ETV Bharat / state

2ನೇ ಮದುವೆಯಾಗಿದ್ದ ವೃದ್ಧನಿಗೆ 7 ಮದುವೆಯಾಗಿದ್ದ ಮಹಿಳೆ ವಂಚಿಸಿದ ಆರೋಪ: ಬೆಂಗಳೂರಲ್ಲಿ ಕೇಸ್​ ದಾಖಲು - CHEATING WITH MARRAIGE

7 ಮದುವೆಯಾದ ಮಹಿಳೆ ತನ್ನ ಜೊತೆ 8ನೇ ಬಾರಿ ಮದುವೆಯಾಗಿ ವಂಚಿಸಿದ್ದಾಳೆ ಎಂದು ಆರೋಪಿಸಿ ವೃದ್ಧರೊಬ್ಬರು ಬೆಂಗಳೂರಲ್ಲಿ ದೂರು ದಾಖಲಿಸಿದ್ದಾರೆ.

8 ಮದುವೆಯಾಗಿ ಮಹಿಳೆ ವಂಚನೆ
ಬಸವೇಶ್ವರ ನಗರ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : Jan 9, 2025, 9:18 PM IST

ಬೆಂಗಳೂರು: ಮಾಟ್ರಿಮೋನಿ ಮೂಲಕ ಸಂಗಾತಿಯನ್ನು ಹುಡುಕಿ ಎರಡನೇ ವಿವಾಹವಾಗಿದ್ದ ವೃದ್ಧನಿಗೆ ಏಳು ಮದುವೆಯಾಗಿರುವ ಪತ್ನಿಯೇ ವಂಚಿಸಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಂಚನೆಗೊಳಗಾದ ರಾಮಕೃಷ್ಣ ಎಂಬುವರು ನೀಡಿದ ದೂರು ಆಧರಿಸಿ ಪತ್ನಿ ಜಯಲಕ್ಷ್ಮೀ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಗಣಪತಿ ನಗರದಲ್ಲಿ ವಾಸವಾಗಿರುವ 62 ವರ್ಷದ ರಾಮಕೃಷ್ಣ ಅವರು ಖಾಸಗಿ ಕಂಪೆನಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ಎರಡನೇ ಮದುವೆಗಾಗಿ ಮ್ಯಾಟ್ರಿಮೋನಿಯಲ್ಲಿ ಸಂಗಾತಿ ಹುಡುಕುವಾಗ ಜಯಲಕ್ಷ್ಮೀ ಪರಿಚಯವಾಗಿದ್ದು, ಗುರು-ಹಿರಿಯರ ನಿಶ್ಚಯದಂತೆ 2020ರಲ್ಲಿ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪಿಎಫ್ ಹಣ ಕಬಳಿಸಲು ಯತ್ನ : ವಿವಾಹವಾದ ಕೆಲ ದಿನಗಳ ಬಳಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ರಾಮಕೃಷ್ಣ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ನ್ಯಾಯಾಲಯಕ್ಕೆ ಬಿ ರಿಪೋರ್ಟ್ ನೀಡಿದ್ದರು. ಇತ್ತೀಚೆಗೆ ತನ್ನ ಭವಿಷ್ಯನಿಧಿ (ಪಿಎಫ್) ಖಾತೆಯಲ್ಲಿ ಹಣ ಕಬಳಿಸಲು ವಿಜಯಲಕ್ಷ್ಮೀ ಸಂಚು ರೂಪಿಸಿದ್ದಳು. ಹಣ ನೀಡುವಂತೆ ಪ್ರತಿ ದಿನ ಮಾನಸಿಕ ಹಾಗೂ ಕಿರುಕುಳ ನೀಡುತ್ತಿದ್ದಳು. ಅಲ್ಲದೆ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು ಎಂದು ದೂರುದಾರರು ಆರೋಪಿಸಿದ್ದಾರೆ.

ಏಳು ಮದುವೆ ಮಾಡಿಕೊಂಡಿದ್ದ ಮಹಿಳೆ : ವಿಜಯಲಕ್ಷ್ಮೀ ಈ ಮೊದಲು ಏಳು ಮದುವೆಯಾಗಿದ್ದಳು. ಯಾರಿಗೂ ತಿಳಿಯದಂತೆ ಗೌಪ್ಯತೆ ಕಾಪಾಡಿಕೊಂಡು ತನಗೆ ಸುಳ್ಳು ಹೇಳಿ 8ನೇ ಮದುವೆ ಮಾಡಿಕೊಂಡಿದ್ಧಳು. ಈ ಹಿಂದೆ ವಿವಾಹವಾದ ಗಂಡಂದಿರ ಬಳಿ ಚಿನ್ನಾಭರಣ ಹಾಗೂ ನಗದು ದೋಚಿದ್ದಳು. ಹಣ ಕೇಳಿದರೆ ನೇಣು ಬಿಗಿದುಕೊಂಡು ಸಾಯುವುದಾಗಿ ಅವರಿಗೆ ಬೆದರಿಕೆ ಹಾಕುತ್ತಿದ್ದಳು. ತನಗೂ ಇದೇ ರೀತಿಯಲ್ಲಿ ಬೆದರಿಕೆ ಹಾಕಿ ಹಣ ವಸೂಲಿಗೆ ಮುಂದಾಗಿದ್ದಳು. ಮಂಡ್ಯ ಹಾಗೂ ಮದ್ದೂರು ನ್ಯಾಯಾಲಯಗಳಲ್ಲಿ ತನ್ನ ವಿರುದ್ಧ ಪತ್ನಿ ಸುಳ್ಳು ಚೆಕ್ ಬೌನ್ಸ್ ಕೇಸ್ ಹಾಕಿದ್ದಳು. ಮನೆಯಲ್ಲಿ ಯಾರೂ ಇಲ್ಲದಿರುವಾಗ ಇತರೆ ಆರೋಪಿಗಳನ್ನ ಕರೆಯಿಸಿಕೊಂಡು ಮದ್ಯಪಾನ ಮಾಡುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದಾಗಲೂ ಬೆದರಿಕೆ ತಂತ್ರ ಅನುಸರಿಸಿದ್ದಳು. ಯಾರೂ ಇಲ್ಲದಿರುವಾಗ ಮನೆಯಲ್ಲಿದ್ದ 25 ಲಕ್ಷ ಮೌಲ್ಯದ ಹಣ ಕಳ್ಳತನ ಮಾಡಿರುವುದಾಗಿ ದೂರುದಾರ ರಾಮಕೃಷ್ಣ ಆರೋಪಿಸಿದ್ದಾರೆ.

ಇದನ್ನೂ ಓದಿ: ಲೈಂಗಿಕ ಸಮಸ್ಯೆಗಳಿಗೆ ಔಷಧಿ ನೆಪದಲ್ಲಿ ವಂಚನೆ; ನಕಲಿ ಕಾಲ್ ಸೆಂಟರ್ ಪತ್ತೆ, 11 ಜನರ ಬಂಧನ

ಇದನ್ನೂ ಓದಿ: ಹಳೆ ನಾಣ್ಯ ಖರೀದಿಸುವುದಾಗಿ ಜಾಹೀರಾತು: ₹58 ಲಕ್ಷ ಕಳೆದುಕೊಂಡ ಮಂಗಳೂರಿಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.