ETV Bharat / state

ನಬಾರ್ಡ್​ನಿಂದ ಕರ್ನಾಟಕಕ್ಕೆ ₹4.47 ಲಕ್ಷ ಕೋಟಿ ಆದ್ಯತಾ ವಲಯದ ಸಾಲ ಸಾಮರ್ಥ್ಯ ಯೋಜನೆ: ಉಮಾ ಮಹಾದೇವನ್ - NABARD CREDIT PLAN

ರಾಜ್ಯದ ಆದ್ಯತಾ ವಲಯಗಳಿಗೆ ಅಗತ್ಯ ಇರುವ ಆರ್ಥಿಕ ನೆರವಿನ ಕುರಿತು ನಬಾರ್ಡ್‌ ಸಿದ್ಧಪಡಿಸಿರುವ ಆದ್ಯತಾ ಪತ್ರವನ್ನು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಅವರು ಬಿಡುಗಡೆಗೊಳಿಸಿದರು.

nabard-hosted-its-state-credit-seminar-in-bengaluru
ನಬಾರ್ಡ್ 'ರಾಜ್ಯ ಸಾಲ ಗೋಷ್ಠಿ' ವಿಚಾರ ಸಂಕಿರಣ (ETV Bharat)
author img

By ETV Bharat Karnataka Team

Published : Feb 26, 2025, 7:02 AM IST

ಬೆಂಗಳೂರು: ನಬಾರ್ಡ್ ರಾಜ್ಯಕ್ಕಾಗಿ 2025-26ನೇ ಸಾಲಿನಲ್ಲಿ 4.47 ಲಕ್ಷ ಕೋಟಿ ರೂ.ಗಳ ಆದ್ಯತಾ ವಲಯದ ಸಾಲ ಸಾಮರ್ಥ್ಯ ಯೋಜನೆ ರೂಪಿಸಿದೆ. ಇದು 2024-25ನೇ ಸಾಲಿನಲ್ಲಿ ಮಾಡಿದ ಅಂದಾಜಿಗಿಂತ ಶೇ.12.55ರಷ್ಟು ಅಧಿಕವಾಗಿದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹದೇವನ್ ತಿಳಿಸಿದರು.

ನಬಾರ್ಡ್‍ನ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ನಬಾರ್ಡ್ ಆಯೋಜಿಸಿದ್ದ 'ರಾಜ್ಯ ಸಾಲ ಗೋಷ್ಠಿ' ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದ ಗ್ರಾಮೀಣ ಜೀವನೋಪಾಯಗಳನ್ನು ಬಲಪಡಿಸುವುದರ ಜೊತೆಗೆ ಕೃಷಿಯ ಸಾಮರ್ಥ್ಯ, ಆರ್ಥಿಕ ಬಲವನ್ನು ಹೆಚ್ಚಿಸಲು ನಬಾರ್ಡ್ ತೋರಿದ ನಿರಂತರ ಬದ್ಧತೆಯನ್ನು ಶ್ಲಾಘಿಸಿದರು.

ಕರ್ನಾಟಕವು ಹಿಂದಿನಿಂದಲೂ ಒಂದು ಕ್ರಿಯಾಶೀಲ ರಾಜ್ಯವಾಗಿದ್ದು, ತನ್ನ ಕೃಷಿ ಬೇರುಗಳನ್ನು ಕೈಗಾರಿಕಾ ಪ್ರಗತಿಯೊಂದಿಗೆ ಸಮತೋಲನಗೊಳಿಸುತ್ತಿದೆ. ಕೃಷಿ ಮಹತ್ವದ ಆಧಾರ ಸ್ತಂಭವಾಗಿ ಉಳಿದಿದ್ದರೂ, ಇಂದಿನ ಗ್ರಾಮೀಣ ಪರಿವರ್ತನೆಯು ತಂತ್ರಜ್ಞಾನ ಅಳವಡಿಕೆ, ಮೂಲಸೌಕರ್ಯ ವಿಸ್ತರಣೆ, ಹವಾಮಾನ ಸೂಕ್ಷ್ಮ ಕಾರ್ಯಾಚರಣೆಗಳು ಮತ್ತು ಕೃಷಿಯೇತರ ಉದ್ಯೋಗಾವಕಾಶಗಳಿಂದ ಪ್ರೇರಿತವಾಗಿದೆ ಎಂದರು.

ಸಾಲ ಸಾಮರ್ಥ್ಯ ಬಳಸಿಕೊಳ್ಳಲು ರಾಜ್ಯ ಸುಸಜ್ಜಿತ: ಮೂಲ ಸೌಕರ್ಯದ ಸೃಷ್ಟಿಗೆ ಸಾರ್ವಜನಿಕ ಹೂಡಿಕೆಗಳು ಸಾಲದ ಪ್ರಯೋಜನವನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಮುಖ ಉತ್ಪ್ರೇರಕವಾಗಿರುವುದರಿಂದ ಗ್ರಾಮೀಣ ಸಂಪರ್ಕ, ನೀರಾವರಿ ಮೂಲಸೌಕರ್ಯ, ಮಾರುಕಟ್ಟೆ ಮತ್ತು ಉಗ್ರಾಣ ಸೌಲಭ್ಯಗಳು, ಆರೋಗ್ಯ ಮತ್ತು ನೈರ್ಮಲ್ಯ, ಕುಡಿಯುವ ನೀರಿನ ಸರಬರಾಜು ಇತ್ಯಾದಿ ಗ್ರಾಮೀಣ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಅಂದಾಜು ಸಾಲ ಸಾಮರ್ಥ್ಯವನ್ನು ಬಳಸಿಕೊಳ್ಳಲು ರಾಜ್ಯ ಸುಸಜ್ಜಿತವಾಗಿದೆ ಎಂದು ಉಮಾ ಮಹದೇವನ್ ಹೇಳಿದರು.

ನಬಾರ್ಡ್ ಜೀವಾ ಯೋಜನೆಯಡಿ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಸಿದ್ದನಗೌಡನಹಳ್ಳಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬುಕ್ಕಾಸಾಗರದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕಾಮಾರವರಿಪಲ್ಲಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಕಾರ್ಯಕ್ರಮ ಕೃಷಿ ಪರಿಸರ ಪರಿವರ್ತನೆಯ ವಿಧಾನವಾಗಿದೆ ಎಂದರು.

ನಬಾರ್ಡ್ ಗ್ರಾಮೀಣ ಮಹಿಳೆಯರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಇದ್ದಾರೆ. ಸರ್ಕಾರ ಸಹ ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಹೆಯಾನ 2 ಸಾವಿರ ನೀಡುತ್ತಿದೆ. ಅಲ್ಲದೆ, ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಉಪಯೋಗವಾಗುತ್ತಿದೆ. ಇಂದು ಮಹಿಳೆಯರು ಬ್ಯಾಂಕಿನಲ್ಲೂ ಸಹ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿ (ಆರ್‍ಐಡಿಎಫ್) ಮೂಲಕ ಗ್ರಾಮೀಣ ಮೂಲ ಸೌಕರ್ಯಗಳ ಸೃಷ್ಟಿಗೆ ಆರ್ಥಿಕ ನೆರವು ನೀಡುವ ಮೂಲಕ ನಬಾರ್ಡ್ ಗ್ರಾಮೀಣ ಮೂಲ ಸೌಕರ್ಯ ಸೃಷ್ಟಿಸುವಲ್ಲಿ ರಾಜ್ಯ ಸರ್ಕಾರದ ಪರಿಶ್ರಮಗಳಿಗೆ ಪೂರಕವಾಗಿದೆ ಎಂದು ಉಮಾ ಮಹದೇವನ್ ತಿಳಿಸಿದರು.

ಇದನ್ನೂ ಓದಿ: 'ನೀರಿನ ಗುಣಮಟ್ಟ ಸುಧಾರಣೆಗೆ IISCಯ 'ಝೀರೋ ಬ್ಯಾಕ್ಟೀರಿಯಾ' ತಂತ್ರಜ್ಞಾನ ಅಳವಡಿಸಲು ಕ್ರಮ'

ಇದೇ ವೇಳೆ, ಕರ್ನಾಟಕ ಪ್ರಾದೇಶಿಕ ಕಚೇರಿಯ ನಬಾರ್ಡ್​​ ಮುಖ್ಯ ವ್ಯವಸ್ಥಾಪಕರಾದ ಕೆವಿಎಸ್‍ಎಸ್‍ಎಲ್‍ವಿ ಪ್ರಸಾದ್ ರಾವ್ ಮಾತನಾಡಿ, ಕರ್ನಾಟಕದಲ್ಲಿ ಆದ್ಯವಲಯದ ಸಾಲಕ್ಕಾಗಿ ರೂಪಿಸಿರುವ ಅಂದಾಜು 4.47 ಲಕ್ಷ ಕೋಟಿ ರೂ.ಗಳ ಸಾಲ ಸಾಮರ್ಥ್ಯದಲ್ಲಿ ಕೃಷಿಯ ಪಾಲು 2.04 ಲಕ್ಷ ಕೋಟಿ ರೂ., ಎಂಎಸ್‍ಎಂಇ ಪಾಲು 1.88 ಲಕ್ಷ ಕೋಟಿ ರೂ. ಮತ್ತು ಇತರ ಆದ್ಯತೆಯ ವಲಯದ ಚಟುವಟಿಕೆಗಳ ಪಾಲು 56 ಲಕ್ಷ ಕೋಟಿ ರೂ. ಎಂದು ನಿಗದಿಪಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆರ್​​​ಬಿಐ ಪ್ರಾದೇಶಿಕ ನಿರ್ದೇಶಕಿ ಸೋನಾಲಿ ಸೇನ್ ಗುಪ್ತಾ, ಎಸ್‍ಬಿಐ ಚೀಫ್ ಜನರಲ್ ಮ್ಯಾನೇಜರ್ ಜೂಹಿ ಸ್ಮಿತಾ ಸಿನ್ಹಾ, ಕೆನರಾ ಬ್ಯಾಂಕ್ ಇ.ಡಿ ಭವೇಂದ್ರ ಕುಮಾರ್, ಕರ್ನಾಟಕದ ಎಸ್‍ಎಲ್‍ಬಿಸಿಯ ಸಂಚಾಲಕ ಎಂ.ಭಾಸ್ಕರ ಚಕ್ರವರ್ತಿ ಹಾಗೂ ರಾಜ್ಯ ಸರ್ಕಾರದ ಮತ್ತು ಬ್ಯಾಂಕ್ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ವಿಧಾನಸೌಧದಲ್ಲಿ ಶ್ವಾನಗಳ ಹಾವಳಿ ತಪ್ಪಿಸಲು ಶೆಲ್ಟರ್ ವ್ಯವಸ್ಥೆ: ಯು.ಟಿ.ಖಾದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.