ETV Bharat / state

'ಕುರಿ ಕಾಯೋದೆ ಭೇಷ್​​​' ಎಂದ ಹನುಮಂತ : ಬಿಗ್​ ಬಾಸ್​ ವಿಜೇತನಿಗೆ ಹೂಮಳೆ ಸ್ವಾಗತ; ಅದ್ಧೂರಿ ಮೆರವಣಿಗೆ - BBK WINNER HANUMANTHA

ಬಿಗ್​ಬಾಸ್​ ಸೀಸನ್​ 11ರ ವಿಜೇತನಾದ ಬಳಿಕ ಮೊದಲನೇ ಬಾರಿ ತನ್ನೂರಿಗೆ ಆಗಮಿಸಿದ ಹನುಮಂತನಿಗೆ ಭರ್ಜರಿ ಸ್ವಾಗತ ಕೋರಲಾಗುತ್ತಿದೆ.

BBK 11 WINNER  GRAND WELCOME FOR HANUMANTHA  HAVERI  ಬಿಗ್​ಬಾಸ್​ ಸೀಸನ್​ 11ರ ವಿಜೇತ ಹನುಮಂತ
'ಕುರಿ ಕಾಯೋದೆ ಭೇಷ್​​​' ಎಂದ ಹನುಮಂತ: ಸ್ವಗ್ರಾಮದಲ್ಲಿ ಹೂವಿನ ಮಳೆ; ತೆರೆದ ಕಾರಿನಲ್ಲಿ ಮೆರವಣಿಗೆ (ETV Bharat)
author img

By ETV Bharat Karnataka Team

Published : Jan 30, 2025, 3:08 PM IST

ಹಾವೇರಿ: ಬಿಗ್​ಬಾಸ್​ ಸೀಸನ್​ 11ರ ವಿಜೇತ ಹನುಮಂತ ಲಮಾಣಿ ಬುಧವಾರ (ಜ.29) ರಾತ್ರಿ ಸ್ವಗ್ರಾಮ ಸವಣೂರು ತಾಲೂಕು ಚಿಲ್ಲೂರು ಬಡ್ನಿಯಲ್ಲಿರುವ ಮನೆಗೆ ಆಗಮಿಸಿದ್ದಾರೆ.

ಹನುಮಂತ ತಮ್ಮ ಸಂಬಂಧಿಕರ ಮನೆಯಲ್ಲಿದ್ದು, ಅಭಿಮಾನಿಗಳು ಬಿಗ್​ಬಾಸ್​ ವಿಜೇತನನ್ನು ಹುಡುಕಿಕೊಂಡು ಬಂದು ಶುಭಾಶಯ ಕೋರುತ್ತಿದ್ದಾರೆ.

'ಕುರಿ ಕಾಯೋದೆ ಭೇಷ್​​​' ಎಂದ ಹನುಮಂತ : ಸ್ವಗ್ರಾಮದಲ್ಲಿ ಹೂವಿನ ಮಳೆ; ತೆರೆದ ಕಾರಿನಲ್ಲಿ ಮೆರವಣಿಗೆ (ETV Bharat)

ಬಿಗ್​ಬಾಸ್​ ಮನೆಯಲ್ಲ ದೇವರ ಗುಡಿ : "ಬಿಗ್​ಬಾಸ್​ ಮನೆಯಲ್ಲಿದ್ದಾಗ ಊರಿನ ಸ್ನೇಹಿತರನ್ನು ಮಿಸ್​​​ ಮಾಡಿಕೊಳ್ಳುತ್ತಿದ್ದೆ ಎಂದ ಹನುಮಂತು ಈಗ ಬಿಗ್​​ಬಾಸ್​ ಮನೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮೂರು ತಿಂಗಳು ಅವರೊಡನೆ ಇದ್ದು ಅಲ್ಲಿಗೆ ಹೊಂದಿಕೊಂಡಿದ್ದೆ. ಅದು ಮನೆ ಅಲ್ಲ ದೇವರ ಗುಡಿ" ಎಂದು ಬಣ್ಣಿಸಿದರು.

ಹನುಮನ ಮಾತು : "ಬಿಗ್​ಬಾಸ್​ ಗೆಲ್ಲುವ ವಿಶ್ವಾಸವಿರಲಿಲ್ಲ. ಇದು ನನ್ನ ಒಬ್ಬನ ಗೆಲುವಲ್ಲ, ಇದು ಕರುನಾಡಿನ ಗೆಲುವು. ನನ್ನ ಜೊತೆ ಘಟಾನುಘಟಿ ಸ್ಪರ್ಧಿಗಳಿದ್ದರು. ಆದರೂ ಸಹ ನನಗೆ ಬಿಗ್​ಬಾಸ್​ ಕಿರೀಟ ಒಲಿದು ಬಂದಿರುವುದು ಸಂತಸವಾಗಿದೆ. ನನ್ನೂರಿನ ದೇವ್ರು ಆಂಜನೇಯ, ಸಂತ ಶಿಶುನಾಳ ಶರೀಫರು ನನ್ನ ಹಿಂದಿನ ಶಕ್ತಿ. ಅವರ ಆಶೀರ್ವಾದದಿಂದ ನಾನು ಗೆದ್ದು ಬಂದಿದ್ದೇನೆ. ನನಗೆ ವಿಜೇತರಾದ ಮೇಲೆ ಮಾಧ್ಯಮಗಳ ಕಾಟ ನೋಡಿದರೆ ನಾನು ಕುರಿಕಾಯಿಸಿಕೊಂಡಿರುವ ವೇಳೆ ಇದ್ದ ಸಂಭ್ರಮವೇ ಹೆಚ್ಚು. ಅಲ್ಲಿ ನಾನು ಒಬ್ಬನೇ ಇರುತ್ತಿದ್ದೆ. ಅದೇ ನೀವು(ಮಾಧ್ಯಮದವರು) ಬಂದು ಬಂದು ಪ್ರಶ್ನೆ ಕೇಳುವಾಗ ಏನೋ ಮರಾಯ ಇದು, ಕುರಿ ಕಾಯೋದೇ ಭೇಷ್​ ಇತ್ತು ಅನಿಸ್ತದ" ಎಂದಿದ್ದಾರೆ.

ಇದೇ ವೇಳೆ ಮದುವೆಯಾಗುವ ವಿಷಯದ ಬಗ್ಗೆ ಮಾತನಾಡಿದ ಹನುಮಂತು, "ಎಲ್ಲರಿಗೂ ತಿಳಿಸಿ ಶಾಸ್ತ್ರೋಕ್ತವಾಗಿ ಮದುವೆಯಾಗುತ್ತೇನೆ ಎಂದು ತಿಳಿಸಿದರು.

ಇಂದು ಮೆರವಣಿಗೆ; ಸವಣೂರು ಪಟ್ಟಣದಲ್ಲಿ ಹನುಮಂತ ಅವರನ್ನು ತೆರೆದ ವಾಹನದ ಮೂಲಕ ಮೆರವಣಿಗೆ ಮಾಡಲಾಗುತ್ತಿದೆ. ಸವಣೂರು ನಗರದ ಬ್ರಹ್ಮಲಿಂಗೇಶ್ವರ ದೇವಸ್ಥಾನದಿಂದ ಆರಂಭವಾಗುವ ಮೆರವಣಿಗೆ ಹನುಮಂತು ಮನೆ ಇರುವ ಚಿಲ್ಲೂರು ಬಡ್ನಿವರಗೂ ಸಾಗಲಿದೆ. ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಆಗಮಿಸಿದ್ದು, ಪುಷ್ಪದ ಮಳೆಯನ್ನೇ ಹರಿಸುತ್ತಿದ್ದಾರೆ.

ಇದನ್ನೂ ಓದಿ: ಕುರಿ ಕಾಯುವ ಹಳ್ಳಿ ಹೈದನ ಕೈಯಲ್ಲಿ ಬಿಗ್​ ಬಾಸ್​ ಟ್ರೋಫಿ : ಇದು ಸರಳ ವ್ಯಕ್ತಿತ್ವಕ್ಕೆ ಸಿಕ್ಕ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.