ನವದೆಹಲಿ: 184 ಜನರ ಸಾವಿಗೆ ಕಾರಣವಾಗಿದ್ದ 1978ರ ಸಂಭಾಲ್ ಗಲಭೆಯ ಬಗ್ಗೆ ಮರುತನಿಖೆಗೆ ಆದೇಶಿಸಲಾಗಿದೆ ಎಂಬ ವರದಿಗಳನ್ನು ಉತ್ತರ ಪ್ರದೇಶ ಪೊಲೀಸರು ನಿರಾಕರಿಸಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಸಂಭಾಲ್ ಎಸ್ಪಿ ಕೃಷ್ಣ ಕುಮಾರ್ ಬಿಷ್ಣೋಯ್, "ಗಲಭೆಯ ಮರುತನಿಖೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಸುಳ್ಳು. ಅಂಥ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ" ಎಂದು ತಿಳಿಸಿದ್ದಾರೆ.
ಯುಪಿ ವಿಧಾನ ಪರಿಷತ್ ಸದಸ್ಯ ಶ್ರೀಚಂದ್ರ ಶರ್ಮಾ ಅವರು ಸಂಭಾಲ್ನಲ್ಲಿ 1978 ರಲ್ಲಿ ನಡೆದ ಗಲಭೆಗಳ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ ಎಂದು ಜನವರಿ 7 ರಂದು ಸಂಭಾಲ್ ಎಸ್ಪಿ ಕೆ.ಕೆ. ಬಿಷ್ಣೋಯ್ ಅವರು ಸಂಭಾಲ್ ಜಿಲ್ಲಾ ಅಧಿಕಾರಿ ಡಾ.ರಾಜೇಂದ್ರ ಪೆನ್ಸಿಯಾ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದರು.
"ಗಲಭೆಗಳ ಬಗ್ಗೆ ಪೊಲೀಸರಿಂದ ನಮಗೆ ಬಂದ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು" ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ : ಹಿಂದೂ ಧರ್ಮದ ಮೇಲಿನ ಪ್ರೀತಿ ನನ್ನನ್ನು ಮಹಾ ಕುಂಭಮೇಳಕ್ಕೆ ಕರೆ ತಂದಿತು: ಫ್ರೆಂಚ್ ಮಹಿಳೆ - FRENCH WOMAN IN MAHA KUMBH MELA