ನಂಜನಗೂಡು: ರಸ್ತೆ ಮಧ್ಯೆ ಹುಲಿ ಕಂಡು ಗಾಬರಿಗೊಂಡ ಆಟೋ ಚಾಲಕ - ಅರಣ್ಯ ಇಲಾಖೆ ಅಧಿಕಾರಿಗಳು
🎬 Watch Now: Feature Video
ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಿಂದ ಶೆಟ್ಟಹಳ್ಳಿಗೆ ಹೋಗುವ ರಸ್ತೆ ಮಧ್ಯೆ ಸೋಮವಾರ ರಾತ್ರಿ ಹುಲಿ ಪ್ರತ್ಯಕ್ಷವಾಗಿದೆ. ಹುಲ್ಲಹಳ್ಳಿಯಿಂದ ಶೆಟ್ಟಹಳ್ಳಿ ಗ್ರಾಮಕ್ಕೆ ಹೊರಟಿದ್ದ ಆಟೋ ಚಾಲಕ ರಸ್ತೆ ದಾಟುತ್ತಿದ್ದ ಹುಲಿ ನೋಡಿ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹುಲಿ ದಾಟುತ್ತಿದ್ದ ದೃಶ್ಯ ವೀಕ್ಷಿಸಿದ ಬೈಕ್ ಸವಾರರು ಆತಂಕಗೊಂಡಿದ್ದಾರೆ. ಮೈಸೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಚಿರತೆ, ಆನೆ, ಹುಲಿ ಹಾವಳಿ ಹೆಚ್ಚಾಗಿದೆ. ಒಂದು ಕಡೆ ಆನೆ, ಚಿರತೆ ಹಾವಳಿ ನಡುವೆಯೂ ಇದೀಗ ಹುಲಿ ಪ್ರತ್ಯಕ್ಷವಾಗಿದೆ. ಚಿರತೆ, ಹುಲಿ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Last Updated : Feb 3, 2023, 8:38 PM IST