ETV Bharat / bharat

ಕೇಜ್ರಿವಾಲ್​ ದೇಶದ ಮಹಾನ್​ ವಂಚಕ- ಅಜಯ್​ ಮಾಕೆನ್​: ಆಪ್​, ಬಿಜೆಪಿ ವಿರುದ್ಧ ಕಾಂಗ್ರೆಸ್​ ಶ್ವೇತಪತ್ರ - CONGRESS RELEASES WHITE PAPER

ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಪ್​ ಮತ್ತು ಬಿಜೆಪಿ ವಿರುದ್ಧ ಕಾಂಗ್ರೆಸ್​ ಶ್ವೇತಪತ್ರ ಬಿಡುಗಡೆ ಮಾಡಿತು.

ಆಪ್​, ಬಿಜೆಪಿ ವಿರುದ್ಧ ​ಶ್ವೇತಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್
ಆಪ್​, ಬಿಜೆಪಿ ವಿರುದ್ಧ ​ಶ್ವೇತಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್ (Congress X Handle)
author img

By ANI

Published : Dec 25, 2024, 9:20 PM IST

ನವದೆಹಲಿ: I.N.D.I.A ಕೂಟದಲ್ಲಿರುವ ಆಪ್​ ಮತ್ತು ಕಾಂಗ್ರೆಸ್​​ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳಾಗಿ ಸೆಣಸಾಡುವುದು ನಿಕ್ಕಿಯಾಗಿದೆ. ಆಮ್​ ಆದ್ಮಿ ಪಕ್ಷದ (ಆಪ್​) ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಅವರು ಯಾರೊಂದಿಗೂ ಚುನಾವಣಾ ಮೈತ್ರಿ ಇಲ್ಲ ಎಂದು ಘೋಷಿಸಿದ ಬೆನ್ನಲ್ಲೇ, ಆಪ್​​ ಮತ್ತು ಬಿಜೆಪಿ ವೈಫಲ್ಯಗಳ ಶ್ವೇತಪತ್ರವನ್ನು ಕಾಂಗ್ರೆಸ್​ ಹೊರಡಿಸಿದೆ.

ದೆಹಲಿಯಲ್ಲಿ ಆಪ್​ನ 11 ವರ್ಷ, ಕೇಂದ್ರದಲ್ಲಿ ಬಿಜೆಪಿಯ 10 ವರ್ಷದ ಅಧಿಕಾರದ ವೈಫಲ್ಯವನ್ನು ಟೀಕಿಸುವ 12 ಅಂಶಗಳನ್ನು ಒಳಗೊಂಡಿರುವ 'ಮೌಕಾ ಮೌಕಾ ಹರ್ ಬಾರ್ ಧೋಖಾ' ಎಂಬ ಕಿರುಪುಸ್ತಕವನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್, ಹಿರಿಯ ನಾಯಕ ಅಜಯ್ ಮಾಕನ್ ಸೇರಿದಂತೆ ಇತರ ನಾಯಕರು ಬುಧವಾರ ಬಿಡುಗಡೆ ಮಾಡಿದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್, ದೆಹಲಿಯಲ್ಲಿ ಆಪ್​ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ 11 ವರ್ಷ, ಬಿಜೆಪಿಯ 10 ವರ್ಷಗಳ ಆಡಳಿತದಲ್ಲಿ ಅಭಿವೃದ್ಧಿ ನಗಣ್ಯವಾಗಿದೆ ಎಂದು ಆರೋಪಿಸಿದರು.

ಕೇಜ್ರಿವಾಲ್ ದೇಶದಲ್ಲಿಯೇ ಮಹಾನ್​ ವಂಚಕ: ಬಳಿಕ ಮಾತನಾಡಿದ ಎಐಸಿಸಿ ಖಜಾಂಚಿ ಅಜಯ್​ ಮಾಕೆನ್​, ಅರವಿಂದ್​ ಕೇಜ್ರಿವಾಲ್​ ಅವರು ಜನಲೋಕಪಾಲ್​ ಹೋರಾಟದ ಮೂಲಕ ಅಧಿಕಾರಕ್ಕೆ ಬಂದರು. ಇದೀಗ, ಆ ಸಂಸ್ಥೆಯನ್ನೇ ರಚಿಸಲು ಮರೆತಿದ್ದಾರೆ. ಕೇಜ್ರಿವಾಲ್​ ಒಬ್ಬ ಫರ್ಜಿವಾಲ್​ (ನಕಲಿ ವ್ಯಕ್ತಿ) ಎಂದು ಟೀಕಿಸಿದರು.

ಅರವಿಂದ್​ ಕೇಜ್ರಿವಾಲ್​ ದೇಶದ ಅತಿದೊಡ್ಡ ವಂಚಕ. ಕೊಟ್ಟ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ದೆಹಲಿಯು ಕೇಂದ್ರಾಡಳಿತ ಪ್ರದೇಶವಾಗಿದ್ದರೆ, ಪಂಜಾಬ್​ನಲ್ಲಿ ಯಾಕೆ ಜನಲೋಕಪಾಲ್​ ಕಾಯ್ದೆಯನ್ನು ಜಾರಿಗೆ ತರಲಿಲ್ಲ. ಅಲ್ಲಿ ಆಪ್​ ಪಕ್ಷವೇ ಅಧಿಕಾರದಲ್ಲಿದೆಯಲ್ಲವೇ ಎಂದು ಪ್ರಶ್ನಿಸಿದರು.

ದೆಹಲಿ ಲಂಡನ್​ ಆಗದೆ, ಮಲಿನವಾಯಿತು: ದೆಹಲಿಯನ್ನು ಲಂಡನ್​ ರೀತಿ ಮಾಡುವುದಾಗಿ ಆಶ್ವಾಸನೆ ನೀಡಿದ್ದ ಆಪ್​, ರಾಷ್ಟ್ರ ರಾಜಧಾನಿಯನ್ನು ವಾಯುಮಾಲಿನ್ಯದಲ್ಲಿ ನಂಬರ್​ 1 ಮಾಡಿದೆ. ಇಲ್ಲಿ ಉಸಿರಾಡಲೂ ಜನರು ಕಷ್ಟಪಡಬೇಕಿದೆ ಎಂದು ಜರಿದರು.

ದೆಹಲಿಯಲ್ಲಿ ಅಸೆಂಬ್ಲಿ ಚುನಾವಣೆ 2025ರ ಫೆಬ್ರವರಿಯಲ್ಲಿ ನಡೆಯುವ ನಿರೀಕ್ಷೆಯಿದೆ. 2015ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ 70 ವಿಧಾನಸಭಾ ಸ್ಥಾನಗಳ ಪೈಕಿ ಆಪ್​ 67, ಬಿಜೆಪಿ 3ರಲ್ಲಿ ಗೆಲುವು ಸಾಧಿಸಿತ್ತು. 2020ರಲ್ಲಿ 62 ಸ್ಥಾನಗಳಲ್ಲಿ ಆಪ್​, ಬಿಜೆಪಿ ಎಂಟು ಸ್ಥಾನ ಪಡೆದಿತ್ತು. ಕಾಂಗ್ರೆಸ್ ಸತತ ಎರಡೂ ಎಲೆಕ್ಷನ್​​ನಲ್ಲಿ ಸೊನ್ನೆ ಸಾಧನೆ ಮಾಡಿತ್ತು.

ಇದನ್ನೂ ಓದಿ: 44 ಸಾವಿರ ಕೋಟಿ ರೂಪಾಯಿ ವೆಚ್ಚದ ಕೆನ್-ಬೆಟ್ವಾ ನದಿ ಜೋಡಣೆಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ: ಇದರಿಂದ ಯಾರಿಗೆ ಲಾಭ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.