ETV Bharat / state

ರಾಯಚೂರು ಕಾಲೇಜು ವಿದ್ಯಾರ್ಥಿನಿಯ ಭೀಕರ ಕೊಲೆ; ಆರೋಪಿ ಪೊಲೀಸರಿಗೆ ಶರಣು - STUDENT BRUTALLY MURDERED

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಹೊರವಲಯದ ಲೇಔಟ್​ವೊಂದರಲ್ಲಿ ವಿದ್ಯಾರ್ಥಿನಿಯೋರ್ವಳನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.

student-brutally-murdered-in-raichur
ವಿದ್ಯಾರ್ಥಿನಿ ಹತ್ಯೆಗೈದ ಆರೋಪಿ (ETV Bharat)
author img

By ETV Bharat Karnataka Team

Published : Jan 30, 2025, 3:21 PM IST

ರಾಯಚೂರು : ಯುವಕನೊಬ್ಬ ವಿದ್ಯಾರ್ಥಿನಿಯೋರ್ವಳನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರು ನಗರದ ಹೊರವಲಯದ ಲೇಔಟ್​ವೊಂದರಲ್ಲಿ ನಡೆದಿದೆ.

ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಈ ಕೊಲೆ ನಡೆದಿದೆ. ಶಿಫಾ ಅಬ್ದುಲ್ ವಾಹೀದ್ (24) ಹತ್ಯೆಯಾದ ಯುವತಿ ಎಂದು ಗುರುತಿಸಲಾಗಿದೆ. ಹತ್ಯೆ ಬಳಿಕ ಆರೋಪಿ ಮೊಬಿನ್ ಪೊಲೀಸರಿಗೆ ಶರಣಾಗಿದ್ದಾನೆ. ಈತ ಲಿಂಗಸುಗೂರು ಪಟ್ಟಣದವನು ಎಂದು ವರದಿಯಾಗಿದೆ.

ಎಸ್​ಪಿ ಪುಟ್ಟಮಾದಯ್ಯ ಮಾತನಾಡಿದರು (ETV Bharat)

ಬೆಳಗ್ಗೆ 8.55ಕ್ಕೆ ಲಿಂಗಸುಗೂರಿನಿಂದ ಕೆಎಸ್​ಆರ್​ಟಿಸಿ ಬಸ್ ಮೂಲಕ ಯುವತಿ ಸಿಂಧನೂರು ಕಾಲೇಜಿಗೆ ಬಂದಿದ್ದರು. ಈ ವೇಳೆ ಆರೋಪಿಯೂ ಸಹ ಬೈಕ್​ನಲ್ಲಿ ಆಕೆಯನ್ನು ಹಿಂಬಾಲಿಸಿ ಕಾಲೇಜುವರೆಗೆ ಬಂದಿದ್ದು, ನಂತರ ವಿದ್ಯಾರ್ಥಿನಿಯನ್ನು ಮಾತನಾಡಲು ಕರೆದಿದ್ದ. ಯುವತಿ ಕಾಲೇಜಿಗೆ ಹೋಗುವ ಬದಲು ಆ ಹುಡುಗನೊಂದಿಗೆ ಕಾಲೇಜು ಹತ್ತಿರದ ಲೇಔಟ್​ವೊಂದಕ್ಕೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಮಾತುಕತೆ ನಡೆದಿತ್ತು. ನಂತರ ಚಾಕುವಿನಿಂದ ಯುವತಿಯ ಕತ್ತನ್ನು ಕೊಯ್ದು ಅಲ್ಲಿಂದ ಆರೋಪಿ ಪರಾರಿಯಾಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್​ಪಿ ಬಿ ಎಸ್ ತಳವಾರ, ಗ್ರಾಮೀಣ ಠಾಣೆಯ ಸಿಪಿಐ ವೀರಾರೆಡ್ಡಿ, ಬಳಗಾನೂರು ಪಿಎಸ್ಐ ಯರಿಯಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಕೊಲೆ ಮಾಡಿದ ಬಳಿಕ ಆರೋಪಿ ಲಿಂಗಸುಗೂರು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಯುವತಿಯ ಪಾಲಕರು, ಸಂಬಂಧಿಕರು ಕೊಲೆ ನಡೆದ ಸ್ಥಳಕ್ಕೆ ಆಗಮಿಸಿ ಮಗಳ ಶವ ನೋಡಿ ಕಣ್ಣೀರಿಟ್ಟಿದ್ದಾರೆ. ನಂತರ ಶವವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಸಂಜೆ ಸಿಂಧನೂರಿಗೆ ಕರೆತಂದು ವಿಚಾರಣೆ ಮಾಡುವ ಸಾಧ್ಯತೆ ಇದೆ.

ಈ ಪ್ರಕರಣದ ಬಗ್ಗೆ ಎಸ್​ಪಿ ಪುಟ್ಟಮಾದಯ್ಯ ಅವರು ಮಾತನಾಡಿ, ''ಇಂದು ಸಿಂಧನೂರು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳನ್ನ ಖಾಸಗಿ ವಿಚಾರಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬರು ಕೊಲೆ ಮಾಡಿದ್ದಾರೆ. ಸದ್ಯ ಪೊಲೀಸರು ಆ ವ್ಯಕ್ತಿಯನ್ನ ಬಂಧಿಸಿದ್ದಾರೆ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ವಿಜಯಪುರ: ಗುಂಡು ಹಾರಿಸಿ ಯುವಕನ ಬರ್ಬರ ಹತ್ಯೆ, ಸ್ಥಳದಲ್ಲಿ ತುಂಡಾದ ಕಿವಿ ಪತ್ತೆ - YOUNG MAN MURDER

ETV Bharat Logo

Copyright © 2025 Ushodaya Enterprises Pvt. Ltd., All Rights Reserved.