ETV Bharat / bharat

ಒಂದು ದೇಶ ಒಂದು ಚುನಾವಣೆ: ಜ.8ರಂದು ಜೆಪಿಸಿಯ ಮೊದಲ ಸಭೆ - JPC MEETING ON ONOE

ಮಹತ್ವದ ಒಂದು ದೇಶ, ಒಂದು ಚುನಾವಣೆ ಕುರಿತ ಜೆಪಿಸಿಯ ಮೊದಲ ಸಭೆಗೆ ದಿನಾಂಕ ನಿಗದಿ ಮಾಡಲಾಗಿದೆ.

ಒಂದು ದೇಶ ಒಂದು ಚುನಾವಣೆ
ಒಂದು ದೇಶ ಒಂದು ಚುನಾವಣೆ (ETV Bharat)
author img

By ETV Bharat Karnataka Team

Published : 12 hours ago

ನವದೆಹಲಿ: 'ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತಾಗಿ ರಚಿಸಲಾಗಿರುವ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಮೊದಲ ಸಭೆಯು ಕಮಿಟಿಯ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಪಿ.ಪಿ.ಚೌಧರಿ ಅವರ ನೇತೃತ್ವದಲ್ಲಿ 2025ರ ಜನವರಿ 8ರಂದು ನಡೆಯಲಿದೆ.

ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಈ ವಿಧೇಯಕವು ಪ್ರಸ್ತಾಪಿಸುತ್ತದೆ. ಈ ಬಗ್ಗೆ ಅಧ್ಯಯನ ನಡೆಸಲು ಮಾಜಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅಧ್ಯಯನದ ಬಳಿಕ ಸಮಿತಿಯು ಸರ್ಕಾರಕ್ಕೆ ವರದಿಯನ್ನು ನೀಡಿತ್ತು.

ಕೇಂದ್ರ ಸಚಿವ ಸಂಪುಟದ ಅಂಗೀಕಾರದ ಬಳಿಕ ಚಳಿಗಾಲದ ಸಂಸತ್​ ಅಧಿವೇಶದಲ್ಲಿ ಮಹತ್ವದ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ವೇಳೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾರಣ, ಮಸೂದೆಯನ್ನು ಹೆಚ್ಚಿನ ಚರ್ಚೆಗಾಗಿ ಜೆಪಿಸಿಗೆ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು.

ಜೆಪಿಸಿಯಲ್ಲಿ ಯಾರೆಲ್ಲಾ?: ಒಂದು ದೇಶ, ಒಂದು ಚುನಾವಣೆಯ ಕುರಿತು ಚರ್ಚೆ ನಡೆಸಲು ರಚಿಸಲಾಗಿರುವ ಜೆಪಿಸಿಯಲ್ಲಿ 31 ಸದಸ್ಯರಿದ್ದಾರೆ. ಇದರಲ್ಲಿ ಬಿಜೆಪಿಯ ಪಿ.ಪಿ.ಚೌಧರಿ, ಬಾನ್ಸುರಿ ಸ್ವರಾಜ್, ಅನುರಾಗ್​​ ಠಾಕೂರ್ ಸೇರಿದಂತೆ 16 ಸಂಸದರು, ಕಾಂಗ್ರೆಸ್​​ನ ಸಂಸದರಾದ ಪ್ರಿಯಾಂಕಾ ವಾದ್ರಾ, ಮನೀಶ್​ ತಿವಾರಿ ಸೇರಿದಂತೆ 5 ಸಂಸದರು ಇದ್ದಾರೆ. ಎಸ್​ಪಿ, ಟಿಎಂಸಿ, ಡಿಎಂಕೆ ಪಕ್ಷದ ಇಬ್ಬರು ಹಾಗೂ ವಿವಿಧ ಪಕ್ಷಗಳ ಸದಸ್ಯರು ಮತ್ತು ರಾಜ್ಯಸಭೆಯ 10 ಸದಸ್ಯರೂ ಒಳಗೊಂಡಿದ್ದಾರೆ.

ಜೆಪಿಸಿಯು ವಿಧೇಯಕ ಪರ-ವಿರೋಧದ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಬಜೆಟ್​ ಅಧಿವೇಶನದ ಕೊನೆಯ ವಾರದ ಮೊದಲ ದಿನದಂದು ವರದಿ ನೀಡಲು ಗಡುವು ನೀಡಲಾಗಿದೆ.

ವಿಪಕ್ಷಗಳ ಆಕ್ಷೇಪ: ಲೋಕಸಭೆಯಲ್ಲಿ ಮಂಡಿಸಿರುವ ಒಂದು ದೇಶ, ಒಂದು ಚುನಾವಣೆ ವಿಧೇಯಕವು, ದೇಶದ ಒಕ್ಕೂಟ ವ್ಯವಸ್ಥೆ, ರಾಜ್ಯ ವಿಧಾನಸಭೆಗಳ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್​ ಸೇರಿದಂತೆ ಎಲ್ಲ ವಿಪಕ್ಷಗಳು ಆರೋಪಿಸುತ್ತಿವೆ. ಪ್ರಸ್ತಾವಿತ ಚುನಾವಣಾ ಪ್ರಕ್ರಿಯೆಯ ಬದಲಾವಣೆಯು ಆಡಳಿತ ಪಕ್ಷಗಳಿಗೆ ನೆರವು ನೀಡುತ್ತದೆ. ಪ್ರಾದೇಶಿಕ ಪಕ್ಷಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತದೆ ಎಂಬ ವಾದವೂ ಎದ್ದಿದೆ.

ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ: ಜೆಪಿಸಿಗೆ ಕಾಂಗ್ರೆಸ್​ನಿಂದ ಪ್ರಿಯಾಂಕಾ ವಾದ್ರಾ ಶಿಫಾರಸು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.