ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ನಲ್ಲಿ ಖಾಲಿ ಇರುವ ಕಂಪ್ಯೂಟರ್ ಆಪರೇಟರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಸಮರ್ಥ್ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ 4 ತಿಂಗಳ ಅವಧಿಗೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ವಿದ್ಯಾರ್ಹತೆ: ಪಿಯುಸಿ ವಿದ್ಯಾರ್ಹತೆಯ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವೇತನ: ಮಾಸಿಕ 25 ಸಾವಿರ ರೂ ಗೌರವಧನ.
ಆಯ್ಕೆ ಪ್ರಕ್ರಿಯೆ: ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿ ಪ್ರಮಾಣ ಪತ್ರದೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಬಹುದು.
ನೇರ ಸಂದರ್ಶನದ ವಿವರ: ಡಿಸೆಂಬರ್ 9ರಂದು ಬೆಳಗ್ಗೆ 10ರಿಂದ ನೇರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು 9.30ಕ್ಕೆ ವಾಕ್ ಇನ್ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.
ವಿಳಾಸ: ಕೇಂದ್ರ ರೇಷ್ಮೆ ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಸಿಎಸ್ಬಿ ಕಾಂಪ್ಲೆಕ್ಸ್, ಬಿಟಿಎಂ ಲೇಔಟ್, ಮಡಿವಾಳ, ಬೆಂಗಳೂರು- 560068
ಈ ಕುರಿತು ಹೆಚ್ಚಿನ ಮಾಹಿತಿಗೆ csb.gov.in ಇಲ್ಲಿಗೆ ಭೇಟಿ ನೀಡಿ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಟೆಕ್ನಿಕಲ್ ಹುದ್ದೆಗಳು: ಕೆಕೆಆರ್ಟಿಸಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕ ಸಿಬ್ಬಂದಿಯ ಭರ್ತಿಗೆ ವಾಕ್ ಇನ್ ಇಂಟರ್ವ್ಯೂ ನಡೆಸಲಾಗುತ್ತದೆ. ಒಟ್ಟು 50 ತಾಂತ್ರಿಕ ಸಹಾಯಕರ ಹುದ್ದೆಗಳಿವೆ. ಬೀದರ್ ವ್ಯಾಪ್ತಿಯಲ್ಲಿ ನೇಮಕಾತಿ ನಡೆಯಲಿದೆ.
ವಿದ್ಯಾರ್ಹತೆ: ತಾಂತ್ರಿಕ ಸಹಾಯಕ ಹುದ್ದೆಗೆ 10ನೇ ತರಗತಿ, ಐಟಿಐ, ಐಟಿಸಿ ಶಿಕ್ಷಣ ಹೊಂದಿರಬೇಕು. ವಯೋಮಿತಿ 18ರಿಂದ 35ವರ್ಷ ಮೀರಿರಬಾರದು. ಪ.ಜಾ, ಪ.ಪಂ, ಪ್ರವರ್ಗ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ. ಮಾಸಿಕ 16,550 ರೂ ಗೌರವಧನ ನೀಡಲಾಗುತ್ತದೆ. ಡಿಸೆಂಬರ್ 6 ಮತ್ತು 7ರಂದು ವಾಕ್ ಇನ್ ಸಂದರ್ಶನ ನಡೆಯಲಿದೆ.
ನೇರ ಸಂದರ್ಶನ ನಡೆಯುವ ಸ್ಥಳ: ಕ.ಕ.ರ.ಸಾ ನಿಗಮ ಹಳೆ ಬಸ್ ನಿಲ್ದಾಣದ ಬೀದರ್ ವಿಭಾಗೀಯ ಕಚೇರಿ, ಬೀದರ್. ಈ ಕುರಿತು ಹೆಚ್ಚಿನ ಮಾಹಿತಿಗೆ bidar.nic.in ಇಲ್ಲಿಗೆ ಭೇಟಿ ಮಾಡಿ.
ಇದನ್ನೂ ಓದಿ: ಕರ್ನಾಟಕ ಬ್ಯಾಂಕ್ನಲ್ಲಿ ಉದ್ಯೋಗಾವಕಾಶ: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ