ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವ್ಯಕ್ತಿ.. ರಕ್ಷಿಸಲು ಹೋದವನು ಸೇರಿ ಇಬ್ಬರು ನೀರುಪಾಲು - A man drowned in jununa lake
🎬 Watch Now: Feature Video
ಚಂದ್ರಾಪುರ (ಮಹಾರಾಷ್ಟ್ರ) : ಕೆರೆಯ ದಂಡೆಯಲ್ಲಿದ್ದ ವ್ಯಕ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ಅವನನ್ನು ರಕ್ಷಿಸಲು ಹೋದವರ ಪೈಕಿ ಓರ್ವ ಯುವಕರು ನೀರು ಪಾಲಾಗಿರುವ ಘಟನೆ ಚಂದ್ರಾಪುರ ಜಿಲ್ಲೆಯ ಜುನಾನಾದಲ್ಲಿ ನಡೆದಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನನ್ನು ರಕ್ಷಿಸಲು ಇಬ್ಬರು ಯುವಕರು ಯತ್ನಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಇಲ್ಲಿನ ಜುನಾನಾ ಕೆರೆ ಉಕ್ಕಿ ಹರಿಯುತ್ತಿದ್ದು, ಕೆರೆ ಕಟ್ಟೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಈ ವೇಳೆ ಓರ್ವ ನೀರಿನಲ್ಲಿ ಕೊಚ್ಚಿಹೋಗಿದ್ದು, ಆತನನ್ನು ರಕ್ಷಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಅಲ್ಲೇ ಇದ್ದ ಇಬ್ಬರು ಯುವಕರು ಈತನನ್ನು ಮೇಲೆ ಎಳೆಯಲು ಯತ್ನಿಸಿದ್ದು, ಸಮತೋಲನ ಕಳೆದುಕೊಂಡ ಅವರೂ ಕೆರೆ ಪಾಲಾಗಿದ್ದಾರೆ. ಈ ಪೈಕಿ ಓರ್ವ ಪಾರಾಗಿ ಬಂದಿದ್ದರೆ, ಮತ್ತೋರ್ವ ಯುವಕ ಸೇರಿ ಇಬ್ಬರು ನೀರುಪಾಲಾಗಿದ್ದಾರೆ. ಈ ಮೈನವಿರೇಳುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
Last Updated : Feb 3, 2023, 8:25 PM IST