ಕಾಡುತ್ತಿದ್ದ ಅನಾರೋಗ್ಯಕ್ಕೆ ಯೋಗದ ಮದ್ದು.. ಅನಾಯಾಸವಾಗಿ ಯೋಗಾಸನ ಮಾಡ್ತಾರೆ ಬಾಗಲಕೋಟೆಯ ಈ ಅಜ್ಜಿ! - ಯೋಗ ದಿನಾಚರಣೆ
🎬 Watch Now: Feature Video
ಬಾಗಲಕೋಟೆ: ಇಂದಿನ ಯುವ ಜನಾಂಗ ಯೋಗಕ್ಕಿಂತಲೂ ಮೊಬೈಲ್ ಬಗ್ಗೆ ಇನ್ನಿಲ್ಲದ ಪ್ರೀತಿ ಹೊಂದಿದ್ದಾರೆ. ಇದರಿಂದ ಯುವ ಪೀಳಿಗೆ ಅನೇಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದ್ರೆ, ಇಲ್ಲಿಯೊಬ್ಬರು ಅಜ್ಜಿ ಯೋಗವೇ ಜೀವನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಳಿ ವಯಸ್ಸಿನಲ್ಲೂ ಈ ಅಜ್ಜಿ ಹದಿಹರೆಯದವರಂತೆ ವಿವಿಧ ಯೋಗ ಭಂಗಿಗಳನ್ನು ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಹೌದು, ಈ ಅಜ್ಜಿಗೆ ಯೋಗ ಮಾಡೋದು ಅಂದ್ರೆ ನೀರು ಕುಡಿದಷ್ಟೇ ಸರಳ. 72ರ ವಯಸ್ಸಿನಲ್ಲಿ ನಿತ್ಯ ತಪ್ಪದೇ ಯೋಗ ಮಾಡುವ ಮೂಲಕ ರೋಗದಿಂದ ದೂರ ಉಳಿದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದ ದ್ರಾಕ್ಷಾಯಿಣಿ ವಡಿಗೇರಿ ಎಂಬುವರು ಇಳಿ ವಯಸ್ಸಿನಲ್ಲಿಯೂ ಯೋಗ ಸಾಧಕಿಯಾಗಿದ್ದಾರೆ. ಪ್ರತಿದಿನ ಬೆಳಗ್ಗೆ 5.30ಕ್ಕೆ ವಾಯು ವಿಹಾರಕ್ಕೆ ಹೋಗುವ ಇವರು, ವಾಕಿಂಗ್ ಜೊತೆಗೆ ರಸ್ತೆ ಬದಿಯಲ್ಲಿಯೇ ಯೋಗಾಭ್ಯಾಸ ಮಾಡುವ ರೂಢಿಯನ್ನು ಬೆಳೆಸಿಕೊಂಡಿದ್ದಾರೆ. ಯೋಗದ ವಿವಿಧ ಆಸನಗಳನ್ನು ಬಹಳಷ್ಟು ಸುಲಭವಾಗಿ ಮಾಡುವ ಮೂಲಕ ಯೋಗಪಟುಗಳನ್ನು ಸಹ ಅಚ್ಚರಿಗೊಳಿಸಿದ್ದಾರೆ.
ಅಜ್ಜಿ ಯೋಗ ಮಾಡುವುದನ್ನು ಆರಂಭಿಸಿದ ನಂತರ, ಸಂಪೂರ್ಣ ಆರೋಗ್ಯವಾಗಿ ಜೀವನ ಸಾಗಿಸುತ್ತಿದ್ದಾರೆ. ಪ್ರತಿದಿನ ತಪ್ಪದೇ ಯೋಗ ಮಾಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ. ಪದ್ಮಾಸನ, ಚಕ್ರಾಸನ, ಮುದ್ರಾಸನ, ಪಕ್ಷಿ ಕ್ರಿಯಾ, ಪಶ್ಚಿಮ ಉತ್ಥಾಸನ ಸೇರಿದಂತೆ ವಿವಿಧ ಆಸನಗಳನ್ನು ಮಾಡುವ ಮೂಲಕ ಯುವ ಜನತೆಗೆ ಸ್ಫೂರ್ತಿಯಾಗಿದ್ದಾರೆ.
ಇದನ್ನೂ ಓದಿ: World Yoga Day: ಗುರುವಿಲ್ಲದೇ ಯೋಗ ಕಲಿತ ಆಧುನಿಕ ಏಕಲವ್ಯ ಯುವಕ.. 85ಕ್ಕೂ ಅಧಿಕ ಆಸನಗಳು ಸುಲಲಿತ