ಸರ್ಕಾರಿ ಬಸ್ನಲ್ಲಿ ಏಕಾಏಕಿ ಬೆಂಕಿ: ಡ್ರೈವರ್ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು - FIRE BREAKS OUT IN KSRTC BUS
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/03-12-2024/640-480-23031021-thumbnail-16x9-meg.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Dec 3, 2024, 1:28 PM IST
ಮೈಸೂರು: ಚಲಿಸುತ್ತಿದ್ದ ಸರ್ಕಾರಿ ಬಸ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಹೆಚ್. ಡಿ. ಕೋಟೆ ತಾಲ್ಲೂಕಿನ, ಹ್ಯಾಂಡ್ ಪೋಸ್ಟ್ ಬಳಿಯ ಜಕ್ಕನಹಳ್ಳಿ ಬಳಿ ನಡದಿದೆ.
ಹೆಚ್. ಡಿ. ಕೋಟೆ ಸಾರಿಗೆ ಘಟಕ್ಕೆ ಸೇರಿದ ಕೆಎಸ್ಆರ್ಟಿಸಿ ಬಸ್, ಹ್ಯಾಂಡ್ ಪೋಸ್ಟ್ನಿಂದ ಜಕ್ಕನಹಳ್ಳಿ ಬಳಿ ಬರುವಾಗ ಬಸ್ನ ಬಾನೆಟ್ ಬಳಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಬಸ್ ಚಾಲಕ ಹನುಮಂತಪ್ಪ, 15-16 ಪ್ರಯಾಣಿಕರನ್ನು ಬಸ್ನಿಂದ ಕೆಳಗೆ ಇಳಿಸಿ, ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದಾರೆ. ಬಾನೆಟ್ನ ಹಿಂಭಾಗದಲ್ಲಿ ಡೀಸೆಲ್ ಟ್ಯಾಂಕ್ ಬಳಿ ಹೊಗೆ ಬಂದಿದ್ದು, ತಕ್ಷಣ ಅಗ್ನಿ ಶಾಮಕ ದಳವರು ಸಾರ್ವಜನಿಕರ ಸಹಾಯದಿಂದ ಬೆಂಕಿ ನಂದಿಸಿದ್ದಾರೆ.
ಗ್ರಾಮಾಂತರ ಪ್ರದೇಶಕ್ಕೆ ಸರಿಯಾಗಿ ನಿರ್ವಹಣೆಯಿಲ್ಲದ ಬಸ್ಗಳನ್ನು ಕಳುಹಿಸಲಾಗುತ್ತದೆ. ಇದರಿಂದ ಈ ರೀತಿ ಅವಘಡಗಳು ಸಂಭಸುತ್ತಿವೆ. ಸಾರಿಗೆ ಇಲಾಖೆಯವರು ಗ್ರಾಮಾಂತರ ಪ್ರದೇಶಕ್ಕೆ ಉತ್ತಮ ಸ್ಥಿತಿಯಲ್ಲಿರುವ ಬಸ್ಗಳನ್ನು ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಬರಮತಿ - ದೌಲತ್‌ಪುರ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಬೆಂಕಿ; ತಪ್ಪಿದ ಭಾರಿ ದುರಂತ