ಆನೇಕಲ್: ಆಹಾರ ಅರಸಿ ನಾಡಿನತ್ತ ಕಾಡಾನೆಗಳ ಹಿಂಡು, ರೈತರ ಆತಂಕ
🎬 Watch Now: Feature Video
Published : 10 hours ago
ಆನೇಕಲ್(ಬೆಂಗಳೂರು): ಆಹಾರ ಅರಸಿ ಕಾಡಿನಿಂದ ನಾಡಿನತ್ತ ಕಾಡಾನೆಗಳ ಹಿಂಡು ಆಗಮಿಸಿದ್ದು ಡೆಂಕಣಿಕೋಟೆ ಸಮೀಪದ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹತ್ತಕ್ಕೂ ಹೆಚ್ಚು ಆನೆಗಳು ಡೆಂಕಣಿಕೋಟೆಯಲ್ಲಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ತೋಟಗಳಲ್ಲಿ ಓಡಾಡುತ್ತಿವೆ.
ಮರಿಗಳನ್ನು ರಕ್ಷಿಸಲು ಕಾಡಾನೆಗಳು ಪ್ರಯತ್ನಿಸುತ್ತಿವೆ. ತಮಿಳುನಾಡು ಡೆಂಕಣಿಕೋಟೆ ಪೊಲೀಸರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಾನೆಗಳ ಹಿಂಡನ್ನು ಅರಣ್ಯದತ್ತ ಓಡಿಸಲು ಹರಸಾಹಸ ಮಾಡುತ್ತಿದ್ದಾರೆ.
ತಮಿಳುನಾಡಿನಲ್ಲಿ ಕಾಡಾನೆಗಳು ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ತಾಲೂಕಿನ ಗಡಿಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹೆಚ್ಚಿನ ಕ್ರಮ ವಹಿಸಿದ್ದಾರೆ. ಮುತ್ಯಾಲ ಮಡುವು, ವಣಕನಹಳ್ಳಿ, ದೇವರಬೆಟ್ಟ ಸೇರಿದಂತೆ ವಿವಿಧೆಡೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು ಕಾಡಾನೆಗಳು ನಾಡಿನತ್ತ ಬರದಂತೆ ತಡೆಯುತ್ತಿದ್ದಾರೆ.
ಕೆಲವು ವರ್ಷಗಳಿಂದೀಚೆಗೆ ಕಾಡುಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ. ಅರಣ್ಯನಾಶವೇ ಇದಕ್ಕೆ ಮೂಲ ಕಾರಣ ಎಂದು ಪರಿಸರಪ್ರೇಮಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: WATCH - ರಾಯಚೂರು: ಗುರ್ಜಾಪುರ ಬ್ರಿಡ್ಜ್ ಮೇಲೆ ಓಡಾಡಿದ ಮೊಸಳೆ!
ಉಡ ಬೇಟೆಗೆ ಬಂದ 14 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ: ಕಾರ್ಯಾಚರಣೆಯ ವಿಡಿಯೋ