ರೈಲಿನಡಿಗೆ ಬೀಳುತ್ತಿದ್ದ ಪ್ರಯಾಣಿಕನ ಪ್ರಾಣ ಉಳಿಸಿದ ರೈಲ್ವೆ ಪೊಲೀಸ್: ವಿಡಿಯೋ
🎬 Watch Now: Feature Video
ವಿಜಯನಗರ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ರೈಲಿನಡಿಗೆ ಸಿಲುಕುತ್ತಿದ್ದ ಪ್ರಯಾಣಿಕನನ್ನು ರೈಲ್ವೆ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ರಾಠೋಡ್ ಅವರು ಜೀವ ಉಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ. ಈ ಘಟನೆ ಇತ್ತೀಚೆಗೆ ಹೊಸಪೇಟೆ ರೈಲು ನಿಲ್ದಾಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಪ್ಲಾಟ್‌ಫಾರಂ ಮೇಲೆ ನಿಂತಿದ್ದ ಪೊಲೀಸ್ ಪೇದೆ ರೈಲಿನ ಅಡಿಗೆ ಬೀಳುತ್ತಿದ್ದವನನ್ನು ಕೈ ಹಿಡಿದು ಮೇಲೆತ್ತಿ ರಕ್ಷಿಸಿದ್ದಾರೆ. ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್ ಹೊರಟಿದ್ದ ವೇಳೆ, ರೈಲು ನಿಲ್ದಾಣದಲ್ಲಿ ಶೌಚಾಲಯದಲ್ಲಿ ಶೌಚಕ್ಕೆಂದು ಹೋದಾಗ 5 ರೂ. ಕೇಳಿದ್ದು, ಹಣ ಯಾಕೆ ಪಾವತಿಸಬೇಕೆಂದು ಅದೇ ವೇಳೆಗೆ ಪ್ಲಾಟ್ಫಾರ್ಮ್ನಲ್ಲಿ ನಿಂತಿದ್ದ ಬೆಳಗಾವಿ-ಸಿಕಂದರಾಬಾದ್ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ. ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ವೇಗವಾಗಿ ಚಲಿಸುತ್ತಿದ್ದು, ಅದರಿಂದ ಇಳಿಯಲು ಹೋಗಿ ಸ್ವಲ್ಪದರಲ್ಲೇ ಕಾಲು ಜಾರಿ ರೈಲಿನ ಅಡಿಗೆ ಸಿಲುಕುತ್ತಿದ್ದರು.
ಇದೇ ವೇಳೆಗೆ ಅಲ್ಲೆ ಇದ್ದ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ರಾಠೋಡ್ ಪ್ರಯಾಣಿಕನ ಕೈಹಿಡಿದು ಮೇಲೆತ್ತಿದ್ದಾರೆ. ಜತೆಗಿದ್ದ ರೈಲ್ವೆ ಪೊಲೀಸ್ ಗುರುರಾಜ್ ಅವರು ಕೂಡ ಕೊನೆಯಲ್ಲಿ ಸಹಕರಿಸಿ ಜೀವ ಕಾಪಾಡಿದ್ದಾರೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ರೈಲ್ವೆ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ.
ಇದನ್ನೂ ಓದಿ: ಸೀರೆಯುಟ್ಟು ಫುಟ್‌ಬಾಲ್ ಆಡಿದ ಮಹಿಳೆಯರು- ವಿಡಿಯೋ