ETV Bharat / bharat

ಕೆಲಸದ ಸಮಯ ನಿಯಮ ಸೇರಿದಂತೆ ಸಪ್ತ ಗ್ಯಾರಂಟಿ ಘೋಷಿಸಿದ ಎಎಪಿ - AAPS 7 GUARANTEES

ಮತದಾರರ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಿರುವ ಎಎಪಿ ಇದೀಗ ಮನೆಗೆಲಸ ನಿರ್ವಹಿಸುವವರನ್ನು ಪರಿಗಣಿಸಿ ಸಪ್ತ ಗ್ಯಾರಂಟಿಯನ್ನು ಬಿಡುಗಡೆ ಮಾಡಿದೆ.

ews-houses-working-hour-rules-among-aaps-7-guarantees-to-domestic-workers-of-officials-residences
ಅರವಿಂದ್​ ಕೇಜ್ರಿವಾಲ್​ (ANI)
author img

By ETV Bharat Karnataka Team

Published : Jan 30, 2025, 3:32 PM IST

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಸಪ್ತ ಗ್ಯಾರಂಟಿಗಳನ್ನು ಎಎಪಿ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಘೋಷಣೆ ಮಾಡಿದ್ದಾರೆ. ಆರ್ಥಿಕ ದುರ್ಬಲ ವರ್ಗದವರಿಗೆ (EWS) ಫ್ಲಾಟ್​, ಸಂಸದರು, ಸಚಿವರು ಮತ್ತು ಸರ್ಕಾರಿ ಅಧಿಕಾರಿಗಳ ನಿವಾಸದಲ್ಲಿ ಕಾರ್ಯ ನಿರ್ವಹಿಸುವ ಸೇವಕರ (ಮನೆಗೆಲಸದವರ) ಕೆಲಸದ ಗಂಟೆಗಳ ನಿಯಮ ಸೇರಿದಂತೆ ಹಲವು ಗ್ಯಾರಂಟಿಗಳನ್ನು ನೀಡಿದ್ದಾರೆ.

ಪೋರ್ಟಲ್​ನಲ್ಲಿ ನೋಂದಣಿಯಾಗಿರುವ ಸೇವಕರಿಗೆ ವೇತನ ನಿಯಮಾವಳಿ, 10 ಲಕ್ಷ ವಿಮೆ ಮತ್ತು ಅವರ ಮಕ್ಕಳಿಗೆ ವಿಮೆ ಕೂಡ ಇದರಲ್ಲಿ ಸೇರಿದೆ.

ಈ ಕುರಿತು ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು​, ಶೇ 70-80ರಷ್ಟು ಮನೆಗೆಲಸದ ಸೇವಕರಿಗೆ ವೇತನವನ್ನು ನೀಡಲಾಗುತ್ತಿಲ್ಲ. ಅವರಿಗೆ ಕೇವಲ ಕ್ವಾಟ್ರಸ್​ ಮಾತ್ರ ನೀಡಲಾಗಿದ್ದು, ಜೀತ ಕಾರ್ಮಿಕರಂತೆ ಪರಿಗಣಿಸಲಾಗುತ್ತಿದೆ. ಈ ಮನೆಗೆಲಸದವರಿಗೆ ನೀಡುತ್ತಿರುವ ಮನೆಯನ್ನು ಕೆಲವು ಸಂಸದರು ಬಾಡಿಗೆಗೆ ನೀಡಿದ್ದಾರೆ ಎಂದು ಕೂಡ ಆರೋಪಿಸಿದರು.

ಮೊದಲಿಗೆ ನಾವು ಸೇವಕರು, ಹಾಗಾಗಿ ಹೆಸರು ನೋಂದಣಿಗೆ ಪ್ರತ್ಯೇಕ ಪೋರ್ಟಲ್​ ಸೃಷ್ಟಿಸಲಾಗುವುದು. ಈ ಮೂಲಕ ಕೆಲಸಗಾರರು ಉದ್ಯೋಗದ ಅವಕಾಶವನ್ನು ಹುಡುಕಬಹುದು. ಎರಡನೇಯದು ಈ ಉದ್ಯೋಗಿಗಳಿಗೆ ಹಾಸ್ಟೆಲ್​ ನಿರ್ಮಾಣ ಮಾಡಲಾಗುವುದು. ಮೂರನೇಯದು ಮೊಬೈಲ್​ ಮೊಹಲ್ಲಾ ಕ್ಲಿನಿಕ್​ ಅನ್ನು ನಿಯೋಜಿಸಲಾಗುವುದು ಎಂದು ಆಪ್​ ನಾಯಕ ಭರವಸೆ ನೀಡಿದರು.

ನಾಲ್ಕನೆಯದು ಅವರ ವೇತನ ಮತ್ತು ಕೆಲಸದ ಸಮಯವನ್ನು ನಿಯಂತ್ರಿಸಲು ಕಾನೂನುಗಳನ್ನು ಜಾರಿಗೊಳಿಸಲಾಗುವುದು. ಐದನೆಯದಾಗಿ, ಅವರಿಗೆ 10 ಲಕ್ಷ ರೂಪಾಯಿಗಳ ವಿಮಾ ರಕ್ಷಣೆ. ಆರನೇಯದಾಗಿ ಅವರ ಹೆಣ್ಣು ಮಕ್ಕಳ ಮದುವೆಗೆ 1 ಲಕ್ಷ ರೂ. ನೆರವು ನೀಡಲಾಗುವುದು ಮತ್ತು ಏಳನೆಯದಾಗಿ ಅವರ ಮಕ್ಕಳು ಉಚಿತ ಶಿಕ್ಷಣವನ್ನು ಪಡೆಯುತ್ತಾರೆ ಎಂದು ಕೇಜ್ರಿವಾಲ್​ ಹೇಳಿದರು.

ಕಳೆದೊಂದು ದಶಕದಿಂದ ದೆಹಲಿಯಲ್ಲಿ ಅಧಿಕಾರ ಹೊಂದಿರುವ ಎಎಪಿ ಈ ಬಾರಿ ಕೂಡ ಗೆಲುವು ಸಾಧಿಸಲು ನಿರಂತರ ಪ್ರಚಾರ, ಗ್ಯಾರಂಟಿ ಭರವಸೆ ನೀಡುತ್ತಿದೆ. ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್​ ಕೂಡ ಮತದಾರರನ್ನು ಸೆಳೆಯಲು ನಾನಾ ಕಸರತ್ತು ನಡೆಸಿವೆ.

ಇದೇ ಫೆ. 5ರಂದು ದೆಹಲಿ ವಿಧಾನಸಭಾ ಚುನಾವಣೆ ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಹೊರಬೀಳಲಿದೆ.

ಇದನ್ನೂ ಓದಿ: ದೆಹಲಿ ಚುನಾವಣೆ: ಹಣ, ಮದ್ಯವಿದ್ದ ಕಾರು ವಶಕ್ಕೆ; ನಂಬರ್​ ಪ್ಲೇಟ್​ ನಕಲಿ ಎಂದ ಎಎಪಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.