ಛತ್ತೀಸ್‌ಗಢ, ತೆಲಂಗಾಣದಲ್ಲಿ ಲಘು ಭೂಕಂಪನ - ಸಿಸಿಟಿವಿ ವಿಡಿಯೋ - MILD EARTHQUAKE
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/04-12-2024/640-480-23038347-thumbnail-16x9-am.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Dec 4, 2024, 12:47 PM IST
ಬಸ್ತಾರ್: ಛತ್ತೀಸ್‌ಗಢದ ಬಸ್ತಾರ್ ಹಾಗೂ ತೆಲಂಗಾಣದ ಕೆಲವು ಕಡೆ ಭೂಕಂಪನದ ಅನುಭವವಾಗಿದೆ. ಬಸ್ತಾರ್ ವಿಭಾಗದ ಬಿಜಾಪುರ, ಸುಕ್ಮಾ, ದಾಂತೇವಾಡ ಹಾಗೇ ತೆಲಂಗಾಣದ ಕೆಲವು ಕಡೆ ಬೆಳಗ್ಗೆ 7:27ಕ್ಕೆ ಕಂಪನಗಳು ಸಂಭವಿಸಿವೆ. ಇದರ ಸಿಸಿಟಿವಿ ವಿಡಿಯೋ ಕೂಡ ಹೊರಬಿದ್ದಿದೆ. ವಿಡಿಯೋದಲ್ಲಿ ಭೂಮಿ ನಡುಗುತ್ತಿರುವುದು ಕಂಡು ಬಂದಿದೆ. ಬೆಳಗ್ಗೆ ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದ ಸಮಯದಲ್ಲಿ ಈ ಭೂಕಂಪನದಿಂದ ಭೂಮಿ ನಲುಗುವುದನ್ನು ಅನುಭವಿಸಿದ್ದಾರೆ.
ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಭೂಕಂಪನದ ಕೇಂದ್ರವು ತೆಲಂಗಾಣದ ಮುಲುಗು ಜಿಲ್ಲೆಯಾಗಿದೆ. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.3ರಷ್ಟು ದಾಖಲಾಗಿದೆ. ಭೂಕಂಪ ಸಂಭವಿಸಿದಾಗ ಜನರು ಮನೆಯಿಂದ ಹೊರಗೆ ಬಂದಿದ್ದಾರೆ. ಆದರೆ ಭೂಕಂಪದಿಂದ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮುಲುಗು ಜಿಲ್ಲೆಯಿಂದ 250 ಕಿಲೋಮೀಟರ್ ದೂರದಲ್ಲಿರುವ ಹೈದರಾಬಾದ್‌ನ ಹಲವೆಡೆ 2 ರಿಂದ 3 ಸೆಕೆಂಡ್ಗಳ ತನಕ ಭೂಕಂಪನದ ಅನುಭವವಾಗಿದೆ.
ಇದನ್ನೂ ಓದಿ: ತೆಲಂಗಾಣ, ಆಂಧ್ರದಲ್ಲಿ ಲಘು ಭೂಕಂಪ: ರಿಕ್ಟರ್ ಮಾಪಕದಲ್ಲಿ 5.3ರಷ್ಟು ತೀವ್ರತೆ ದಾಖಲು, ಹೆದರಿ ಮನೆಯಿಂದ ಹೊರ ಬಂದ ಜನ