ವಿದ್ಯುತ್ ಬಿಲ್ ಕಟ್ಟಲು ಗ್ರಾಮಸ್ಥರ ಹಿಂದೇಟು: ಬಿಲ್ ಕಲೆಕ್ಟರ್ ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ - ಗ್ರಾಮಸ್ಥರು ಲೈನ್ಮ್ಯಾಗೆ ಫುಲ್ ಕ್ಲಾಸ್
🎬 Watch Now: Feature Video
ಧಾರವಾಡ: ವಿದ್ಯುತ್ ಬಿಲ್ ಕೊಡಲು ಹೋದ ಕೆಇಬಿ ಲೈನ್ಮ್ಯಾನ್ ಅನ್ನು ಪುಲ್ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ಬಿಲ್ ಕಟ್ಟು ಎಂದು ಪಟ್ಟು ಹಿಡಿದಿದ್ದ ಲೈನ್ಮ್ಯಾನ್ ಅನ್ನು ಗ್ರಾಮಸ್ಥರು ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಬಿಲ್ ಕೊಡಲು ಬಂದ ಬಿಲ್ ಕಲೆಕ್ಟರ್ ಜೊತೆ ವಾಗ್ವಾದಕ್ಕಿಳಿದ ಗ್ರಾಮಸ್ಥರು ಬಿಲ್ ಕಟ್ಟುವುದಿಲ್ಲ ಏನ್ ಮಾಡಿಕೊಳ್ತೀಯಾ ಮಾಡ್ಕೋ ಹೋಗು ನಮಗೆ ಕರೆಂಟ್ ಬಿಲ್ ಕೊಡಬೇಡ, ನೀನು ಹೋಗು ಹಿರಿಯ ಅಧಿಕಾರಿಗಳು, ಸರ್ಕಾರಕ್ಕೆ ಹೇಳೋಗು ಎಂದು ಹೇಳಿದ್ದಾರೆ.
ಶಿರಕೋಳ ಗ್ರಾಮಸ್ಥರು ಲೈನ್ಮ್ಯಾಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದು, ವಿದ್ಯುತ್ ಬಿಲ್ ಬುಕ್ ಕಸಿದುಕೊಳ್ಳಲು ಗ್ರಾಮಸ್ಥರು ಯತ್ನಿಸಿದ್ದಾರೆ. ಬಿಲ್ ಕೊಡಲು ನಮ್ಮ ಮನೆಗೆ ಬರಬೇಡ ಹೇಳಿದಾಗ, ಬಿಲ್ ಕಟ್ಟದಿದ್ದರೆ ಲೈನ್ ಕಟ್ ಮಾಡೋದಾಗಿ ಹೇಳಿದ್ದಾರೆ. ಆದರೂ ಯಾವುದಕ್ಕೂ ಜಗ್ಗದ ಗ್ರಾಮಸ್ಥರು ಅರ್ಧ ಗಂಟೆಗೂ ಹೆಚ್ಚು ಕಾಲ ಲೈನ್ಮ್ಯಾನ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಬಿಲ್ ಕಟ್ಟಬೇಡಿ ಎಂದು ಗ್ರಾಮಸ್ಥರು ಕಿರಿಕ್ ಮಾಡಿದ್ದಾರೆ.
ಇದನ್ನೂ ನೋಡಿ: ಹೆದ್ದಾರಿಯಲ್ಲಿ ಬಿಯರ್ ಸಾಗಿಸುತ್ತಿದ್ದ ವಾಹನ ಪಲ್ಟಿ; ಮುಗಿಬಿದ್ದು ಬಾಟಲಿ ಕದ್ದೊಯ್ದ ಜನರು- ವಿಡಿಯೋ