ಗರ್ಭಿಣಿಯ ಪ್ರಾಣ ಕಾಪಾಡಿದ ಭಾರತೀಯ ಸೇನೆ- ವಿಡಿಯೋ
🎬 Watch Now: Feature Video
ಕಿಶ್ತ್ವಾರ್(ಜಮ್ಮು ಮತ್ತು ಕಾಶ್ಮೀರ): ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಭಾರತೀಯ ಸೇನಾಪಡೆ ರಕ್ಷಣೆ ಮಾಡಿ ಆಸ್ಪತ್ರೆಗೆ ಸ್ಥಳಾಂತರಿಸಿದೆ. ಇಲ್ಲಿಯ ನವಪಾಚಿ ಪ್ರದೇಶದ ಮಹಿಳೆಯ ಆರೋಗ್ಯದಲ್ಲಿ ಏಕಾಏಕಿ ಸಮಸ್ಯೆ ಕಾಣಿಸಿಕೊಂಡಿತ್ತು. ನವಪಾಚಿ ಪ್ರದೇಶದಲ್ಲಿ ಆಸ್ಪತ್ರೆ ವ್ಯವಸ್ಥೆ ಇಲ್ಲದ ಕಾರಣ ಕಿಶ್ತ್ವಾರಕ್ಕೆ ಕರೆದೊಯ್ಯಬೇಕಿತ್ತು. ದಟ್ಟ ಹಿಮ ಬಿದ್ದ ಕಾರಣ ಆ ಪ್ರದೇಶದ ಮುಖ್ಯರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಿಲ್ಲ.
ವಿಷಯ ತಿಳಿದ ಭೂ ಮತ್ತು ವಾಯು ಸೇನಾ ಪಡೆಯು ಜಂಟಿಯಾಗಿ ಸಹಾಯಕ್ಕೆ ದೌಡಾಯಿಸಿ ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹೆಲಿಪ್ಯಾಡ್ ವರೆಗೂ ಕರೆತಂದಿದ್ದಾರೆ. ಅಲ್ಲಿಂದ ಏರ್ಲಿಫ್ಟ್ ಮೂಲಕ ಕಿಶ್ತ್ವಾರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಸೈನಿಕರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿವೆ.
ಇದನ್ನೂ ಓದಿ: ಮೂಲಸೌಕರ್ಯ ಇಲ್ಲದೇ ಪರದಾಟ: ರೋಗಿಯನ್ನು ಡೋಲಿಯಲ್ಲಿ ಹೊತ್ತು 10 ಕಿಮೀ ದೂರದ ಆಸ್ಪತ್ರೆಗೆ ರವಾನೆ