DRDO Drone Crashes: ಚಿತ್ರದುರ್ಗದಲ್ಲಿ ಮಾನವ ರಹಿತ ಡ್ರೋನ್ ಮಾದರಿ ವಿಮಾನ 'ತಪಸ್' ಪತನ
🎬 Watch Now: Feature Video
ಚಿತ್ರದುರ್ಗ: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ತಯಾರಿಸಿರುವ ಮಾನವ ರಹಿತ ವಿಮಾನ (ಯುಎವಿ) ಪರೀಕ್ಷೆಯ ವೇಳೆ ನಿಯಂತ್ರಣ ತಪ್ಪಿ ಜಿಲ್ಲೆಯ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಕೃಷಿ ಗದ್ದೆಯಲ್ಲಿ ಅಪ್ಪಳಿಸಿದೆ.
ಅಧಿಕಾರಿಗಳ ಪ್ರಕಾರ, ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯಿರುವ ಡಿಆರ್ಡಿಓ ಸಿದ್ಧಪಡಿಸಿದ್ದ (ತಪಸ್) ಡ್ರೋನ್ ಮಾದರಿಯ ವಿಮಾನವು ಪರೀಕ್ಷಾರ್ಥ ಪ್ರಯೋಗದ ವೇಳೆ ನೆಲಕ್ಕೆ ಅಪ್ಪಳಿಸಿದೆ. ಅವಘಡಕ್ಕೆ ನಿರ್ದಿಷ್ಟ ಕಾರಣ ಕಂಡು ಹಿಡಿಯಲು ತನಿಖೆ ನಡೆಸಲು ನೆರವಾಗುವಂತೆ ಘಟನೆಯ ಬಗ್ಗೆ ರಕ್ಷಣಾ ಸಚಿವಾಲಯಕ್ಕೆ ಡಿಆರ್ಡಿಓ ಮಾಹಿತಿ ನೀಡಿದೆ ಎಂದಿದ್ದಾರೆ.
ಇದನ್ನೂ ಓದಿ: ತಾಂತ್ರಿಕ ದೋಷದಿಂದ ಟೇಕ್ ಆಫ್ ಆದ ಮೂರೇ ನಿಮಿಷಕ್ಕೆ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೋ ವಿಮಾನ : 181 ಪ್ರಯಾಣಿಕರೂ ಸುರಕ್ಷಿತ
ಈ ಘಟನೆಯ ಬಗ್ಗೆ ಸುದ್ದಿ ಹರಡುತ್ತಿದ್ದಂತೆ, ಅಲ್ಲಿನ ಸ್ಥಳೀಯ ಜನರು ರೆಕ್ಕೆಕಳಚಿ ನೆಲಕ್ಕೆ ಬಿದ್ದ ಯುಎವಿ ವಿಮಾನ ಅಪ್ಪಳಿಸಿದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಲ್ಲಿನ ದೃಶ್ಯದಲ್ಲಿ ಯುಎವಿ ವಾಹನದ ಬಿಡಿಭಾಗಗಳು ಅಲ್ಲಲ್ಲಿ ಬಿದ್ದಿರುವುದು ಕಂಡುಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: watch.. ವಿಮಾನದ ಎರಡು ಇಂಧನ ಟ್ಯಾಂಕ್‌ಗಳು ಗದ್ದೆಯಲ್ಲಿ ಪತ್ತೆ.. ಕ್ಷಿಪಣಿ ಎಂದು ಭಾವಿಸಿದ್ದ ಗ್ರಾಮಸ್ಥರು!