ಕೋಟಾ, ರಾಜಸ್ಥಾನ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಅನುಗುಣವಾಗಿ ವರ್ಷಕ್ಕೆ ಎರಡು ಬಾರಿ 10 ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ನಡೆಸಲು ಯೋಜಿಸಿದೆ. ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಕುರಿತು ಕರಡು ನೀತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಬಗ್ಗೆ ಎಲ್ಲರಿಂದ ಅಭಿಪ್ರಾಯ ಕೇಳಲಾಗಿದೆ. ಈ ಕರಡು ನೀತಿಯನ್ನು CBSE ಮಂಗಳವಾರ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಮಾರ್ಚ್ 9 ರೊಳಗೆ ಕರಡು ನೀತಿಯ ಬಗ್ಗೆ ಎಲ್ಲಾ ಪಾಲುದಾರರಿಂದ ಪ್ರತಿಕ್ರಿಯೆ ಕೇಳಲಾಗಿದೆ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ಹೇಳಿದ್ದಾರೆ. ಸಿಬಿಎಸ್‌ಇ ಸ್ವೀಕರಿಸುವ ಸಲಹೆಗಳ ಆಧಾರದ ಮೇಲೆ ಕರಡು ನೀತಿಯನ್ನು ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗಿರುವ ಕರಡು ನೀತಿಯ ಪ್ರಕಾರ ಫೆಬ್ರವರಿ 15 ರ ನಂತರ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗುತ್ತವೆ.
ಹೇಗಿರುತ್ತವೆ ಪರೀಕ್ಷೆಗಳು?: 10ನೇ ತರಗತಿ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ವಿಷಯವಾರು ವರ್ಗೀಕರಣ ಮಾಡಲಾಗಿದೆ ಎಂದು ತಜ್ಞ ಶರ್ಮಾ ತಿಳಿಸಿದ್ದಾರೆ. ಇದರ ಪ್ರಕಾರ ಹಿಂದಿ, ಇಂಗ್ಲಿಷ್, ಐಚ್ಛಿಕ (3 ವಿಷಯಗಳು), ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳನ್ನು ಹೊರತುಪಡಿಸಿ, ವಿಷಯಗಳನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. NEP-2020 ರ ಪ್ರಕಾರ, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳನ್ನು ಒತ್ತಡದಿಂದ ಹೊರಗಿಡಲು ಈ ಪ್ರಯತ್ನವನ್ನು ಮಾಡಲಾಗುತ್ತಿದೆ.
ಒಂದು ಮುಖ್ಯ ಪರೀಕ್ಷೆ- ಇನ್ನೊಂದು ಸುಧಾರಣೆ ಪರೀಕ್ಷೆ: ಈ ಹೊಸ ನೀತಿ ಅಡಿ ವಿಧ್ಯಾರ್ಥಿಗಳು ಮೊದಲ ಬಾರಿಗೆ ಮುಖ್ಯ ಪರೀಕ್ಷೆಯಾಗಿ ಮತ್ತು ಎರಡನೇ ಬಾರಿಗೆ ಸುಧಾರಣೆಗಾಗಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವಕಾಶ ಸಿಗಲಿದೆ. ಅಭ್ಯರ್ಥಿಯು ತನ್ನ ಫಲಿತಾಂಶದಲ್ಲಿ ಸುಧಾರಣೆ ಆಗಬೇಕು ಎಂದು ಬಯಸಿದರೆ, ಸ್ವತಃ ಈ ಸುಧಾರಣೆ ಪರೀಕ್ಷೆ ಎದುರಿಸಲು ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ನಿಯಮಗಳ ಪ್ರಕಾರ, ಎರಡೂ ಪರೀಕ್ಷೆಗಳನ್ನು ಸಂಪೂರ್ಣ ಪಠ್ಯಕ್ರಮದ ಪ್ರಕಾರವೇ ನಡೆಸಲಾಗುತ್ತದೆ. ಅಂತಿಮವಾಗಿ ಸಾರ್ವಜನಿಕವಾಗಿ ಬರುವ ಅಭಿಪ್ರಾಯದ ಆಧಾರದ ಮೇಲೆ ಮಂಡಳಿ ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ.
ಹೊಸ ಕರಡಿನಲ್ಲಿ ಈ ರೀತಿಯ ವೇಳಾಪಟ್ಟಿ ನೀಡಲಾಗಿದೆ
- ಮೊದಲ ಬಾರಿಯ EXAM - ಮುಖ್ಯ ಪರೀಕ್ಷೆ: ಫೆಬ್ರವರಿ 17 ರಿಂದ ಮಾರ್ಚ್ 6, 2026
- ಎರಡನೇ ಬಾರಿ- ಸುಧಾರಣಾ ಪರೀಕ್ಷೆ: ಮೇ 5 ರಿಂದ ಮೇ 20 ರವರೆಗೆ
ಇದನ್ನು ಓದಿ: ಕ್ಲಾಸ್ 10- 12 ಬೋರ್ಡ್ ಪರೀಕ್ಷೆಗೆ ಶೇ 75ರಷ್ಟು ಹಾಜರಾತಿ ಕಡ್ಡಾಯ: ಸಿಬಿಎಸ್ಸಿ