ಟ್ಯಾಂಕರ್ನಿಂದ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ ಸೋರಿಕೆ: ಗ್ಯಾಸ್ ಲೀಕ್ ಆಗುತ್ತಿದೆಯೆಂದು ಗಾಬರಿಗೊಂಡ ಜನ
🎬 Watch Now: Feature Video
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸಮೀಪ ಟ್ಯಾಂಕರ್ನಿಂದ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ ಸೋರಿಕೆಯಾಗಿದ್ದು, ಗ್ಯಾಸ್ ಸೋರಿಕೆಯಾಗುತ್ತಿದೆಯೆಂದು ಪ್ರಯಾಣಿಕರು ಗಾಬರಿಗೊಂಡ ಘಟನೆ ನಡೆದಿದೆ. ಕಾಪು ಉಳಿಯಾರಗೊಳಿ ದಂಡತೀರ್ಥ ಬಳಿ ಬ್ರಹತ್ ಟ್ಯಾಂಕರ್ವೊಂದರಲ್ಲಿ ತಾಂತ್ರಿಕ ಕಾರಣದಿಂದ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ ಸೋರಿಕೆಯಾತ್ತಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರು ಪರಿಶೀಲನೆ ನಡೆಸಿದರು. ಪರಿಶೀಲನೆ ಮುಗಿಯುವವರೆಗೆ ಪೊಲೀಸರು ಏಕಪಥವಾಗಿ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು. ಕೆಲ ಹೊತ್ತು ಹೆದ್ದಾರಿಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.
Last Updated : Feb 3, 2023, 8:24 PM IST