Uber Denies Allegations: ಆನ್‌ಲೈನ್ ಟ್ಯಾಕ್ಸಿ ಸೇವಾ ಕಂಪನಿಗಳಾದ ಓಲಾ ಮತ್ತು ಉಬರ್ ಎರಡೂ ಕಂಪನಿಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ, ಈಗ ಸರ್ಕಾರ ಎರಡೂ ಕಂಪನಿಗಳಿಗೆ ನೋಟಿಸ್ ಕಳುಹಿಸಿದೆ. ಕಂಪನಿಯು ತನ್ನ ಆಪಲ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ವಿಭಿನ್ನ ದರಗಳನ್ನು ವಿಧಿಸುತ್ತಿರುವ ವಿಷಯದ ಬಗ್ಗೆ ಸರ್ಕಾರವು ಓಲಾ ಮತ್ತು ಉಬರ್‌ಗೆ ಈ ನೋಟಿಸ್ ಕಳುಹಿಸಿದೆ. ಸದ್ಯ ಈ ಬಗ್ಗೆ ಉಬರ್ ತನ್ನ ಪ್ರತಿಕ್ರಿಯೆ ನೀಡಿದೆ.
ಕೇಂದ್ರ ಸರ್ಕಾರ ನೀಡಿದ ನೋಟಿಸ್ ಬಳಿಕ ಉಬರ್ ಪ್ರತಿಕ್ರಿಯೆ ನೀಡಿದೆ. ನಾವು ಬಳಕೆದಾರರ ಫೋನ್ ಮಾಡೆಲ್ಗಳನ್ನು ಆಧರಿಸಿ ಬೆಲೆಗಳನ್ನು ನಿಗದಿಪಡಿಸುವುದಿಲ್ಲ. ನಾವು ತಪ್ಪು ತಿಳಿವಳಿಕೆಯನ್ನು ನಿವಾರಿಸಲು ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದೊಂದಿಗೆ (ಸಿಸಿಪಿಎ) ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಉಬರ್ ಹೇಳಿದೆ.
ಏನಿದು ಪ್ರಕರಣ: ಕಳೆದ ತಿಂಗಳು ಓಲಾ ಮತ್ತು ಉಬರ್ ಕಂಪನಿಗಳು ತನ್ನ ಆಪಲ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ವಿಭಿನ್ನ ದರಗಳನ್ನು ವಿಧಿಸುತ್ತಿರುವ ವಿಷಯದ ಬಗ್ಗೆ ಕೇಂದ್ರ ಸರ್ಕಾರವು ನೋಟಿಸ್ ಕಳುಹಿಸಿತ್ತು.
ಓದಿ: ಫೋನ್ ಮಾಡೆಲ್ ಆಧರಿಸಿ ಪ್ರಯಾಣ ದರ ನಿಗದಿ ಆರೋಪ: ಓಲಾ, ಉಬರ್‌ಗೆ ಸಿಸಿಪಿಎ ನೋಟಿಸ್
ಸಿಸಿಪಿಎಯಿಂದ ನೋಟಿಸ್: ಕಳೆದ ತಿಂಗಳು ಎಂದರೆ ಡಿಸೆಂಬರ್ನಲ್ಲಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು ಓಲಾ ಮತ್ತು ಉಬರ್‌ಗೆ ಈ ನೋಟಿಸ್ ಕಳುಹಿಸಿತ್ತು. ಈ ನೋಟಿಸ್ ಕಳುಹಿಸುವ ಮೂಲಕ ಸಿಸಿಪಿಎ ಕಂಪನಿಗಳು ತಮ್ಮ ಆಪಲ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಂದ ವಿಭಿನ್ನ ದರಗಳನ್ನು ಏಕೆ ವಿಧಿಸುತ್ತವೆ ಎಂಬುದಕ್ಕೆ ಉತ್ತರಗಳನ್ನು ನೀಡುವಂತೆ ಕೇಳಿತ್ತು.
ಗ್ರಾಹಕ ಸಚಿವ ಜೋಶಿ ಪೋಸ್ಟ್ನಲ್ಲಿನೇದೆ?: ಈ ಕುರಿತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಷಯದ ಬಗ್ಗೆ ಎರಡೂ ಕಂಪನಿಗಳು ಉತ್ತರಗಳನ್ನು ನೀಡುವಂತೆ ಕೋರಿದ್ದರು. ಆಪಲ್ ಮತ್ತು ಆಂಡ್ರಾಯ್ಡ್ ಆಧಾರಿತ ವಿವಿಧ ಮೊಬೈಲ್ ಮಾದರಿಗಳಿಗೆ ವಿಭಿನ್ನ ಬೆಲೆಗಳನ್ನು ವಿಧಿಸುವ ಆರೋಪದ ಮೇಲೆ ಪ್ರಮುಖ ಕ್ಯಾಬ್ ಸಂಗ್ರಾಹಕರಾದ ಓಲಾ ಮತ್ತು ಉಬರ್‌ಗೆ CCPA ಮೂಲಕ ನೋಟಿಸ್ ನೀಡಲಾಗಿದೆ ಮತ್ತು ಕಂಪನಿಯಿಂದ ಉತ್ತರವನ್ನು ಕೋರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದರು.
ಕಳೆದ ತಿಂಗಳು ಕೂಡ ಪ್ರಲ್ಹಾದ್ ಜೋಶಿ ಅವರು ಈ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವನ್ನು ಕೇಳಿದ್ದರು. ಆಹಾರ ವಿತರಣೆ ಮತ್ತು ಆನ್‌ಲೈನ್ ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳು ವಿಭಿನ್ನ ಬೆಲೆಗಳನ್ನು ಅನುಸರಿಸುತ್ತಿವೆಯೇ ಎಂದು ಕಂಡುಹಿಡಿಯುವಂತೆಯೂ ಹೇಳಲಾಗಿತ್ತು. ಸದ್ಯ ಮೊಬೈಲ್ ಫೋನ್‌ನ ಆಪರೇಟಿಂಗ್ ಸಿಸ್ಟಮ್‌ಗೆ ಅನುಗುಣವಾಗಿ ಗ್ರಾಹಕರಿಂದ ವಿಭಿನ್ನ ದರಗಳನ್ನು ವಿಧಿಸುತ್ತೇವೆ ಎಂಬ ಆರೋಪವನ್ನು ಉಬರ್ ಕಂಪನಿ ನಿರಾಕರಿಸಿದೆ.
ಓದಿ: ಕರ್ನಾಟಕವು ದೇಶದ ಯಂತ್ರೋಪಕರಣಗಳ ರಾಜಧಾನಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ