ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
🎬 Watch Now: Feature Video
ನಾಗಪುರ (ಮಹಾರಾಷ್ಟ್ರ): ಇಲ್ಲಿನ ವಥೋಡಾ ಪ್ರದೇಶದ ಅನ್ಮೋಲ್ ನಗರದ ಶಿವಾಜಿ ಪಾರ್ಕ್ ಬಳಿ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ನಡೆಸಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗು ಅಳುವ ಧ್ಬನಿ ಕೇಳಿ ಮಗುವಿನ ತಾಯಿ ತಕ್ಷಣವೇ ಹೊರಬಂದು ಬೀದಿ ನಾಯಿಗಳಿಂದ ಮಗುವನ್ನು ರಕ್ಷಿಸಿದ್ದಾರೆ.
ರಸ್ತೆಯಲ್ಲಿ ಓಡಾಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ಗುಂಪೊಂದು ಏಕಾಏಕಿ ದಾಳಿ ನಡೆಸಿತ್ತು. ಮಗುವನ್ನು ನಾಯಿಗಳು ಕಚ್ಚಿ ಎಳೆದುಕೊಂಡು ಹೋಗಲು ಶುರುಮಾಡಿದ್ದು, ಮಗುವಿನ ಅಳಲು ಕೇಳಿ ತಕ್ಷಣವೇ ಹೊರಬಂದ ಮಗುವಿನ ತಾಯಿ ಬೀದಿ ನಾಯಿಗಳಿಂದ ರಕ್ಷಿಸಿದ್ದಾರೆ. ಬೀದಿ ನಾಯಿಗಳ ದಾಳಿಯಿಂದ ಮಗುವಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಘಟನೆಯಿಂದ ರಸ್ತೆ ಓಡಾಡಲು ಜನರು ಭಯಭೀತರಾಗಿದ್ದಾರೆ.
ಬೀದಿ ನಾಯಿಗಳ ಜನಸಂಖ್ಯೆ ಹೆಚ್ಚಳ: ಪ್ರಸ್ತುತ ನಾಗಪುರ ನಗರದಲ್ಲಿ ಸುಮಾರು ಒಂದು ಲಕ್ಷ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. 2018ರಲ್ಲಿ ಬೀದಿ ನಾಯಿಗಳ ಸಂಖ್ಯೆ 81 ಸಾವಿರದಷ್ಟಿತ್ತು. ದಿನೇ ದಿನೆ ಬೀದಿ ನಾಯಿಗಳ ದಾಳಿ ಹೆಚ್ಚುತ್ತಿರುವ ಕಾರಣ ಸಾರ್ವಜನಿಕರು ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ನಾಗಪುರ ಮುನ್ಸಿಪಲ್ ಕಾರ್ಪೊರೇಷನ್ಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Watch.. ವಾಹನದ ಹಿಂದೆ ಬೆನ್ನಟ್ಟಿದ ನಾಯಿಗಳು, ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದ ವಾಹನ