ETV Bharat / opinion

ದೆಹಲಿ ಗದ್ದುಗೆಯಿಂದ ಆಪ್​​ ಅನ್ನೇ ಗುಡಿಸಿ ಹಾಕಿದ ಬಿಜೆಪಿ: ಮಿತ್ರ ಪಕ್ಷಕ್ಕೆ ಕಾಂಗ್ರೆಸ್​ ತಂದ ಆಪತ್ತೇನು? - DELHI ASSEMBLY ELECTION ANALYSIS

ರಾಷ್ಟ್ರ ರಾಜಧಾನಿಯಲ್ಲಿ ಆಪ್​ ಸೋತು, ಬಿಜೆಪಿ 27 ವರ್ಷಗಳ ಬಳಿಕ ಅಧಿಕಾರಕ್ಕೇರಿದೆ. ಚುನಾವಣೆಯ ಒಳನೋಟಗಳು ಏನೆಂಬುದನ್ನು ಈಟಿವಿ ಭಾರತ್​​ ಸಂಪಾದಕ ಬಿಲಾಲ್​ ಭಟ್​ ಅವರು ಇಲ್ಲಿ ವಿಶ್ಲೇಷಿಸಿದ್ದಾರೆ.

ದೆಹಲಿ ಗೆಲುವಿನ ಬಳಿಕ ವಿಜಯೋತ್ಸವದಲ್ಲಿ ಬಿಜೆಪಿ ನಾಯಕರು
ದೆಹಲಿ ಗೆಲುವಿನ ಬಳಿಕ ವಿಜಯೋತ್ಸವದಲ್ಲಿ ಬಿಜೆಪಿ ನಾಯಕರು (PTI)
author img

By Bilal Bhat

Published : Feb 8, 2025, 10:43 PM IST

ಹೈದರಾಬಾದ್​ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹವಾದ ಮುಂದೆ ಆಮ್​ ಆದ್ಮಿ ಪಕ್ಷ (ಆಪ್​) ಗುಡಿಸಿ ಹೋಗಿದೆ. ಶನಿವಾರ ಪ್ರಕಟವಾದ ರಾಷ್ಟ್ರ ರಾಜಧಾನಿಯ ಚುನಾವಣಾ ಫಲಿತಾಂಶವು ಶಾಸಕಾಂಗದಲ್ಲಿ ಕಾಂಗ್ರೆಸ್​​ನ ಗುರುತೇ ಇಲ್ಲದಂತೆ ಮಾಡಿದೆ. ದೇಶದ ಅತ್ಯಂತ ಹಳೆಯ ಪಕ್ಷವು ಸತತ ಮೂರನೇ ಬಾರಿಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ.

ಕಾಂಗ್ರೆಸ್​ ತಾನು ಸೋಲುವ ಜೊತೆಗೆ, ಮಿತ್ರಪಕ್ಷ ಆಪ್​ಗೂ ತೊಡರುಂಟು ಮಾಡಿದೆ. ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವ ಮೂಲಕ ಎಎಪಿಯ ಸೋಲಿಗೆ ಪರೋಕ್ಷವಾಗಿ ಕಾರಣವೂ ಆಯಿತು. ಇದರಿಂದಾಗಿ ಆಪ್​ ಕಡಿಮೆ ಅಂತರಗಳಲ್ಲಿ ಹಲವೆಡೆ ಸೋಲು ಕಂಡಿದೆ.

ಕಾಂಗ್ರೆಸ್​​-ಆಪ್​​ ಮತಗಳು ವಿಭಜನೆ : ಕಾಂಗ್ರೆಸ್​ ಎಲ್ಲ 70 ಸ್ಥಾನಗಳಲ್ಲಿ ಕಣಕ್ಕಿಳಿಯುವ ಮೂಲಕ ಆಪ್​ಗೆ ಆಪತ್ತು ತಂದಂತಾಗಿದೆ. ಅದರಲ್ಲೂ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಮಾಜಿ ಸಿಎಂ ಶೀಲಾ ದೀಕ್ಷಿತ್​ ಅವರ ಪುತ್ರ ಸಂದೀಪ್​ ದೀಕ್ಷಿತ್​ ಅವರನ್ನು ಎದುರಾಳಿಯನ್ನಾಗಿ ಇಳಿಸುವ ಮೂಲಕ ಸೋಲಿಗೆ ಷರಾ ಬರೆಯಿತು. ಕೇಜ್ರಿವಾಲ್ ತಾನೂ ಸೋತಿದ್ದಲ್ಲದೇ, ತಮ್ಮ ಎಡ-ಬಲವಾಗಿದ್ದ ಮನೀಶ್​ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ ಅವರು ಸಹ ಸೋಲನ್ನು ಕಾಣಬೇಕಾಯಿತು.

ಮಿತ್ರ ಪಕ್ಷಗಳಾಗಿದ್ದರೂ, ಕಾಂಗ್ರೆಸ್​ ಮತ್ತು ಆಪ್​ ನೇರವಾಗಿ ಕಣಕ್ಕಿಳಿಯುವ ಮೂಲಕ ಬಿಜೆಪಿಗೆ ವರದಾನದವು. ಇಬ್ಬರ ನಡುವಿನ ಕಾದಾಟ ಕೊನೆಯಲ್ಲಿ ಕೇಸರಿ ಪಡೆಗೆ ಲಾಭವಾಯಿತು. ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ನ ಉನ್ನತ ಮಟ್ಟದ ನಾಯಕರು ನೀಡಿದ ಹೇಳಿಕೆಗಳನ್ನು ಗಮನಿಸಿದರೆ, ಅನೇಕ ಸ್ಥಾನಗಳಲ್ಲಿ ಆಪ್​ಗೆ ಆಪತ್ತು ತಂದಿದ್ದಂತು ಸುಳ್ಳಲ್ಲ.

ಇದರ ಜೊತೆಗೆ ಬಿಜೆಪಿ ತಾನು ಅಧಿಕಾರಕ್ಕೆ ಬಂದಲ್ಲಿ ಆಕ್ರಮಣಕಾರಿ ಅಭಿವೃದ್ಧಿ ಅಭಿಯಾನ ಶುರು ಮಾಡುವುದಾಗಿ ನೀಡಿದ ಭರವಸೆಯೂ ಪ್ಲಸ್​​ ಆಗಿದೆ. ಕೇಜ್ರಿವಾಲ್​ ಪರವಾಗಿದ್ದ ಮತಗಳನ್ನು ಧ್ರುವೀಕರಿಸಿದ್ದು ಮತ್ತು ಆಪ್​ ಅನ್ನೇ ಪ್ರಮುಖವಾಗಿ ಟಾರ್ಗೆಟ್​ ಮಾಡಿದ್ದು ಗೆಲುವಿನ ಗದ್ದುಗೆಗೆ ನೆರವಾಯಿತು.

ಬಿಜೆಪಿಗೆ ಮುಸ್ಲಿಮ್​ ಮತಗಳು : ಕಾಂಗ್ರೆಸ್ ಮತ್ತು ಎಎಪಿ ನಡುವೆ ಯಾರನ್ನು ಬೆಂಬಲಿಸಬೇಕೆಂಬ ಬಗ್ಗೆ ಮತದಾರರು ಗೊಂದಲಕ್ಕೊಳಗಾಗಿದ್ದರು. ಇಂತಹ ಕ್ಷೇತ್ರಗಳಲ್ಲಿ ಸಹಜವಾಗಿಯೇ ಜನರು ತಮ್ಮ ಮೂರನೇ ಆಯ್ಕೆಯಾಗಿ ಬಿಜೆಪಿಗೆ ಮತ ನೀಡಿದ್ದಾರೆ. ಅತಿ ಪ್ರಮುಖ ಸಂಗತಿಯೆಂದರೆ, ರಾಷ್ಟ್ರ ರಾಜಧಾನಿಯಲ್ಲಿನ ಮುಸ್ಲಿಮರು ತಮ್ಮ ಬಾಹುಳ್ಯ ಕ್ಷೇತ್ರ ಹೊರತುಪಡಿಸಿ ಇತರೆಡೆ ಬಿಜೆಪಿಗೆ ಮತ ಹಾಕಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಆಪ್​ ಮತ್ತು ಕಾಂಗ್ರೆಸ್​ ನಡುವಿನ ಕಿತ್ತಾಟವು ಬಿಜೆಪಿಗೆ ಹೇಗೆ ವರದಾನವಾಯಿತು ಎಂಬುದಕ್ಕೆ ಮುಸ್ತಾಬಾದ್ ಕ್ಷೇತ್ರವು ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಈ ಕ್ಷೇತ್ರದಲ್ಲಿ ಶೇ. 50-55 ರಷ್ಟು ಮುಸ್ಲಿಂ ಜನಸಂಖ್ಯೆ ಇದೆ. ಇಲ್ಲಿ ಎಎಪಿಯ ಮುಸ್ಲಿಂ ಅಭ್ಯರ್ಥಿ ಅದೀಲ್ ಅಹ್ಮದ್ ಖಾನ್ ವಿರುದ್ಧ ಅಸಾದುದ್ದೀನ್​ ಓವೈಸಿಯ ಎಐಎಂಐಎಂ ಪಕ್ಷವು ಮೊಹಮ್ಮದ್ ತಾಹಿರ್ ಹುಸೇನ್​ರನ್ನು ಕಣಕ್ಕಿಳಿಸಿತು. ಅದೇ ರೀತಿ ಕಾಂಗ್ರೆಸ್​ ಅಲಿ ಮೆಹದಿಯನ್ನು ಎದುರಾಳಿಯನ್ನಾಗಿ ನಿಲ್ಲಿಸಿತು.

ಚಲಾವಣೆಯಾದ ಮತಗಳಲ್ಲಿ ಎಂಐಎಂನ ತಾಹಿರ್ 33,474 ಮತಗಳನ್ನು ಪಡೆದರೆ, ಎಎಪಿಯ ಅದೀಲ್​ಗೆ 67,638 ಮತ ಬಿದ್ದಿವೆ. ಕಾಂಗ್ರೆಸ್​ನ ಅಲಿಗೆ 11763 ಓಟುಗಳು ಬಂದಿವೆ. ಈ ಮೂವರು ಮುಸ್ಲಿಮ್​ ಅಭ್ಯರ್ಥಿಗಳ ನಡುವೆ ಬಿಜೆಪಿಯ ಮೋಹನ್ ಸಿಂಗ್ ಬಿಶ್ತ್ ಅವರು 85215 ಮತಗಳನ್ನು ಪಡೆದು 17,578 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಇದೇ ತೆರನಾಗಿ ತಿಮಾರ್ಪುರ್, ಮೆಹ್ರೌಲಿ, ಸಂಗಮ್​ ವಿಹಾರ್, ತ್ರಿಲೋಕಪುರಿ ಕ್ಷೇತ್ರದಲ್ಲಿ ಆಪ್​ ಮತ್ತು ಕಾಂಗ್ರೆಸ್​ ಅಭ್ಯರ್ಥಿಗಳ ನಡುವಿನ ಹೋರಾಟದಿಂದ ಬಿಜೆಪಿ ಜಯಿಸಿದೆ.

ಹಲವು ಗೊಂದಲದ ಕ್ಷೇತ್ರಗಳ ಮಧ್ಯೆ ವಿಚಲತವಾಗದ ಕ್ಷೇತ್ರಗಳೂ ಇವೆ. ಅಂಥದ್ದರಲ್ಲಿ ಸೀಲಾಂಪುರ್ ಒಂದಾಗಿದೆ. ಇಲ್ಲಿ ಶೇಕಡಾ 50-55 ರಷ್ಟು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಈ ಸ್ಥಾನ ಎಎಪಿಗೆ ಗೆದ್ದಿದೆ. ಕಣದಲ್ಲಿದ್ದ 13 ಅಭ್ಯರ್ಥಿಗಳಲ್ಲಿ 10 ಮಂದಿ ಮುಸ್ಲಿಮರು. ಆದರೆ, ಇಲ್ಲಿ ಮತ ವಿಭಜನೆಯಾಗಿಲ್ಲ.

ಬಿಜೆಪಿ ರಣತಂತ್ರ ಸಕ್ಸಸ್ ​​: ಆಪ್​ ತನ್ನ ಅಭಿವೃದ್ಧಿ ಯೋಜನೆಗಳನ್ನ ಮುಂದಿಟ್ಟುಕೊಂಡು ಚುನಾವಣೆ ನಡೆಸಿತು. ಆದರೆ, ಬಿಜೆಪಿ ತನ್ನ ಚುನಾವಣಾ ರಣತಂತ್ರವನ್ನು ಇಲ್ಲಿ ಪರಿಣಾಮಕಾರಿಯಾಗಿ ಬಳಸಿತು. ಕಣ್ಣು ಕುಕ್ಕುವ ಭರವಸೆಗಳ ಪ್ರಣಾಳಿಕೆ, ಶಿಕ್ಷಣದ ಕುರಿತು ಪ್ರಧಾನಿ ಮೋದಿ ಅವರು ದೆಹಲಿ ವಿದ್ಯಾರ್ಥಿಗಳ ಜೊತೆ ನಡೆಸಿದ ಮಾತುಕತೆ, ಹರಿಯಾಣ ಸಿಎಂ ನಯಾಬ್​ ಸಿಂಗ್​ ಸೈನಿ ಅವರು ಯಮುನಾ ನದಿ ನೀರು ಕುಡಿದಿದ್ದು, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇಜ್ರಿವಾಲ್ ಅವರಿಗೆ ಮಹಾಕುಂಭದಲ್ಲಿ ಜನರು ಪವಿತ್ರ ಸ್ನಾನ ಮಾಡಿದಂತೆ, ಯಮುನೆಯಲ್ಲಿ ಸ್ನಾನ ಮಾಡಲು ಹಾಕಿದ ಸವಾಲು. ಎಲ್ಲವೂ ಆಪ್​​ಗೆ ಸೋಲಿನ ದವಡೆಗೆ ತಳ್ಳಿದವು.

ಚುನಾವಣೆಗೂ ಮೊದಲು ಬಜೆಟ್​ನಲ್ಲಿ ಸಂಬಳದಾರರಿಗೆ 12.75 ಲಕ್ಷ ರೂ.ಗಳವರೆಗೆ ಶೇಕಡಾ ನೂರು ತೆರಿಗೆ ವಿನಾಯಿತಿ ಘೋಷಣೆ. ಚುನಾವಣಾ ರ್ಯಾಲಿಗಳಲ್ಲಿ ಕೇಜ್ರಿವಾಲ್ ಮತ್ತು ಅವರ ಪಡೆ ಮಾಡಿದ ಟೀಕೆಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ಬಿಜೆಪಿ ಎತ್ತಿದ್ದ ವಿಕಾಸಪುರಿ ಕಸದ ವಿಷಯವೂ ಚುನಾವಣೆಯಲ್ಲಿ ಮತ ತಂದುಕೊಟ್ಟಿತು. 40 ಸ್ಟಾರ್ ಪ್ರಚಾರಕರನ್ನು ಹೊಂದಿದ್ದ ಬಿಜೆಪಿ, ಆಪ್​ ಅನ್ನು ಆಪೋಷನ ಪಡೆದು ಹೀನಾಯವಾಗಿ ಅಧಿಕಾರದ ಗದ್ದುಗೆಯಿಂದ ಇಳಿಸಿ 27 ವರ್ಷಗಳ ನಂತರ ದೆಹಲಿ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರ ರಚನೆಗೆ ಸಜ್ಜಾಗಿದೆ.

ಈಗ ಮುಂದಿರುವ ಪ್ರಶ್ನೆಯೆಂದರೆ, ಸೋತಿರುವ ಕೇಜ್ರಿವಾಲ್ ದೆಹಲಿ ವಿಧಾನಸಭೆಗೆ ಪ್ರವೇಶಿಸಲು ಸಾಧ್ಯವಿಲ್ಲ. ಸದನದಲ್ಲಿ ಕೇಸರಿ ಪಡೆಯ ಎದುರು ಟಕ್ಕರ್ ನೀಡುವ ಎಎಪಿ ನಾಯಕ ಯಾರು?, ಬಿಜೆಪಿ ದಾಳದ ಮುಂದೆ ಆಪ್​ ತನ್ನ ಶಾಸಕರನ್ನು ಉಳಿಸಿಕೊಂಡು ತನ್ನ ಅಸ್ತಿತ್ವ ಕಾಪಾಡಿಕೊಳ್ಳುವುದು ಹೇಗೆ ಎಂಬುದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಎದ್ದಲ್ಲೇ ಬಿದ್ದ ಆಮ್​ ಆದ್ಮಿ : ದೆಹಲಿಯಲ್ಲಿ ಹುಟ್ಟಿದ ಪಕ್ಷಕ್ಕೆ ಅಲ್ಲೇ ಸೋಲು, ಪಂಜಾಬಲ್ಲಿ ಮಾತ್ರ ಅಧಿಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.