ಕರುವಿನ ರಕ್ತದ ರುಚಿ ನೋಡಿ ಮತ್ತೆ ಬೇಟೆಗೆ ಬಂದ ಚಿರತೆ ಸೆರೆ : ವಿಡಿಯೋ - LEOPARD CAUGHT
🎬 Watch Now: Feature Video
Published : Dec 14, 2024, 4:37 PM IST
ಮೈಸೂರು : ಹೆಚ್. ಡಿ ಕೋಟೆ ತಾಲೂಕಿನ ತುಂಬಸೋಗೆ ಗ್ರಾಮದಲ್ಲಿ ಚಿರತೆಯೊಂದು ಕರುವಿನ ರಕ್ತದ ರುಚಿ ನೋಡಿ ಮತ್ತೆ ಬೇಟೆಯಾಡಲು ಬಂದು ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ತಾಲೂಕಿನ ತುಂಬಸೋಗೆ ಗ್ರಾಮದ ನಾಗರಾಜು ಅವರ ಜಮೀನಿನಲ್ಲಿಟ್ಟಿದ್ದ ಬೋನಿಗೆ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದೆ.
ನಾಗರಾಜು ಅವರ ಜಮೀನಿನಲ್ಲಿ ಶುಕ್ರವಾರ ಸಂಜೆ 6ರ ಸಮಯದಲ್ಲಿ ಕರುವಿನ ರಕ್ತ ಹೀರಿ ಚಿರತೆ ಪರಾರಿಯಾಗಿತ್ತು. ಇದರಿಂದ ಭಯಭೀತರಾದ ಅಕ್ಕ-ಪಕ್ಕದ ಜಮೀನಿನವರು ಹೆಚ್. ಡಿ ಕೋಟೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಚಿರತೆ ಕಾರ್ಯಪಡೆಯ ಸಿಬ್ಬಂದಿ ನಿನ್ನೆ ರಾತ್ರಿ ಜಮೀನಿನಲ್ಲಿ ಬೋನು ಇರಿಸಿ, ಕರುವನ್ನು ಬೋನಿನೊಳಗಿರಿಸಿದ್ದರು. ಬೇಟೆಯಾಡಲು ಮತ್ತೆ ಬಂದ ಚಿರತೆ ಇಂದು ಬೆಳಗ್ಗೆ ಬೋನಿನಲ್ಲಿ ಬಂಧಿಯಾಗಿದೆ.
ಸೆರೆ ಸಿಕ್ಕಿರುವ ಚಿರತೆ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಚಿರತೆ ಸ್ಥಳಾಂತರಿಸುವ ಕಾರ್ಯದಲ್ಲಿ ಅರಣ್ಯ ಸಿಬ್ಬಂದಿಯಾದ ನಾರಾಯಣ, ಪರಮೇಶ್, ಸ್ನೇಹಾ, ಧನುಷ್, ದೀಪಕ್ ಇದ್ದರು.
ಇದನ್ನೂ ಓದಿ : ಮೈಸೂರು: ಒಂದು ತಿಂಗಳಲ್ಲಿ ಒಂದೇ ಜಮೀನಿನಲ್ಲಿ ನಾಲ್ಕನೇ ಚಿರತೆ ಸೆರೆ! - LEOPARD CAUGHT