ETV Bharat / state

ಶಿವಮೊಗ್ಗ: ಬಸ್​ಗೆ ಬೈಕ್​​​​ ಡಿಕ್ಕಿ ಹೊಡೆದು ಸವಾರರಿಬ್ಬರು ಸಾವು - TWO KILLED IN ACCIDENT

ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಬಸ್​ ಮತ್ತು ಬೈಕ್​ ಮಧ್ಯೆ ಅಪಘಾತ ಸಂಭವಿಸಿದ್ದು, ಬೈಕ್​​​​ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

SHIVAMOGGA  BIKE COLLIDES WITH BUS  ಶಿವಮೊಗ್ಗ ಬಸ್ ಬೈಕ್​​​​ ಅಪಘಾತ  ಸಾವು
ಶಿವಮೊಗ್ಗ: ಬಸ್​ಗೆ ಬೈಕ್​​​​ ಡಿಕ್ಕಿ ಹೊಡೆದು ಸವಾರರಿಬ್ಬರು ಸಾವು (ETV Bharat)
author img

By ETV Bharat Karnataka Team

Published : Dec 23, 2024, 10:38 AM IST

ಶಿವಮೊಗ್ಗ: ಬೈಕ್​ಗೆ ಬಸ್​​​​ ಡಿಕ್ಕಿ ಹೊಡೆದ ಪರಿಣಾಮ ಬೈಕ್​​​​ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ನಗರದ ಪ್ರವಾಸಿ ಮಂದಿರದ ವೃತ್ತದ ಬಳಿಯ ಈಡಿಗರ ಭವನ ರಸ್ತೆಯ ತಿರುವಿನಲ್ಲಿ ಅಪಘಾತ ನಡೆದಿದೆ. ಘಟನೆಯಲ್ಲಿ ಸೊರಬ ತಾಲೂಕು ಬೆಣ್ಣೆಗೆರೆ ನಿವಾಸಿ ರೋಹಿತ್ (26) ಹಾಗೂ ಹಾವೇರಿ ಜಿಲ್ಲೆ ಮಲೆಬೆನ್ನೂರು ತಾಲೂಕು ಬೇವಿನಹಳ್ಳಿ ಗ್ರಾಮದ ಜೀವನ್ (20) ಸಾವನ್ನಪ್ಪಿದ್ದಾರೆ.

ರೋಹಿತ್​​ ಸಾಫ್ಟ್ ವೇರ್​ ಇಂಜಿನಿಯರ್ ಆಗಿದ್ದು, ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದರು. ಜೀವನ್​ ಇಂಜಿನಿಯರಿಂಗ್​ ದ್ವಿತೀಯ ವರ್ಷದಲ್ಲಿ ಓದುತ್ತಿದ್ದರು. ಇವರಿಬ್ಬರು ಎಲ್ಲಿಂದ ಬಂದರು ಎಂಬ ಮಾಹಿತಿ ಇಲ್ಲ.

ಆದರೆ, ಶಿವಮೊಗ್ಗದ ಬೊಮ್ಮನಕಟ್ಟೆಯ ತಮ್ಮ ಸಂಬಂಧಿಗಳ ಮನೆಗೆ ಹೋಗುತ್ತಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ರೋಹಿತ್​ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಜೀವನ್​​ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಈ ಕುರಿತು ಪಶ್ಚಿಮ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಪಾನಮತ್ತ ಚಾಲಕರ ವಿರುದ್ಧ ಕ್ರಮ; ಒಂದು ವಾರದಲ್ಲಿ 769 ಪ್ರಕರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.