಂತ ಜಾಗದಲ್ಲಿ ಪುನೀತ್​ ರಾಜಕುಮಾರ್ ದೇವಸ್ಥಾನ ನಿರ್ಮಿಸಿರುವ ಅಭಿಮಾನಿ: ಡಾ. ಪುನೀತ್​ ರಾಜಕುಮಾರ್​​ ದೇವಸ್ಥಾನವನ್ನು ಯಲಗಚ್ಚ ಗ್ರಾಮದ ಪ್ರಕಾಶ್​ ಮೊರಬದ ನಿರ್ಮಿಸಿದ್ದಾರೆ. ಪ್ರಕಾಶ್ ಮೊರಬದ ಡಾ. ಪುನೀತರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಪುನೀತ್​ ರಾಜಕುಮಾರ್ ಅವರ ಜೊತೆ ನಟಿಸಬೇಕು ಎನ್ನುವ ಅವರ ಆಸೆ ಈಡೇರಲೇ ಇಲ್ಲಾ. ಇದರಿಂದ ತೀವ್ರವಾಗಿ ನೊಂದಿದ್ದ ಪ್ರಕಾಶ್​ ತಮ್ಮ ಮನೆಯ ಆವರಣದಲ್ಲಿ ಸ್ವಂತ ಜಾಗದಲ್ಲಿ ಪುನೀತ್​ ರಾಜಕುಮಾರ್ ದೇವಸ್ಥಾನ ಕಟ್ಟಿಸಲು ಮುಂದಾದರು.

ಹಲವು ತಿಂಗಳುಗಳ ನಂತರ ಪುನೀತ್​ ರಾಜಕುಮಾರ್ ದೇವಸ್ಥಾನ ಸಿದ್ಧವಾಯಿತು. ದೇವಾಲಯದಲ್ಲಿ ಪುನೀತ್​ ಅವರ ಪುತ್ಥಳಿಯನ್ನು ಪುನೀತ್​ ಪತ್ನಿ ಕಳೆದ ಮೂರು ತಿಂಗಳ ಹಿಂದೆ ಉದ್ಘಾಟಿಸಿದ್ದರು. ನಂತರ ಅಭಿಮಾನಿಗಳಿಗೆ ತೆರೆಯಲಾಗಿದ್ದ ದೇವಸ್ಥಾನಕ್ಕೆ ದಿನನಿತ್ಯ ಅಭಿಮಾನಿಗಳು ಆಗಮಿಸಿ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ವಿಶೇಷ ದಿನಗಳಲ್ಲಿ ಝಗಮಗಿಸುವ ಪುನೀತ್​ ಆಲಯ: ಪ್ರತಿನಿತ್ಯ ಪುತ್ಥಳಿಗೆ ಸಾಮಾನ್ಯವಾಗಿ ಪೂಜೆ ಸಲ್ಲಿಸುವ ಪ್ರಕಾಶ್​​​​ ಅಮಾವಾಸ್ಯೆ ಮತ್ತು ವಿಶೇಷ ದಿನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗ್ರಾಮದಲ್ಲಿ ಉಡಚಮ್ಮ ದೇವಿ ಜಾತ್ರೆ ನಡೆಯುತ್ತಿರುವ ಕಾರಣ ಏಳು ದಿನಗಳ ಕಾಲ ಪ್ರಕಾಶ್ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಿದ್ದಾರೆ.

ಅಪ್ಪು ಪುತ್ಥಳಿಗೆ ತೆಂಗಿನಕಾಯಿ ಬಾಳೆಹಣ್ಣು ನೈವಿದ್ಯ ಹಿಡಿಯುವ ಪ್ರಕಾಶ್​, ಕರ್ಪೂರ ಬೆಳಗಿ ಸಾಂಬ್ರಾಣಿ ಹಾಕಿ ಪೂಜೆ ಸಲ್ಲಿಸುತ್ತಾರೆ. ಇವರ ಕಾರ್ಯಕ್ಕೆ ತಾಯಿ ಮತ್ತು ಪತ್ನಿ ಸಾಥ್​ ನೀಡುತ್ತಾರೆ. ಪುನೀತ್​ ರಾಜಕುಮಾರ್​ ಅಪರೂಪದ ಭಾವಚಿತ್ರಗಳು ಅವರು ನಟಿಸಿದ ಸಿನಿಮಾದ ಹೆಸರುಗಳನ್ನು ದೇವಸ್ಥಾನದಲ್ಲಿ ಹಾಕಲಾಗಿದೆ. ಅಭಿಮಾನಿಗಳು ತಂಡೋಪತಂಡವಾಗಿ ಬಂದು ಅಪ್ಪು ಮೂರ್ತಿಯನ್ನು ಕಣ್ತುಂಬಿಕೊಳ್ಳುತ್ತಿರುವುದು ಪ್ರಕಾಶ್ ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂತಸ ತಂದಿದೆ.

ಇದನ್ನೂ ಓದಿ: ಹಾವೇರಿಯ ಅಭಿಮಾನಿ ಕಟ್ಟಿದ ಪುನೀತ್​ ದೇಗುಲದಲ್ಲಿ ವಿಶೇಷ ಪೂಜೆ; ಗ್ರಾಮಸ್ಥರಿಂದ ನಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.