ETV Bharat / state

9 ವರ್ಷ ಕಳೆದರೂ ಉದ್ಘಾಟನೆಯಾಗದ ಕಾರವಾರ ಮಿನಿ ವಿಧಾನಸೌಧ : ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳುವುದಿಷ್ಟು - MINI VIDHANA SOUDHA

ಕಾರವಾರದಲ್ಲಿರುವ ಮಿನಿ ವಿಧಾನಸೌಧಯು ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿದ್ದರೂ ಕೂಡ ನಿರ್ಮಾಣಗೊಂಡ ಕಟ್ಟಡದ ಕೊಠಡಿಗಳ ಬಳಕೆ ಬಗ್ಗೆ ಯಾರೂ ಗಮನಹರಿಸದ ಕಾರಣ ಪಾಳುಬಿದ್ದ ಸ್ಥಿತಿಯಲ್ಲಿ ಕಂಡುಬರುತ್ತಿದೆ.

MINI VIDHANA SOUDHA
ಕಾರವಾರದ ಮಿನಿ ವಿಧಾನಸೌಧ (ETV Bharat)
author img

By ETV Bharat Karnataka Team

Published : Jan 30, 2025, 3:15 PM IST

ಕಾರವಾರ (ಉತ್ತರ ಕನ್ನಡ): ನಗರದ ಕರೂರು ಮೈದಾನದಲ್ಲಿ ತಹಶೀಲ್ದಾರ್ ಕಚೇರಿಯ ನೂತನ ಕಟ್ಟಡ, ಉಪವಿಭಾಗಾಧಿಕಾರಿ ಕಚೇರಿ ಸೇರಿದಂತೆ ಇತರೆ ಇಲಾಖೆಗಳಿಗೆ ಜಾಗ ಕಲ್ಪಿಸುವ ನಿಟ್ಟಿನಲ್ಲಿ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುದ್ದಲಿ ಪೂಜೆ ನೆರವೇರಿಸಿದ್ದ ಮಿನಿ ವಿಧಾನಸೌಧವು 9 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಾಣದೇ ಪಾಳುಬಿದ್ದಿದೆ. ಕಟ್ಟಡಕ್ಕೆ ಬಳಿದ ಸುಣ್ಣ ಬಣ್ಣವೂ ಮಾಸಿ ಹೋಗಿದ್ದು, ನೂತನ ಕೊಠಡಿಗಳಲ್ಲಿ ಧೂಳು ತುಂಬಿಕೊಂಡಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಈಗಿರುವ ತಹಶೀಲ್ದಾರ್ ಕಚೇರಿ ಶಿಥಿಲಗೊಂಡ ಹಳೆಯ ಕಟ್ಟಡದಲ್ಲಿ ನಡೆಯುತ್ತಿದ್ದು, ಸುಣ್ಣ-ಬಣ್ಣ ಬಳಿದು ಅಂತಿಮಗೊಂಡಿದ್ದ ಎರಡು ಮಹಡಿಯ ಹಲವು ಕೊಠಡಿಗಳ ಹೊಸ ಕಟ್ಟಡ ಉದ್ಘಾಟನೆ ಭಾಗ್ಯ ಕಾಣದೇ ಬಣ್ಣ ಮಾಸಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮಿನಿ ವಿಧಾಸೌಧದ ಕಟ್ಟಡ ನಿರ್ಮಾಣ ಮಾಡಿ, ಅದರಲ್ಲಿ ತಹಶೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ ಮಾಡಲಾಗಿತ್ತು. ಆದರೆ, ಮಿನಿ ವಿಧಾನಸೌಧ ಪಾಳು ಬಿದ್ದಿದ್ದು, ಸರ್ಕಾರದ ಹಣ ಪೋಲಾಗುತ್ತಿದೆ.

ಮಿನಿ ವಿಧಾನಸೌಧದ ಬಗ್ಗೆ ಮಾಹಿತಿ ನೀಡುತ್ತಿರುವುದು (ETV Bharat)

ಕಳೆದ ನಾಲ್ಕು ವರ್ಷಗಳ ಹಿಂದೆಯೇ ಎರಡು ಮಹಡಿಯಲ್ಲಿ ಹಲವು ಕೊಠಡಿಗಳು ನಿರ್ಮಾಣಗೊಂಡಿದ್ದು, ಸುಣ್ಣ-ಬಣ್ಣ ಬಳಿದು ಸಿದ್ಧಗೊಳಿಸಲಾಗಿತ್ತು. ಆದರೆ, ಉದ್ಘಾಟನೆ ಭಾಗ್ಯ ಕಾಣದೇ ಕಟ್ಟಡವು ಪ್ರತಿ ಮಳೆಗಾಲದ ವೇಳೆ ಸೋರಿ ಗೋಡೆಗಳ ಬಣ್ಣ ಮಾಸಿದ್ದಲ್ಲದೇ ಹಲವೆಡೆ ಈಗಾಗಲೇ ಬಿರುಕು ಸಹ ಬಿಟ್ಟಿವೆ. ಇದೀಗ ಮುಂದುವರಿದ ಕಾಮಗಾರಿ ಅಂತ ಮತ್ತೆ ಒಂದು ಮಹಡಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಆದರೆ, ಈಗಾಗಲೇ ಸಿದ್ಧಗೊಂಡಿದ್ದ ಕೊಠಡಿಗಳ ಗ್ಲಾಸ್ ಒಡೆದು ಕಬ್ಬಿಣದ ಕಿಟಕಿಗಳು ತುಕ್ಕು ಹಿಡಿದಿವೆ. ಕೊಠಡಿಗಳಲ್ಲಿ ಕಸದ ತೊಟ್ಟಿಯೇ ನಿರ್ಮಾಣವಾಗಿದ್ದು, ಎಲ್ಲೆಂದರಲ್ಲಿ ಪಾನ್, ಬೀಡಾ ಉಗಿದು, ನಾಯಿಗಳ ವಾಸಸ್ಥಾನವಾಗಿದೆ. ಅಲ್ಲದೆ ಶೌಚಾಲಯಗಳು ಪಾಳುಬಿದ್ದ ಸ್ಥಿತಿಯಲ್ಲಿ ಕಂಡುಬರುತ್ತಿವೆ. ಈ ರಿತಿ ಸರ್ಕಾರದ ಹಣವನ್ನು ಪೋಲು ಮಾಡುವುದು ಸರಿಯಲ್ಲ. ಕೂಡಲೇ ಕಟ್ಟಡ ಬಳಕೆ ಮಾಡುವ ಕೆಲಸವಾಗಬೇಕು ಎಂದು ಸ್ಥಳೀಯರಾದ ಮಾಧವ ನಾಯಕ ಆಗ್ರಹಿಸಿದ್ದಾರೆ.

ಈ ಹಿಂದೆ ಕೋಟ ಶ್ರೀನಿವಾಸ ಪೂಜಾರಿ ಅವರು ಉಸ್ತುವಾರಿ ಸಚಿವರಾಗಿದ್ದ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯನ್ನು ಇದೇ ಕಟ್ಟಡದ ಒಂದು ಕೋಣೆಯಲ್ಲಿ ಪ್ರಾರಂಭಿಸಿದ್ದರು. ಇದಾದ ನಂತರ ಯಾರೂ ಈ ಕಟ್ಟಡಕ್ಕೆ ಆಗಮಿಸಿಲ್ಲ. ಆದರೆ, ಉಸ್ತುವಾರಿ ಸಚಿವರಿದ್ದ ಜಾಗದಲ್ಲಿ ಇದೀಗ ಶಾಸಕರು ತಮ್ಮ ಕಚೇರಿ ನಡೆಸುತ್ತಿದ್ದು, ಮತ್ತೊಂದು ಜಾಗದಲ್ಲಿ ಹೊಸ ಕಚೇರಿ ಕಾಮಗಾರಿ ನಡೆಸಲಾಗುತ್ತಿದೆ. ಇವೆರಡು ಕೊಠಡಿಗಳ ಹೊರತಾಗಿ ಉಳೆದೆಲ್ಲವೂ ಪಾಳು ಬಿದ್ದಿದ್ದು ಸರ್ಕಾರದ ಹಣ ಪೋಲಾಗುತ್ತಿದೆ ಅನ್ನೋದು ಸಾರ್ವಜನಿಕರ ಮಾತಾಗಿದೆ.

ಶಾಸಕರ ಕೊಠಡಿಗೂ ಗ್ರಹಣ : ಇದೇ ಕಟ್ಟಡದಲ್ಲಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಒಂದೂವರೆ ವರ್ಷದಿಂದ ಈ ನಿರ್ಮಾಣ ಕಾರ್ಯ ನಡೆಯುತ್ತಿದೆ. ಶಾಸಕರು ಅನಿವಾರ್ಯವಾಗಿ ಒಂದೆಡೆ ಜಿಲ್ಲಾ ಉಸ್ತುವಾರಿ ಸಚಿವರ ಕೊಠಡಿಯಲ್ಲಿಯೇ ಕಾಲ ಕಳೆಯುತ್ತಿದ್ದರೆ, ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾ ಕೇಂದ್ರದಲ್ಲಿಯೇ ಕೊಠಡಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರನ್ನು ಕೇಳಿದರೆ, ನಮ್ಮ ಸರ್ಕಾರ ಈ ಹಿಂದೆ ಅನುದಾನ ನೀಡಿ ಸಿದ್ದರಾಮಯ್ಯ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ನಂತರ ಬಂದ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದೀಗ ನಾವು ಅದನ್ನು ಸರಿಪಡಿಸಿ ಸದ್ಯದಲ್ಲಿಯೇ ಉದ್ಘಾಟನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಮತ್ತೆ ಮರಳುಗಾರಿಕೆ ಬಂದ್​​: ಮನೆ, ಕಟ್ಟಡ ನಿರ್ಮಾಣಕ್ಕೆ ಸಂಕಷ್ಟ - SAND PROBLEM

ETV Bharat Logo

Copyright © 2025 Ushodaya Enterprises Pvt. Ltd., All Rights Reserved.